Budget 2024: ಪಿಎಂ ಕಿಸಾನ್ ಸ್ಕೀಮ್ ಮಹಿಳೆಯರಿಗೆ ಬಂಪರ್ ಖುಷಿ ಸುದ್ದಿ!!

ಬಜೆಟ್ ನಲ್ಲಿ ಘೋಷಣೆ ಸಾಧ್ಯತೆ!?

Budget 2024: ಕೇಂದ್ರ ಸರ್ಕಾರದ ಕೊನೆಯ ಬಜೆಟ್ ಫೆಬ್ರವರಿ 1ರಂದು (Interim Budget) ಮಂಡನೆಯಾಗಲಿದ್ದು, ಈ ಬಾರಿಯ ಮಧ್ಯಂತರ ಬಜೆಟ್ನಲ್ಲಿ ಪಿಎಂ ಕಿಸಾನ್ ಯೋಜನೆಯ ಮಹಿಳಾ ಫಲಾನುಭವಿಗಳಿಗೆ(PM Kisan Scheme Update In Budget) ಹಣದ ನೆರವನ್ನು ದ್ವಿಗುಣಗೊಳಿಸುವ ಸಂಭವವಿದೆ.

 

ಜನವರಿ 31ರಿಂದ ಫೆಬ್ರುವರಿ 9ರವರೆಗೆ ಬಜೆಟ್ ಅಧಿವೇಶನ ನಡೆಯಲಿದೆ. ಜನವರಿ 31ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ನಲ್ಲಿ ಜಂಟಿ ಅಧಿವೇಶನ(Joint session) ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala seetharaman)ಅವರಿಂದ ಬಜೆಟ್ ಮಂಡನೆಯಾಗಲಿದೆ. ಬಜೆಟ್ ಅಧಿವೇಶನ ಫೆಬ್ರವರಿ 9ರವರೆಗೆ ನಡೆಯಲಿದೆ. ಜನವರಿ 31ರಂದು ಆರಂಭವಾಗಿ 11 ದಿನಗಳ ಅವಧಿಯವರೆಗೆ ಅಧಿವೇಶನ ನಡೆಯುವ ಸಾಧ್ಯತೆಯಿದೆ.

 

ಮೂಲಗಳು ಉಲ್ಲೇಖಿಸಿರುವ ಈ ವರದಿಯ ಅನುಸಾರ, ಮಧ್ಯಂತರ ಬಜೆಟ್ನಲ್ಲಿ ಮಹತ್ವದ ಘೋಷಣೆಯ ಸಾಧ್ಯತೆ ಬಹಳ ಕಡಿಮೆ. ಆದರೆ, ಕೃಷಿಕ ಮಹಿಳೆಯರಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಧನ ಸಹಾಯ ದ್ವಿಗುಣಗೊಳ್ಳಬಹುದು ಎನ್ನಲಾಗುತ್ತಿದೆ. ಪ್ರಸ್ತುತ, ಪಿಎಂ ಕಿಸಾನ್ ಯೋಜನೆಯಲ್ಲಿ ವರ್ಷಕ್ಕೆ 6,000 ರೂ. ನೀಡಲಾಗುತ್ತಿದೆ. ಮಹಿಳಾ ಕೃಷಿಕರಿಗೆ ಇದು 12,000 ರೂಗೆ ಹೆಚ್ಚಾಗಬಹುದು ಎನ್ನಲಾಗಿದೆ. ಜಮೀನು ಮಾಲೀಕತ್ವ ಹೊಂದಿರುವ ಮಹಿಳೆಯರಿಗೆ ಹೆಚ್ಚಿನ ಧನಸಹಾಯ ಸಿಗುವ ಸಾಧ್ಯತೆಯಿದೆ. ಇದನ್ನು ಹೊರತುಪಡಿಸಿ, ಬೇರೆ ಮಧ್ಯಂತರ ಬಜೆಟ್ನಲ್ಲಿ ಪ್ರಮುಖ ನಿರ್ಧಾರ ಬರುವ ಸಂಭವ ಕಡಿಮೆ ಎನ್ನಲಾಗುತ್ತಿದೆ.

Leave A Reply

Your email address will not be published.