Pradhanmantri aawas Yojana:ಸ್ವಂತ ಸೂರು ಕಟ್ಟುವ ಕನಸು ಹೊತ್ತವರಿಗೆ ಗುಡ್ ನ್ಯೂಸ್!!

ಸ್ವಂತ ಮನೆ ಕಟ್ಟಲು ಸಿಗಲಿದೆ 6.5 ಲಕ್ಷ ಸಹಾಯಧನ; ಇಂದೇ ಅರ್ಜಿ ಸಲ್ಲಿಸಿ!!

Pradhanmantri aawas Yojana: ದೇಶದಲ್ಲಿ ವಾಸಿಸುವ ಲಕ್ಷಾಂತರ ಜನರು ಈಗಾಗಲೇ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಗೃಹ ನಿರ್ಮಾಣ (own house) ಮಾಡಿಕೊಂಡಿದ್ದಾರೆ. ಗೃಹ ನಿರ್ಮಾಣ ಮಾಡುವ ಕನಸು ಕಂಡ ಫಲಾನುಭವಿಗಳಿಗೆ ಈಗಲು ಅವಕಾಶವಿದ್ದು, ಅರ್ಜಿ ಸಲ್ಲಿಸಿ (apply for own house) ಸಹಾಯ ಪಡೆದುಕೊಳ್ಳಬಹುದು.

 

ಸರ್ಕಾರದಿಂದ ವಸತಿ ನಿರ್ಮಾಣಕ್ಕೆ ಅನುದಾನ ಸಿಗುವುದರ ಜೊತೆಗೆ ರಾಜ್ಯದಲ್ಲಿ ರಾಜೀವ್ ಗಾಂಧಿ ವಸತಿ ಯೋಜನೆಯ(Rajiv Gandhi aawas Yojana) ಮೂಲಕ ಸಾಕಷ್ಟು ಜನರಿಗೆ ಮನೆ ನಿರ್ಮಾಣ ಮಾಡಿಕೊಡಲಾಗುತ್ತಿದೆ. ಅದರಲ್ಲೂ ಬೆಂಗಳೂರು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ವಸತಿ ಯೋಜನೆ ಅಡಿಯಲ್ಲಿ 7.5 ಲಕ್ಷ ರೂಪಾಯಿಗಳ ಸಾಲ ಸೌಲಭ್ಯ (Loan) ನೀಡಲಾಗುತ್ತಿದೆ. ಮಹಿಳಾ ಅಭ್ಯರ್ಥಿಯ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಆದಾಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ ಅರ್ಜಿದಾರರು ಮಾಜಿ ಅಥವಾ ವಿಶೇಷ ಚೇತನರಾಗಿದ್ದರೆ ಸರಕಾರದಿಂದ ದೃಢೀಕರಣ ಪ್ರಮಾಣ ಪತ್ರ ನೀಡಬೇಕು.

 

 

ಕೇಂದ್ರದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಪ್ರತಿಯೊಬ್ಬರಿಗೆ ಮನೆ ನಿರ್ಮಾಣ ಮಾಡಿಕೊಡುವ ಕನಸು ಕಳೆದ ಎರಡು ವರ್ಷಗಳಿಂದ ಆರ್ಥಿಕ ಸಮಸ್ಯೆಯಿಂದ ಪೂರ್ಣವಾಗಿರಲಿಲ್ಲ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 2024/ನೇ ಸಾಲಿನಲ್ಲಿ ಹೆಚ್ಚು ಪ್ರಯೋಜನ ನೀಡಲು ಮುಂದಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮನೆ ನಿರ್ಮಾಣವನ್ನು ರಾಜೀವ್ ಗಾಂಧಿ ವಸತಿ ಯೋಜನೆಯ ಮೂಲಕ ಮಾಡಲಾಗುತ್ತಿದ್ದು, ಈಗಾಗಲೇ 52,189 ಮನೆ ನಿರ್ಮಾಣ ಮಾಡಲಾಗಿದೆ. ಜನರಿಗೆ ಸ್ವಂತ ಸೂರು ನಿರ್ಮಾಣ ಮಾಡಲು ಕೇಂದ್ರ ಸರ್ಕಾರದಿಂದ 3.5 ಲಕ್ಷ ರೂಪಾಯಿಗಳು ದೊರೆತರೆ ರಾಜ್ಯ ಸರ್ಕಾರದಿಂದ ಮೂರು ಲಕ್ಷ ರೂಪಾಯಿಗಳನ್ನು ಸಹಾಯಧನ (subsidy Loan) ರೂಪದಲ್ಲಿ ನೀಡಲಾಗುತ್ತದೆ.

 

ಅವಾಸ್ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ ಹೀಗಿದೆ:

# ಮೊದಲಿಗೆ, https://ashraya.karnataka.gov.in/ ವೆಬ್ ಸೈಟ್ ಗೆ ಭೇಟಿ ನೀಡಿ ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಿ.

# ಅರ್ಜಿ ಸಲ್ಲಿಸಲು ಅರ್ಜಿ ಫಾರಂನಲ್ಲಿ ಅಗತ್ಯ ಇರುವ ಮಾಹಿತಿಯನ್ನು ಪೂರೈಸಿ ಬಳಿಕ ದಾಖಲೆಗಳ ಸ್ಕ್ಯಾನ್ ಕಾಪಿ ಅಪ್ಲೋಡ್ ಮಾಡಬೇಕು.

# ನಿಮ್ಮ ಅರ್ಜಿ ಸಂದಾಯವಾಗಬೇಕಾದರೆ ಮುಂಗಡ ಹಣವನ್ನು ಆನ್ನೈನ್ ಮೂಲಕವೇ ಪಾವತಿ ಮಾಡಬೇಕು.

 

ಅವಾಸ್ ಯೋಜನೆಯ ಅಡಿಯಲ್ಲಿ ಸ್ವಂತ ಮನೆ ಕಟ್ಟಲು ಅರ್ಹತೆಗಳು:

# ಈ ಮೊದಲೇ ಆವಾಸ್ ಯೋಜನೆಯ ಪ್ರಯೋಜನ ಪಡೆದುಕೊಂಡಿರುವವರು ಇಲ್ಲವೇ ಸ್ವಂತ ಮನೆ ಹೊಂದಿರುವವರು ಅರ್ಜಿ ಸಲ್ಲಿಸುವಂತಿಲ್ಲ.

# ಅವಾಸ್ ಯೋಜನೆಯ ಅರ್ಜಿಯನ್ನು ಮಹಿಳೆಯರು ಮಾತ್ರ ಸಲ್ಲಿಸಬಹುದು.

# ಕೇಂದ್ರ ಸರ್ಕಾರದ 2011ರ ಆರ್ಥಿಕ ಮತ್ತು ಸಾಮಾಜಿಕ ಜನಗಣತಿ ಪಟ್ಟಿಯಲ್ಲಿ ಹೆಸರಿರಬೇಕು.

# 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮಾತ್ರವೇ ಅದರಲ್ಲಿಯೂ ಪುರುಷರಾಗಿದ್ದರು ಕೂಡ ಅರ್ಜಿ ಸಲ್ಲಿಸಬಹುದು.

# ಮಾಜಿ ಯೋಧರು, ವಿಶೇಷ ಚೇತನರು ಅರ್ಜಿ ಸಲ್ಲಿಸಬಹುದು.

# 450 ಚದರ ಮೀಟರ್ ಜಾಗ ಹೊಂದಿರುವವರು ಅರ್ಜಿ ಸಲ್ಲಿಸಬಹುದು.

# ಸ್ವಂತ ಮನೆ ಹೊಂದಿರಬಾರದು. ಆದರೆ ಸ್ವಂತ ಮನೆ ನಿರ್ಮಾಣಕ್ಕೆ ಸ್ವಂತ ಜಮೀನು (Own Property)ಇಲ್ಲವೇ ಜಾಗ ಹೊಂದಿರಬೇಕು.

Leave A Reply

Your email address will not be published.