Aadhar Update: ಇನ್ನು ಮುಂದೆ ಆಧಾರ್‌ ಕಾರ್ಡ್‌ನಲ್ಲಿ ಈ ಒಂದು ವಿಷಯವನ್ನು ಮಾತ್ರ ಅಪ್ಡೇಟ್‌ ಮಾಡಲು ಸಾಧ್ಯ!!!

Aadhar Update: ಆಧಾರ್ ಕಾರ್ಡ್ (Aadhar Card)ಬಹಳ ಮುಖ್ಯ ದಾಖಲೆಯಾಗಿದೆ. ಆಧಾರ್ ಕಾರ್ಡ್ (Aadhar Card)ಅನ್ನು ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು. ವ್ಯಕ್ತಿಯ ಗುರುತು ಮತ್ತು ವಿಳಾಸವನ್ನು ಪರಿಶೀಲಿಸಲು ಕಾರ್ಡ್ ಸಹಕರಿಸುತ್ತದೆ.

 

ಆಧಾರ್ ಕಾರ್ಡ್ ಸರ್ಕಾರಿ ಯೋಜನೆಯ, ಬ್ಯಾಂಕಿನಲ್ಲಿ ಖಾತೆ ತೆರೆಯಲು ಬೇಕಾಗುತ್ತದೆ. ಆಧಾರ್ ಕಾರ್ಡ್‌ (Aadhaar Card) ಭಾರತದಲ್ಲಿ ಹೆಚ್ಚಿನ ಮೌಲ್ಯ ಪಡೆದುಕೊಂಡಿದೆ. ಆಧಾರ್ ಕಾರ್ಡನ್ನು ಮುಖ್ಯ ಗುರುತಿನ ಚೀಟಿಯಾಗಿ ಬಳಕೆ ಮಾಡಲಾಗುತ್ತಿದೆ. ಆಧಾರ್ ಕಾರ್ಡ್ ತಿದ್ದುಪಡಿಗೆ ಅವಕಾಶವಿದ್ದು, ಆಧಾರ್ ಕಾರ್ಡ್ನಲ್ಲಿ ಮೊಬೈಲ್ ಸಂಖ್ಯೆ ಮತ್ತು ವಿಳಾಸವನ್ನು ನೀವು ಎಷ್ಟು ಬಾರಿ ಬೇಕಾದರೂ ನವೀಕರಿಸಬಹುದಾಗಿದೆ.

 

ಆದರೆ, ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ನೀವು ಆಧಾರ್ ಕಾರ್ಡ್ನಲ್ಲಿ ಒಮ್ಮೆ ಮಾತ್ರ ನಿಮ್ಮ ಹುಟ್ಟಿದ ದಿನಾಂಕವನ್ನು ನವೀಕರಿಸಬಹುದು. ಆಧಾರ್ ಕಾರ್ಡ್ನಲ್ಲಿ ಹುಟ್ಟಿದ ದಿನಾಂಕವನ್ನು ಒಂದಕ್ಕಿಂತ ಹೆಚ್ಚು ಬಾರಿ ನವೀಕರಿಸಲು ಅವಕಾಶವಿಲ್ಲ. ಆಧಾರ್ ಕಾರ್ಡ್ ಮಾಡುವಾಗ, ಹೆಸರನ್ನು ಭರ್ತಿ ಮಾಡುವಾಗ ನೀವು ಯಾವುದೇ ತಪ್ಪು ಮಾಹಿತಿಯನ್ನು ನಮೂದಿಸಿದರು ಕೂಡ ಹೆಸರನ್ನು ನವೀಕರಿಸಲು ನಿಮಗೆ ಎರಡು ಬಾರಿ ಅವಕಾಶ ಸಿಗುತ್ತದೆ.

Leave A Reply

Your email address will not be published.