Uppinangady: ಏಳು ಮಕ್ಕಳಿದ್ದೂ ಅನಾಥಾಶ್ರಮ ಸೇರಿದ ವೃದ್ಧೆ ಸಾವು!
ಅಂತ್ಯಸಂಸ್ಕಾರಕ್ಕೂ ಬಾರದ ಮಕ್ಕಳು, ಆಶ್ರಮದಿಂದಲೇ ಅಂತ್ಯಕ್ರಿಯೆ
Uppinangady: 90 ರ ಆಸುಪಾಸಿನ ವೃದ್ಧೆಯೋರ್ವರು, ಮಕ್ಕಳಿಗೆ ಬೇಡವಾಗಿದ್ದು, ಕೊನೆಗೆ ಅನಾಥಾಶ್ರಮ ಸೇರಿದ್ದ ಲಕ್ಷ್ಮೀ ಹೆಗ್ಡೆ ಅವರಿಗೆ ಹೃದಯಾಘಾತವುಂಟಾಗಿ ಭಾನುವಾರ ನಿಧನ ಹೊಂದಿದ್ದಾರೆ. ಆದರೆ ಹೆತ್ತ ತಾಯಿಯ ಅಂತ್ಯಸಂಸ್ಕಾರ ನೆರವೇರಿಸಲು ಮಕ್ಕಳು ಬಾರದ ಕಾರಣ ಅನಾಥಾಶ್ರಮದವರೇ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ ಘಟನೆಯೊಂದು ನಡೆದಿದೆ.
ಉಪ್ಪಿನಂಗಡಿ ಸಮೀಪದಲ್ಲಿ ಸ್ವಂತ ಮನೆ ಹೊಂದಿದ್ದ ಲಕ್ಷ್ಮೀ ಹೆಗ್ಡೆ ಅವರಿಗೆ ಏಳು ಮಕ್ಕಳು. ಅವರಿಗೆ ವೃದ್ಧಾಪ್ಯ ಕಾಡಿದಾಗ ಮಕ್ಕಳಿಗೆ ಬೇಡವಾಗಿದ್ದರು. ಅಸಹಾಯಕತೆಗೆ ಸಿಲುಕಿದ ಇವರು ನ್ಯಾಯಕ್ಕಾಗಿ ಅಂದು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಮಕ್ಕಳ ಅಸಹಕಾರದಿಂದ, ಅಂದಿನ ಠಾಣಾಧಿಕಾರಿ ನಂದ ಕುಮಾರ್ ಅವರು ಕನ್ಯಾನದ ಭಾರತ್ ಸೇವಾಶ್ರಮಕ್ಕೆ ಸೇರಿಸಿದ್ದರು. ಮಗನಂತೆ ಆಗಾಗ ಆಶ್ರಮಕ್ಕೆ ಭೇಟಿ ಕೊಟ್ಟು ಅವರು ಯೋಗಕ್ಷೇಮ ವಿಚಾರಿಸುತ್ತಿದ್ದರು.
ಯಶ್ ಬರ್ತ್‌ಡೇಯಂದೇ ದುರಂತ !ಕಟೌಟ್ ನಿಲ್ಲಿಸಲು ಹೋದ ಮೂವರು ಅಭಿಮಾನಿಗಳಿಗೆ ವಿದ್ಯುತ್ ತಂತಿ ತಗುಲಿ ಸಾವು!
ಆಶ್ರಮದಲ್ಲೇ ಚೆನ್ನಾಗಿದ್ದ ಲಕ್ಷ್ಮೀ ಹೆಗ್ಡೆ ಅವರಿಗೆ ಭಾನುವಾರ ಹೃದಯಾಘಾತವಾಗಿ ನಿಧನ ಹೊಂದಿದ್ದಾರೆ. ಆಶ್ರಮಕ್ಕೆ ಸೇರಿದಾಗ ನೀಡಿದ ಸಂಬಂಧಿಕರ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿದಾಗ ಅವರಿಗೆ ನಿಧನ ಸುದ್ದಿಯನ್ನು ತಿಳಿಸಿದ್ದು, ಅಂತ್ಯವಿಧಿ ನೆರವೇರಿಸಲು ಬನ್ನಿ ಎಂದು ಹೇಳಿದ್ದಾರೆ. ಆದರೆ ಮನವಿಗೆ ಸರಿಯಾದ ಸ್ಪಂದನೆ ದೊರೆಯಲಿಲ್ಲ. ಕೊನೆಗೆ ಇವರ ಕಾಳಜಿ ವಹಿಸಿದ್ದ ಪೊಲೀಸ್ ಅಧಿಕಾರಿ ನಂದಕುಮಾರ್ ಅವರನ್ನು ಸಂಪರ್ಕಿಸಿದ್ದು, ಅವರು ಕರ್ತವ್ಯದ ಕಾರಣ ದೂರದೂರಿನಲ್ಲಿದ್ದು ನಂದಕುಮಾರ್ ಅವರಿಗೆ ಸಕಾಲದಲ್ಲಿ ಬರಲು ಅಸಾಧ್ಯವಾಗಿತ್ತು. ಇದೀಗ ಆಶ್ರಮದ ಕ್ರಮದಂತೆ ವೃದ್ಧೆಯ ಅಂತ್ಯವಿಧಿಯನ್ನು ನೆರವೇರಿಸಲಾಗಿದೆ.