Ram Mandir Controversy: ರಾಮಮಂದಿರ ಉದ್ಘಾಟನೆ ಬಗ್ಗೆ ವಿವಾದಾತ್ಮಕ ಹೇಳಿಕೆ: ರಾಮಮಂದಿರ ಉದ್ಘಾಟನೆಯನ್ನು ತಿಥಿಗೆ ಹೋಲಿಕೆ ಮಾಡಿ ನಾಲಿಗೆ ಹರಿಬಿಟ್ಟ ಜೆಡಿಯು ನಾಯಕ!!

Share the Article

Ram Mandir: ಅಯೋಧ್ಯೆ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮದ ಕುರಿತಂತೆ ಜೆಡಿಯು ಸಂಸದ ಕೌಶಲೇಂದ್ರ ಕುಮಾರ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

 

ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರ (Ram Mandir) ಉದ್ಘಾಟನೆಗೆ ಪ್ರತಿಪಕ್ಷಗಳ ನಾಯಕರು ನೀಡುತ್ತಿರುವ ಹೇಳಿಕೆಗಳು ಭಾರಿ ವಿವಾದ ಸೃಷ್ಟಿಸುತ್ತಿದೆ. ಜೆಡಿಯು ಸಂಸದ ಕೌಶಲೇಂದ್ರ ಕುಮಾರ್‌ (Kaushalendra Kumar) ಅವರು ರಾಮಮಂದಿರ ಉದ್ಘಾಟನೆ ಕಾರ್ಯಕ್ರಮವನ್ನು ತಿಥಿಗೆ ಹೋಲಿಸುವ ಮೂಲಕ ಭಾರೀ ಟೀಕೆಗೆ ಗುರಿಯಾಗಿದ್ದಾರೆ.

 

ರಾಮಮಂದಿರ ಉದ್ಘಾಟನೆ ಕುರಿತು ನಳಂದಾ ಸಂಸದ ಕೌಶಲೇಂದ್ರ ಕುಮಾರ್‌ ವಿವಾದಾತ್ಮಕ ಹೇಳಿಕೆ ನೀಡಿದ್ದು, “ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆಮಂತ್ರಣ ಪತ್ರ ಏಕೆ ನೀಡಬೇಕು? ಆಮಂತ್ರಣ ಪತ್ರ ನೀಡಲು ರಾಮಮಂದಿರ ಉದ್ಘಾಟನೆ ಕಾರ್ಯಕ್ರಮವೇನಾದರು ಯಾರದ್ದಾದರೂ ತಂದೆಯ ಶ್ರಾದ್ಧವೇ? ಇಲ್ಲ, ಯಾರದ್ದಾದರೂ ಮಗನ ಮದುವೆಯೇ” ಎಂದು ಕೌಶಲೇಂದ್ರ ಕುಮಾರ್‌ ಪ್ರಶ್ನೆ ಮಾಡಿದ್ದಾರೆ.

https://x.com/ANI/status/1743480270974824496?s=20

Leave A Reply