Surrogacy: ಬಾಡಿಗೆ ತಾಯ್ತನ ಕಾಯ್ದೆ ಕುರಿತು ಮಹತ್ವದ ತೀರ್ಮಾನ ಕೈಗೊಳ್ಳಲು ಕೇಂದ್ರ ಸಿದ್ದತೆ!!

Surrogacy: ಕಳೆದ ವರ್ಷ ಬಾಡಿಗೆ ತಾಯ್ತನದ (Surrogacy)ಕಾನೂನಿನಲ್ಲಿ ದಾನಿಗಳ ಗ್ಯಾಮೆಟ್ಸ್- ಅಂದರೆ ಅಂಡಾಣು ಅಥವಾ ಮೊಟ್ಟೆಯ ಜೀವಕೋಶಗಳು ಮತ್ತು ವೀರ್ಯಾಣುಗಳ ಬಳಕೆಯನ್ನು ನಿಷೇಧಿಸಿದ(Ban on Egg Sperms)ತಿದ್ದುಪಡಿಯನ್ನು ಮರುಪರಿಶೀಲಿಸಲಾಗುತ್ತಿರುವ ಕುರಿತು ಕೇಂದ್ರವು(Central Government)ಮಂಗಳವಾರ ಸುಪ್ರೀಂ ಕೋರ್ಟ್‌ಗೆ (Supreme Court)ಮಾಹಿತಿ ನೀಡಿದ್ದು,ಈ ವಿಚಾರವಾಗಿ ಶೀಘ್ರದಲ್ಲೇ ನಿರ್ಧಾರವನ್ನು ಕೈಗೊಳ್ಳುವುದಾಗಿ ವರದಿಗಳು ತಿಳಿಸಿವೆ.

 

ಪೀಠದ ಮುಂದೆ ಹಾಜರಾದ ಹೆಚ್ಚುವರಿ ಎಸ್‌ಜಿ ಐಶ್ವರ್ಯ ಭಾಟಿ, ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು, ಕೇಂದ್ರ ಸರ್ಕಾರವು ದಾನಿಗಳಿಂದ ಗ್ಯಾಮೆಟ್‌ಗಳನ್ನು ಸ್ವೀಕರಿಸಲು ಅರ್ಹ ದಂಪತಿಗಳಿಗೆ ಅವಕಾಶ ನೀಡುವತ್ತ ಕಾಯ್ಗೆಗೆ ತಿದ್ದುಪಡಿ ತರಲಿದೆ ಎಂದು ಹೇಳಿದ್ದಾರೆ. ಇದು ವೈದ್ಯಕೀಯ ಕಾರಣದಿಂದ ಅಂಡೋತ್ಪತ್ತಿ ಮಾಡಲು ಸಾಧ್ಯವಾಗದ ದಂಪತಿಗೆ ಬಾಡಿಗೆ ತಾಯ್ತನ ಪ್ರಕ್ರಿಯೆಯನ್ನು ಹೆಚ್ಚು ಸುಲಭಗೊಳಿಸುತ್ತದೆ ಎಂದು ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

Leave A Reply

Your email address will not be published.