Housing Scheme: ಕನಸಿನ ಸೂರು ಕಟ್ಟಲು ನಿಮಗಿದೋ ಸುವರ್ಣಾವಕಾಶ;

ರಾಜೀವ್ ಗಾಂಧಿ ವಸತಿ ಯೋಜನೆಗೆ ಇಂದೇ ನೋಂದಣಿ ಮಾಡಿ ಸ್ವಂತ ಸೂರನ್ನು ನಿಮ್ಮದಾಗಿಸಿಕೊಳ್ಳಿ!!

Housing Scheme: ಕನಸಿನ ಮನೆಯನ್ನು ಹೊಂದುವ ಅಭಿಲಾಷೆ ಹೊತ್ತವರಿಗೆ ಗುಡ್ ನ್ಯೂಸ್ ಇಲ್ಲಿದೆ ನೋಡಿ!!ಸರ್ಕಾರ ಈಗ ಸ್ವಂತ ಮನೆಯನ್ನು ಕಡಿಮೆ ವೆಚ್ಚದಲ್ಲಿ ನೀಡಲು ಮುಂದಾಗಿದ್ದು, 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಗೆ (Housing Scheme) ಚಾಲನೆ ನೀಡಿದೆ. ಈ ಯೋಜನೆಗೆ ನೋಂದಣಿ ಪ್ರಕ್ರಿಯೆ ಕೂಡ ಆರಂಭವಾಗಿದ್ದು, ಅರ್ಹತೆಯುಳ್ಳವರು ಅಗತ್ಯ ದಾಖಲೆಗಳೊಂದಿಗೆ ತಮ್ಮ ಕನಸಿನ ಸೂರನ್ನು ಪಡೆದುಕೊಳ್ಳಬಹುದಾಗಿದೆ.

 

 

ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ 5 ತಾಲೂಕುಗಳಲ್ಲಿ ಬರುವ ಸರ್ಕಾರಿ ಜಮೀನುಗಳಲ್ಲಿ ರಾಜೀವ್‌ ಗಾಂಧಿ ವಸತಿ ನಿಗಮದ ವತಿಯಿಂದ (Karnataka Rajiv Gandhi Housing Scheme)ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ ಅಡಿಯಲ್ಲಿ 2 ಬಿಎಚ್‌ಕೆಯ ಒಟ್ಟು 8096 ಫ್ಲಾಟ್/ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಈ ಮನೆಗಳನ್ನು ಶೇರ್‌ ವಾಲ್‌ (Shear Wall) ತಂತ್ರಜ್ಞಾನದ ಮೂಲಕ ನಿರ್ಮಿಸಲಾಗಿದೆ. ಇವುಗಳಲ್ಲಿ ಮೊದಲ ಹಂತದಲ್ಲಿ 3138 ಫ್ಲಾಟ್/ಮನೆಗಳ ಹಂಚಿಕೆಗಾಗಿ ಆನ್‌ಲೈನ್ ಮೂಲಕ ಅರ್ಜಿಯನ್ನು ಆಹ್ವಾನ ಮಾಡಲಾಗಿದೆ.

 

ಅರ್ಜಿ ಸಲ್ಲಿಸುವ ವಿಧಾನ:

# ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಕರ್ನಾಟಕ ಸರ್ಕಾರದ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ಮಂಡಳಿಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕು.

# ಇದಾದ ಬಳಿಕ ನಿಮಗೆ ನಿಮ್ಮ ಕನಸಿನ ಮನೆ ಬೇಕೆ ಎಂಬ ಆಯ್ಕೆ ಕಾಣಿಸಲಿದ್ದು, ಅಲ್ಲಿ ಅರ್ಜಿ ಸಲ್ಲಿಸಿ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿಕೊಳ್ಳಿ.

# ಇದಾದ ಬಳಿಕ ನಿಮ್ಮ ವಿಧಾನಸಭಾ ಕ್ಷೇತ್ರ ಹಾಗೂ ಪ್ರದೇಶವನ್ನು ಆಯ್ಕೆ ಮಾಡಬೇಕು.

# ಅಲ್ಲಿ ತಾಲೂಕು, ಹೋಬಳಿ ಹೀಗೆ ಕೇಳಲಾದ ಎಲ್ಲ ವಿವರಗಳನ್ನು ಆಯ್ಕೆ ಮಾಡಬೇಕು. ಹೀಗೆ ಎಲ್ಲ ವಿವರಗಳನ್ನು ಆಯ್ಕೆ ಮಾಡಿದ ಮೇಲೆ ನಿಮ್ಮ ಅರ್ಜಿಯನ್ನು ಸಲ್ಲಿಸಬಹುದು.

# ಫ್ಲಾಟ್ /ಮನೆಯನ್ನು ಪಡೆಯಲು ಅರ್ಹತೆ ಹೊಂದಿದವರು ಮೂರು ಹಂತದಲ್ಲಿ ಹಣವನ್ನು ಪಾವತಿ ಮಾಡಬೇಕಾಗಿದ್ದು, ಕಾಲಮಿತಿಯನ್ನು ಕೂಡ ನಿಗದಿಪಡಿಸಲಾಗಿದೆ.

 

ಬೆಂಗಳೂರು ನಗರದಲ್ಲಿ ಸರ್ಕಾರದ ವತಿಯಿಂದ ಮುಖ್ಯಮಂತ್ರಿಗಳ ಬಹುಮಹಡಿ ಬೆಂಗಳೂರು ವಸತಿ ಯೋಜನೆಯನ್ನು (1 lakh multi storeyed Bangalore housing project) ಪ್ರಾರಂಭ ಮಾಡಲಾಗಿದ್ದು, ಇದರಡಿ 2 ಬಿಎಚ್‌ಕೆ (2BHK ) ಮನೆಗಳನ್ನು ನಿರ್ಮಿಸಲಾಗಿದೆ. ಇದಕ್ಕೆ ಕೇವಲ 14 ಲಕ್ಷ ರೂಪಾಯಿಯನ್ನು ನಿಗದಿ ಮಾಡಲಾಗಿದೆ. ಇದರಲ್ಲಿ .ಎರಡು ಬೆಡ್ ರೂಮ್ ವಿತ್ ಅಟ್ಯಾಚ್ ಬಾತ್‌ ರೂಂ, ಒಂದು ಹಾಲ್ ಮತ್ತು ಒಂದು ಕಿಚನ್ ಇರಲಿದೆ.

 

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

* ಆಧಾರ್ ಕಾರ್ಡ್

* ಜಾತಿ ಪ್ರಮಾಣ ಪತ್ರ ಸಂಖ್ಯೆ

* ಕುಟುಂಬದ ಪಡಿತರ ಚೀಟಿ ಸಂಖ್ಯೆ

* ಕುಟುಂಬದ ಆದಾಯ ಪ್ರಮಾಣ ಪತ್ರ ಸಂಖ್ಯೆ

* ಬೆಂಗಳೂರು ನಗರ ಜಿಲ್ಲೆ, ವ್ಯಾಪ್ತಿಯಲ್ಲಿ ಕನಿಷ್ಠ 1 ವರ್ಷಕ್ಕಿಂತ ಮೇಲ್ಪಟ್ಟು ವಾಸವಾಗಿರುವ ವಾಸ ದೃಢೀಕರಣ ಪತ್ರ ಸಂಖ್ಯೆ

* ಬ್ಯಾಂಕ್ ಖಾತೆ ಸಂಖ್ಯೆ

* ದಿವ್ಯಾಂಗ ಚೇತನ ಗುರುತಿನ ಚೀಟಿ (ಸರ್ಕಾರದ ಅಧಿಕೃತ ಸಂಸ್ಥೆಯಿಂದ ನೀಡಲಾಗುವ ಗುರುತಿನ ಚೀಟಿ)

 

ನೀವು ಈ ಸೌಲಭ್ಯವನ್ನು ಪಡೆಯಲು ಅರ್ಹತೆ ಪರಿಶೀಲಿಸಿ ಎಂದು ಖಾತ್ರಿಯಾಗುತ್ತಿದ್ದಂತೆ ಮೊದಲ ಕಂತಿನಲ್ಲಿ 3 ಲಕ್ಷ ರೂಪಾಯಿಯನ್ನು ಪಾವತಿ ಮಾಡಬೇಕು. ಇನ್ನು ನೀವು ಫ್ಲಾಟ್ ಆಯ್ಕೆ ಮಾಡಿದ 30 ದಿನಗಳೊಳಗೆ ಎರಡನೇ ಕಂತಿನ ಹಣವಾದ 5 ಲಕ್ಷ ರೂಪಾಯಿಯನ್ನು ಪಾವತಿ ಮಾಡಬೇಕಾಗುತ್ತದೆ. ಮೂರನೇ ಕಂತಿನ ಭಾಗವಾದ 6 ಲಕ್ಷ ರೂಪಾಯಿಯನ್ನು ಹಣವನ್ನು ಫ್ಲಾಟ್ ನೋಂದಣಿ ಮಾಡಿಕೊಳ್ಳುವಾಗ ಪಾವತಿ ಮಾಡಬೇಕು ಎಂಬ ನಿಯಮವಿದೆ.

Leave A Reply

Your email address will not be published.