Second PUC Exams: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳೇ ಗಮನಿಸಿ, ಪ್ರಾಯೋಗಿಕ ಪರೀಕ್ಷೆಗಳ ದಿನಾಂಕ ಬದಲು: ಇಲ್ಲಿದೆ ಹೆಚ್ಚಿನ ಮಾಹಿತಿ!!

Second PUC Exams: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳೇ(Second PUC Exams) ಗಮನಿಸಿ ನಿಮಗೊಂದು ಮುಖ್ಯ ಮಾಹಿತಿ ಇಲ್ಲಿದೆ ನೋಡಿ!!!ಜನವರಿ 24 ರಿಂದ ಜೆ.ಇ.ಇ. ಮುಖ್ಯ ಪರೀಕ್ಷೆ ನಡೆಯುತ್ತಿರುವುದರಿಂದ ದ್ವಿತೀಯ ಪಿಯುಸಿ ಪ್ರಾಯೋಗಿಕ(Practical Exams)ಪರೀಕ್ಷೆಗಳನ್ನು ಮುಂದೂಡಲಾಗಿದೆ.

 

 

ಹಲವಾರು ವಿದ್ಯಾರ್ಥಿಗಳು/ಪೋಷಕರು ಸದರಿ ದಿನಗಳಂದು ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳನ್ನು ಮುಂದೂಡಬೇಕೆಂದು ಮನವಿ ಮಾಡಿದ ಹಿನ್ನೆಲೆ ಜಿಲ್ಲಾ ಉಪನಿರ್ದೇಶಕರು ಪ್ರಾಯೋಗಿಕ ಕೇಂದ್ರಗಳಿಗೆ ಸೂಚನೆಯನ್ನು ನೀಡಿದೆ. ಪೋಷಕರು/ವಿದ್ಯಾರ್ಥಿಗಳಿಂದ ಬಂದಿರುವ ಮನವಿಯ ಮೇರೆಗೆ 2024 ರಲ್ಲಿ ಜೆ.ಇ.ಇ.ಮುಖ್ಯ ಪರೀಕ್ಷೆಯು 24-01-2024 ರಿಂದ 01-02-2024 ರವರೆಗೆ ನಡೆಯಲಿದೆ.

 

ಜಿ.ಇ.ಇ. ಮುಖ್ಯ ಪರೀಕ್ಷೆಯನ್ನು ಬರೆಯುತ್ತಿರುವ ವಿದ್ಯಾರ್ಥಿಗಳು ಜೆ.ಇ.ಇ. ಮುಖ್ಯ ಪರೀಕ್ಷೆ ಬರೆಯಲು ನೆರವಾಗುವ ನಿಟ್ಟಿನಲ್ಲಿ ಪ್ರಾಯೋಗಿಕ ಪರೀಕ್ಷೆಯ ವೇಳಾಪಟ್ಟಿಯನ್ನು ಮಂಡಲಿಯು 27-01-2024 ರಿಂದ 17-02-2024 ರೊಳಗೆ ನಿಗದಿತ ಅವಧಿಗೆ ನಡೆಸಲು ತೀರ್ಮಾನ ಕೈಗೊಂಡಿದೆ.

Leave A Reply

Your email address will not be published.