Viral Video: ಅಂಗಡಿಗೆ ದಿನಸಿ ಕೊಂಡೊಯ್ಯಲು ಬಂದಾಕೆಯ “ಎದೆ” ಮುಟ್ಟಿದ ವೃದ್ಧ; ಯುವತಿಯಿಂದ ಧರ್ಮದೇಟು, ವೀಡಿಯೋ ವೈರಲ್‌!!!

Kerala News: ವೃದ್ಧ ವ್ಯಕ್ತಿಯೊಬ್ಬ ಯುವತಿಯೋರ್ವಳ ಎದೆಯ ಭಾಗವನ್ನು ಮುಟ್ಟಿದ ಘಟನೆಯೊಂದು ನಡೆದಿದೆ. ಕೂಡಲೇ ಯುವತಿ ಸಿಟ್ಟಿಗೆದ್ದು ಆಕ್ರೋಶಗೊಂಡು ನಿಂದಿಸಿದ್ದಾಳೆ. ಅನಂತರ ಆತನ ವರ್ತನೆಗೆ ಚಪ್ಪಲಿಯಿಂದ ಬಾರಿಸಿರುವ ಘಟನೆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ಘಟನೆ ಕೇರಳದ ತ್ರಿಶ್ಯೂರ್‌ನಲ್ಲಿ ನಡೆದಿದೆ.

ವೃದ್ಧ ನನ್ನು ಅಲಿ ಎಂದು ಗುರುತಿಸಲಾಗಿದೆ. ಈತ ದಿನಸಿ ಅಂಗಡಿಯೊಂದನ್ನು ತ್ರಿಶ್ಯೂರು ವೈದಕೀಯ ಕಾಲೇಜು ಬಳಿ ನಡೆಸುತ್ತಿದ್ದ ಎಂದು ವರದಿಯಾಗಿದೆ.

ಘಟನೆ ವಿವರ: ಯುವತಿಯೋರ್ವಳು ಕಿರಾಣಿ ಅಂಗಡಿಗೆ ದಿನಸಿ ಸಾಮಾಗ್ರಿಗಳನ್ನು ಕೊಳ್ಳಲೆಂದು ಬಂದಿದ್ದಳು. ಈ ಸಮಯದಲ್ಲಿ ಅಂಗಡಿ ಸುತ್ತಮುತ್ತ ಗ್ರಾಹಕರು ಇದ್ದರು. ಆದರೂ ಆ ವೃದ್ಧ ಆ ಜನಸಂದಣಿಯ ನಡುವೆ ಯುವತಿಯ ಸ್ತನಗಳನ್ನು ಹಿಡಿದಿದ್ದು, ಯುವತಿ ಆಕ್ರೋಶಗೊಂಡು, ನಿಂದಿಸಿ, ವೃದ್ಧನ ಬಳಿ ಕ್ಷಮೆ ಕೇಳುವಂತೆ ಹೇಳಿದ್ದಾರೆ.

ಕೂಡಲೇ ಅಲಿ ಯುವತಿಯ ಬಳಿ ಕ್ಷಮೆ ಕೇಳಿ, ಪೊಲೀಸ್‌ ದೂರು ನೀಡದಂತೆ ಮನವಿ ಮಾಡಿದ್ದಾನೆ. ಸದ್ಯ ಈ ಕುರಿತು ಕ್ರಮ ಕೈಗೊಂಡಿರುವ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

Leave A Reply

Your email address will not be published.