Old Pension: ನೌಕರರಿಗೆ ರಾಜ್ಯ ಸರ್ಕಾರದಿಂದ ಬಿಗ್ ಅಪ್ಡೇಟ್; ಹಳೆ ಪಿಂಚಣಿ ಯೋಜನೆಗೆ ಗ್ರೀನ್ ಸಿಗ್ನಲ್!!
Old Pension:ರಾಜ್ಯ ಸರ್ಕಾರಿ ನೌಕರರಿಗೆ ಸಿಎಂ ಸಿದ್ದರಾಮಯ್ಯನವರು(CM Siddaramayya)ಗುಡ್ ನ್ಯೂಸ್ ನೀಡಿದ್ದಾರೆ. 01-04-2006ಕ್ಕಿಂತ ಮೊದಲು ರಾಜ್ಯ ಸರ್ಕಾರದ ಅಧಿಸೂಚನೆಯ ಅನುಸಾರ ನೇಮಕಾತಿ ಹೊಂದಿರುವ ನೌಕರರು ಹಳೆ ಪಿಂಚಣಿ(Old Pension) ಯೋಜನೆಯನ್ನು ಪರಿಗಣಿಸಲು ಸಿಎಂ ಸಿದ್ದರಾಮಯ್ಯ ಅನುಮೋದನೆ ನೀಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Killer Mother: ತಾಯಿಯೇ ಮಗುವನ್ನು ಕೊಂದ ಪ್ರಕರಣ – 12 ಗಂಟೆ ಜರ್ಮನಿಯ ರೋಚಕ ಅನುಭವ ಬಿಚ್ಚಿಟ್ಟ ಕ್ಯಾಬ್ ಡ್ರೈವರ್!!
ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಬಹುದಿನಗಳ ಬೇಡಿಕೆಯಾದ 31-03-2006 ಕ್ಕಿಂತ ಮೊದಲು ರಾಜ್ಯ ಸರ್ಕಾರದ ಅಧಿಸೂಚನೆಯನ್ವಯ ನೇಮಕಾತಿ ಹೊಂದಿದ್ದು ಅದೇ ರೀತಿ 01-04-2006ರ ನಂತರ ಕೆಲಸಕ್ಕೆ ಹಾಜರಾಗಿ ಪ್ರಸ್ತುತ ಎನ್.ಪಿ.ಎಸ್ ಯೋಜನೆ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸರ್ಕಾರಿ ನೌಕರರಿಗೆ ಓ.ಪಿ.ಎಸ್ ನೌಕರರೆಂದು ಪರಿಗಣಿಸುವುದಕ್ಕೆ ಅನುಮೋದನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಈ ಕಡತ ಆರ್ಥಿಕ ಇಲಾಖೆಯಲ್ಲಿದ್ದು, ಶೀಘ್ರದಲ್ಲಿಯೇ ಆದೇಶ ಹೊರಬೀಳಲಿದೆ ಎನ್ನಲಾಗಿದೆ.