New Drug Manufacturers: ಕೇಂದ್ರದಿಂದ ಔಷಧಿ ಉತ್ಪಾದನಾ ಮಂಡಳಿಗೆ ಹೊಸ ಸೂಚನೆ!!
New Drug Manufacturers: ಕೇಂದ್ರ ಸರ್ಕಾರ(Central Government)ಭಾರತೀಯ ಔಷಧೀಯ ಕಂಪನಿಗಳಿಗೆ ಹೊಸ ಉತ್ಪಾದನಾ ಮಾನದಂಡಗಳನ್ನು(New Drug Manufacturers) ಪೂರೈಸಬೇಕೆಂದು ಅಧಿಸೂಚನೆಯಲ್ಲಿ ಸೂಚನೆ ನೀಡಿದೆ.
ಔಷಧೀಯ ಉತ್ಪನ್ನಗಳು ತಮ್ಮ ಉದ್ದೇಶಿತ ಬಳಕೆಗೆ ಯೋಗ್ಯವಾಗಿವೆ ಎಂಬುದನ್ನು ಔಷಧ ತಯಾರಿಕಾ ಕಂಪೆನಿಗಳು ಖಾತ್ರಿ ಪಡಿಸಿಕೊಳ್ಳಬೇಕು. ಪದಾರ್ಥಗಳ ಪರೀಕ್ಷೆಗಳಲ್ಲಿ “ತೃಪ್ತಿಕರ ಫಲಿತಾಂಶಗಳನ್ನು” ಪಡೆದ ಬಳಿಕವೇ ಕಂಪನಿಗಳು ಸಿದ್ಧಪಡಿಸಿದ ಉತ್ಪನ್ನವನ್ನು ಮಾರಾಟ ಮಾಡಬೇಕು ಎಂದು ಸೂಚಿಸಲಾಗಿದೆ.
ಇದನ್ನೂ ಓದಿ: Gruha Lakshmi Yojana: ರಾಜ್ಯ ಸರ್ಕಾರದಿಂದ ಗೃಹ ಲಕ್ಷ್ಮೀಯರಿಗೆ ಬಿಗ್ ಅಪ್ಡೇಟ್: ಮಹತ್ವದ ಯೋಜನೆ ಜಾರಿಗೆ ತಯಾರಿ!!
ಡಿಸೆಂಬರ್ 2022 ರಿಂದ 162 ಔಷಧಿ ಕಾರ್ಖಾನೆಗಳ ತಪಾಸಣೆಯಲ್ಲಿ ಒಳಬರುವ ಕಚ್ಚಾ ವಸ್ತುಗಳ ಪರೀಕ್ಷೆಯ ಅನುಪಸ್ಥಿತಿ ಕಂಡುಬಂದಿದೆ ಎಂದು ಆರೋಗ್ಯ ಸಚಿವಾಲಯ ಆಗಸ್ಟ್ ನಲ್ಲಿ ಮಾಹಿತಿ ನೀಡಿದೆ. ಭಾರತದ 8,500 ಸಣ್ಣ ಔಷಧ ಕಾರ್ಖಾನೆಗಳಲ್ಲಿ ಕಾಲು ಭಾಗಕ್ಕಿಂತ ಕಡಿಮೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ನಿಗದಿ ಮಾಡಿದ ಅಂತರರಾಷ್ಟ್ರೀಯ ಔಷಧ ಉತ್ಪಾದನಾ ಮಾನದಂಡಗಳನ್ನು ಪೂರೈಸಿದೆ ಎಂದು ತಿಳಿಸಿದೆ.ಆರು ತಿಂಗಳೊಳಗೆ ಮತ್ತು ಸಣ್ಣ ತಯಾರಕರು 12 ತಿಂಗಳಲ್ಲಿ ಈ ಗೊಂದಲಗಳನ್ನು ಪರಿಹರಿಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.