School Holiday: ಶಾಲಾ ಕಾಲೇಜುಗಳಿಗೆ ಒಂದು ವಾರ ರಜೆ!!

School Holiday: ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ ಇಲ್ಲಿದೆ. ಶಾಲಾ, ಕಾಲೇಜುಗಳಿಗೆ ಸತತ 7 ದಿನಗಳವರೆಗೆ (School Holiday)ರಜೆ ಘೋಷಣೆ ಮಾಡಲಾಗಿದೆ.

 

 

ಮಕರ ಸಂಕ್ರಾತಿ ಹಬ್ಬದ ಹಿನ್ನೆಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ರಜೆ (Holiday)ನೀಡಲಾಗುತ್ತಿದೆ. ತೆಲಂಗಾಣದಲ್ಲಿ ಇಂದಿನಿಂದ ಹಬ್ಬದ ರಜೆಗಳು ಶುರುವಾಗಿದ್ದು, ಒಂದು ವಾರ ರಜೆ ಸಿಗಲಿದೆ ಎನ್ನಲಾಗಿದೆ. ಅದೇ ರೀತಿ, ಪ್ರದೇಶದಿಂದ ಪ್ರದೇಶಕ್ಕೆ ರಜೆಗಳಲ್ಲಿ ಬದಲಾವಣೆಯಿರಲಿದೆ.ಆಂಧ್ರಪ್ರದೇಶದ RGUKT ಅಡಿಯಲ್ಲಿ ಟ್ರಿಪಲ್ ಐಟಿ ಮತ್ತು ಇಂಟರ್ ಕಾಲೇಜುಗಳಿಗೆ ಇಂದಿನಿಂದ 17 ರವರೆಗೆ ಸಂಕ್ರಾಂತಿ ಹಬ್ಬದ ರಜೆ ಘೋಷಣೆ ಮಾಡಲಾಗಿದೆ.

 

ಎಲ್ಲಾ ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಕಾಲೇಜುಗಳಿಗೆ ರಜೆ ನೀಡದೆ ತರಗತಿ ನಡೆಸಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವ ಕುರಿತು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಅದೇ ರೀತಿ, ಕರ್ನಾಟಕದ ಶಾಲೆಗಳಿಗೆ ಸತತ ಮೂರು ದಿನಗಳ ಕಾಲ ಶಾಲಾ ವಿದ್ಯಾರ್ಥಿಗಳಿಗೆ ರಜೆ ಸಿಗಲಿದೆ. ಶನಿವಾರ, ಭಾನುವಾರದ ನಡುವೆ ಸಂಕ್ರಾತಿಯ ಹಿನ್ನೆಲೆ ಸೋಮವಾರ ರಜೆಯಿದ್ದು, ಮೂರು ದಿನ ರಜೆ ಸಿಗಲಿದೆ.

Leave A Reply

Your email address will not be published.