Adult Content: ಮಕ್ಕಳ ಅಶ್ಲೀಲ ವೀಡಿಯೋ ನೋಡುವುದು ಅಪರಾಧವಲ್ಲ – ಮದ್ರಾಸ್ ಹೈಕೋರ್ಟ್!!
Adult Content: ಖಾಸಗಿಯಾಗಿ ಮಕ್ಕಳ ಅಶ್ಲೀಲ ವೀಡಿಯೋಗಳನ್ನು(Adult Content) ಡೌನ್‌ಲೋಡ್(Download)ಮಾಡಿಕೊಂಡು ನೋಡುವುದು ಪೋಕ್ಸೋ ಕಾಯ್ದೆ ಹಾಗೂ ಐಟಿ ಆ್ಯಕ್ಟ್ ಅಡಿ ಅಪರಾಧವಲ್ಲ ಎಂದು ಮದ್ರಾಸ್ ಹೈಕೋರ್ಟ್ (Madras High court)ಸ್ಪಷ್ಟಪಡಿಸಿದೆ.
ಅಂಬತ್ತೂರಿನ ವ್ಯಕ್ತಿಯೊಬ್ಬರು ಮಕ್ಕಳ ಅಶ್ಲೀಲ ವಿಡಿಯೋ ಡೌನ್‌ಲೋಡ್ ಮಾಡಿಕೊಂಡು ನೋಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರ ವಿರುದ್ಧ ಕೇಸ್ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಸಂದರ್ಭ ಕೋರ್ಟ್‌ಗೆ ಹಾಜರಾಗಿದ್ದ ವ್ಯಕ್ತಿ ನಾನು ಅಶ್ಲೀಲ ವಿಡಿಯೋ ನೋಡಿರುವುದನ್ನು ಒಪ್ಪಿಕೊಂಡಿದ್ದು ಆದರೆ ಮಕ್ಕಳ ವಿಡಿಯೋಗಳನ್ನು ನೋಡಿಲ್ಲವೆಂದು ತಿಳಿಸಿದ್ದಾರೆ. ಈ ವ್ಯಸನದಿಂದ ಹೊರ ಬರಲು ಕೌನ್ಸಿಲಿಂಗ್ ಪಡೆದುಕೊಳ್ಳುತ್ತಿರುವ ಬಗ್ಗೆ ವ್ಯಕ್ತಿ ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.
ಪ್ರಕರಣ ಆಲಿಸಿದ ಮದ್ರಾಸ್ ಹೈಕೋರ್ಟ್, ಮಕ್ಕಳ ಅಶ್ಲೀಲ ವಿಡಿಯೋ ನೋಡುವುದು ಪೋಕೋ ಕಾಯ್ದೆ ಮತ್ತು ಐಟಿ ಆ್ಯಕ್ಟ್ ಅಡಿ ಬರುವುದಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಕೇಸ್ ಅನ್ನು ರದ್ದುಗೊಳಿಸಿದೆ. ವೈಯಕ್ತಿಕವಾಗಿ ಅಶ್ಲೀಲ ವಿಡಿಯೋಗಳನ್ನ ನೋಡುವುದು ಅಪರಾಧವಲ್ಲ ಎಂದು ಕೂಡ ಕೋರ್ಟ್ ಹೇಳಿದೆ ಎನ್ನಲಾಗಿದೆ.
ಮಕ್ಕಳ ಅಶ್ಲೀಲ ವಿಡಿಯೋ ಡೌನ್‌ಲೋಡ್ ಮಾಡಿಕೊಂಡು ನೋಡುವುದು ಪೋಕೋ ಮತ್ತು ಐಟಿ ಆ್ಯಕ್ಟ್ ಅಡಿ ಬರುವುದಿಲ್ಲ. ಆದರೆ, ಪೋಕ್ಸ್ ಮತ್ತು ಐಟಿ ಆ್ಯಕ್ಟ್ ಅಡಿ ಬರಲು ಆರೋಪಿಯಾದವನು ಮಕ್ಕಳನ್ನು ಅಶ್ಲೀಲ ಕೆಲಸಗಳಿಗೆ ಬಳಸಿರಬೇಕು. ಇಲ್ಲವೇ ಆಗ ತೆಗೆದಂತಹ ಫೋಟೋ, ವಿಡಿಯೋಗಳನ್ನು ಬೇರೆಯವರಿಗೆ ಶೇರ್ ಮಾಡಿದ್ದರೆ ಇಲ್ಲವೇ ಪಬ್ಲಿಶ್ ಮಾಡಿದ್ದರೆ ಅದು ಅಪರಾಧವಾಗಲಿದೆ ಎಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ ಎಂದು ತಿಳಿದುಬಂದಿದೆ.