COPRA MSP: ಕೊಬ್ಬರಿ ಖರೀದಿಗೆ ಕೇಂದ್ರದಿಂದ ಗ್ರೀನ್ ಸಿಗ್ನಲ್: ರೈತರೇ ಗಮನಿಸಿ, ನೋಂದಣಿಗೆ ಜನವರಿ 20 ಕೊನೆಯ ದಿನ!!

Copra MSP: ಕೇಂದ್ರದಿಂದ ರೈತರಿಗೆ ಭರ್ಜರಿ ಗುಡ್ ನ್ಯೂಸ್(Good News)ಸಿಕ್ಕಿದೆ. ರಾಜ್ಯದ ಈ 8 ಜಿಲ್ಲೆಗಳ ರೈತರಿಗೆ ಖುಷಿಯ ಸುದ್ದಿ ಹೊರಬಿದ್ದಿದೆ. ಕೇಂದ್ರ ಸರಕಾರವು ರಾಜ್ಯದ 8 ಜಿಲ್ಲೆಗಳಿಂದ ಗರಿಷ್ಠ ಬೆಂಬಲ ಬೆಲೆ(MSP)ನೀಡಿ ಕೊಬ್ಬರಿ(Copra)ಖರೀದಿಗೆ ಮುಂದಾಗಿದೆ.

 

ಕೇಂದ್ರ ಸರಕಾರದ (Central Government)ಬೆಂಬಲ ಬೆಲೆ(MSP)ಯೋಜನೆಯಡಿ ರಾಜ್ಯದ ರೈತರಿಂದ ಕೊಬ್ಬರಿ ಖರೀದಿಗೆ ಸರಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ಸಹಕಾರ ಇಲಾಖೆಯು ಕೂಡಲೇ ರೈತರು ಬೆಂಬಲ ಪಡೆಯಲು ನೋಂದಣಿ ಮಾಡಿಕೊಳ್ಳಲು 8 ಜಿಲ್ಲೆಗಳ ಜಿಲ್ಲಾಡಳಿತಗಳಿಗೆ ಸೂಚನೆ ನೀಡಿದೆ. ಇದರಂತೆ ತುಮಕೂರು, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ಮಂಡ್ಯ, ಮೈಸೂರು, ದಕ್ಷಿಣ ಕನ್ನಡ ಮತ್ತು ಚಾಮರಾಜನಗರ ಜಿಲ್ಲೆಗಳ ರೈತರಿಂದ ಹೆಸರು ನೋಂದಣಿ ಮಾಡಿಕೊಳ್ಳುವಂತೆ ಸೂಚನೆ ನೀಡಿದೆ. ಕೇಂದ್ರ ಸರಕಾರವು ಪ್ರತೀ ಕ್ವಿಂಟಾಲ್‌ ಕೊಬ್ಬರಿಗೆ 12 ಸಾವಿರ ರೂಪಾಯಿ ಬೆಂಬಲ ಬೆಲೆಯೊಂದಿಗೆ ರೈತರಿಂದ ಕೊಬ್ಬರಿ ಖರೀದಿ ಮಾಡಲಿದೆ.

 

ಪ್ರತಿ ಎಕರೆಗೆ 6 ಕ್ವಿಂಟಾಲ್‌ ಹಾಗೂ ಪ್ರತಿ ರೈತರಿಂದ ಗರಿಷ್ಠ 20 ಕ್ವಿಂಟಾಲ್‌ ಕೊಬ್ಬರಿಯನ್ನು ಕೇಂದ್ರ ಖರೀದಿ ಮಾಡಲಿದೆ. ಈ ಹೆಸರನ್ನು ರೈತರು ಎನ್‌ಐಸಿ ಸಂಸ್ಥೆಯ ಬೆಂಬಲೆ ಬೆಲೆ ಯೋಜನೆಯಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಜನವರಿ 20 ನೋಂದಣಿ ಮಾಡಿಕೊಳ್ಳಲು ಕೊನೆಯ ದಿನವಾಗಿರುತ್ತದೆ. ಹೀಗಾಗಿ, ರೈತರು ಇದಕ್ಕೂ ಮುಂಚಿತವಾಗಿ ಬೆಂಬಲ ಬೆಲೆ ಯೋಜನೆಯಡಿ ಕೂಡಲೇ ಅರ್ಜಿ ಸಲ್ಲಿಸಬೇಕಾಗುತ್ತದೆ.

Leave A Reply

Your email address will not be published.