Udupi News: ಉಡುಪಿ ಶ್ರೀ ಕೃಷ್ಣ ಮಠಕ್ಕೆ ಬಂದು ಬಾವಿಗೆ ಬಿದ್ದ ವ್ಯಕ್ತಿ!!

Share the Article

Udupi: ಉಡುಪಿ ಶ್ರೀಕೃಷ್ಣ ಮಠಕ್ಕೆ ಬಂದಿದ್ದ ಭಕ್ತನೋರ್ವ ಬಾವಿಗೆ ಬಿದ್ದ ಘಟನೆಯೊಂದು ನಡೆದಿದೆ. ಸಂತೋಷ್‌ ಎಂಬುವವರು ಬಾವಿಗೆ ಬಿದ್ದಿದ್ದು, ಇವರು ಬಾಗಲಕೋಟೆ ಮೂಲದವರೆಂದು ತಿಳಿದು ಬಂದಿದೆ. ಈ ಘಟನೆ ಗುರುವಾರ (ನಿನ್ನೆ) ಸಂಜೆ ನಡೆದಿದೆ.

ಗುರುವಾರ ಶೀರಿಬೀಡು ಬಳಿ ಆವರಣದಲ್ಲಿರುವ ಬಾವಿ ಬಳಿ ಕುಳಿತಿದ್ದ ಇವರು ಆಯತಪ್ಪಿ ಬಾವಿಗೆ ಉರುಳಿ ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಬಾವಿಗೆ ಬಿದ್ದ ವ್ಯಕ್ತಿಯ ರಕ್ಷಣೆ ಮಾಡಿದ್ದಾರೆ. ಬಾವಿಯಲ್ಲಿ ನೀರು ಕಡಿಮೆ ಇದ್ದ ಕಾರಣ ನಿತ್ಯಾನಂದ ಒಳಕಾಡು ಅವರು ಬಾವಿಗೆ ಹಗ್ಗ ಇಳಿಬಿಟ್ಟು ಸ್ಥಳೀಯರ ಸಹಾಯದಿಂದ ಮೇಲಕ್ಕೆತ್ತಿದ್ದಾರೆ. ಸಂತೋಷ್‌ ಗಾಯಗೊಂಡಿದ್ದು ಆಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಇದನ್ನೂ ಓದಿ: Ram Mandir inauguration: ರಾಮಮಂದಿರ ಪ್ರತಿಷ್ಠಾಪನೆಗೆ ಶೃಂಗೇರಿ ಪೀಠದಿಂದ ಅಸಮಾಧಾನ- ಮಠದ ವತಿಯಿಂದ ಸ್ಪಷನೆ!!!

Leave A Reply