Puttur: ಮೀಟರ್‌ ಬಡ್ಡಿ ಕಿರುಕುಳ ಶಂಕೆ; ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಸಾವು!!!

Puttur: ಹಣದ ವ್ಯವಹಾರದಿಂದ ಕಿರುಕುಳಕ್ಕೆ ಒಳಗಾಗಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯೋರ್ವರು ಜ.6 ರಂದು ಮೃತಪಟ್ಟಿರುವ ಕುರಿತು ವರದಿಯಾಗಿದೆ.

ಬಲ್ನಾಡು ನಿವಾಸಿ ಕೇಸರಿ (41) ಎಂಬುವವರೇ ಮೃತಪಟ್ಟವರು.

ಇವರು ಜ.5 ರಂದು ಮಧ್ಯಾಹ್ನ ವಿಷ ಸೇವಿಸಿದ್ದು, ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಇವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಶನಿವಾರ ಚಿಕಿತ್ಸೆ ಫಲಕಾರಿಯಾಗದೆ ಮೃತ ಹೊಂದಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ: ದ.ಕ: ಚಿಲ್ಲರೆ ಇಲ್ಲ ಎಂದು ಹೇಳಿ ವೃದ್ಧರೋರ್ವರನ್ನು ಮಾರ್ಗ ಮಧ್ಯೆ ಬಸ್ಸಿನಿಂದ ಇಳಿಸಿದ ಕೆಎಸ್‌ಆರ್‌ಟಿಸಿ ಕಂಡಕ್ಟರ್‌!!

ಬಡ್ಡಿಗೆ ಹಣ ಕೊಟ್ಟವರು ಕಿರುಕುಳ ನೀಡಿದ್ದರೆಂದು ಆತ್ಮಹತ್ಯೆಗೆ ಮುನ್ನ ಹಲವರಲ್ಲಿ ಕಣ್ಣೀರಿಟ್ಟು ಕೇಸರಿ ಅವರು ಹೇಳಿಕೊಂಡಿದ್ದರು ಎಂದು ಹೇಳಲಾಗಿದೆ. ಸಾಲದ ಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Leave A Reply

Your email address will not be published.