Gruha Lakshmi Yojana: ರಾಜ್ಯ ಸರ್ಕಾರದಿಂದ ಗೃಹ ಲಕ್ಷ್ಮೀಯರಿಗೆ ಬಿಗ್ ಅಪ್ಡೇಟ್: ಮಹತ್ವದ ಯೋಜನೆ ಜಾರಿಗೆ ತಯಾರಿ!!
Gruha Lakshmi Yojana: ರಾಜ್ಯ ಸರ್ಕಾರದಿಂದ ‘ಗೃಹಲಕ್ಷ್ಮಿ’ ಯರಿಗೆ (Gruha Lakshmi Yojana)ಭರ್ಜರಿ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಕೇರಳ ಮಾದರಿಯ ನಯಾ ಚಿಟ್ ಫಂಡ್ ಜಾರಿಗೆ ತರಲು ರಾಜ್ಯ ಸರ್ಕಾರ (State Government)ಸಿದ್ಧತೆ ನಡೆಸಿದೆ ಎನ್ನಲಾಗಿದೆ.
ಗೃಹಲಕ್ಷ್ಮಿ ಯೋಜನೆ(Gruha Lakshmi Yojana)ಮೂಲಕ ಪ್ರತಿ ತಿಂಗಳಿಗೆ 2 ಸಾವಿರ ನೀಡುತ್ತಿರುವ ಸರ್ಕಾರ ಅದೇ ದುಡ್ಡನ್ನು ಚಿಟ್ ಫಂಡ್ ನಲ್ಲಿ ಹೂಡಿಕೆ ಮಾಡುವ ಯೋಜನೆಗೆ ಚಿಂತನೆ ನಡೆಸಿದೆ ಎನ್ನಲಾಗಿದೆ. ಮಹಿಳೆಯರನ್ನು ಚಿಟ್ ಫಂಡ್ ನಲ್ಲಿ ತೊಡಗಿಸಲು ಉತ್ತೇಜನ ನೀಡಿ ಉಳಿತಾಯ ಮಾಡುವತ್ತ ಗಮನ ಸೆಳೆಯುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಕೇರಳ ಮಾದರಿಯ ನಯಾ ಚಿಟ್ ಫಂಡ್ ನನ್ನು ಜಾರಿ ಮಾಡಲು ಸರ್ಕಾರ ಸಿದ್ದತೆ ನಡೆಸಿದ್ದು, ಈ ಯೋಜನೆ ಶೀಘ್ರದಲ್ಲೇ ಜಾರಿಗೆ ಬರಲಿದೆ ಎನ್ನಲಾಗಿದೆ. ಗ್ರಾಮೀಣ ಭಾಗದಲ್ಲಿರುವ ಸ್ವಸಹಾಯ ಸಂಘಗಳ ಮೂಲಕ ಚಿಟ್ ಫಂಡ್ ಉದ್ಯಮ ಬಲಪಡಿಸುವ ಗುರಿಯನ್ನು ಸಾಧಿಸುವ ಯೋಜನೆ ರೂಪಿಸಲಾಗಿದೆ.
ಇದನ್ನೂ ಓದಿ: Helth tips: ಅಪ್ಪಿ ತಪ್ಪಿಯೂ ಫ್ರಿಡ್ಜ್ ಒಳಗೆ ತಿನ್ನುವ ಈ ವಸ್ತುಗಳನ್ನು ಇಡಬೇಡಿ – ಇಟ್ಟರೆ ನಿಮಿಷದಲ್ಲೇ ಅದಾಗುತ್ತೆ ವಿಷ !!