Home Business Bumper Lottery: 27 ಲಾಟರಿ ಟೀಕೆಟ್‌ಗಳನ್ನ ಖರೀದಿಸಿದರೆ ಬಂಪರ್ ಗೆಲುವು ಸಾಧಿಸುವುದು ಪಕ್ಕಾ!

Bumper Lottery: 27 ಲಾಟರಿ ಟೀಕೆಟ್‌ಗಳನ್ನ ಖರೀದಿಸಿದರೆ ಬಂಪರ್ ಗೆಲುವು ಸಾಧಿಸುವುದು ಪಕ್ಕಾ!

Hindu neighbor gifts plot of land

Hindu neighbour gifts land to Muslim journalist

ಮೊದಲೆಲ್ಲಾ ಅನೇಕ ಜನರು ತಮ್ಮ ಅದೃಷ್ಟವನ್ನು ಲಾಟರಿ ಟೀಕೆಟ್‌ಗಳನ್ನು ಖರೀದಿಸುವುದರ ಮೂಲಕ ಪರೀಕ್ಷಿಸುತ್ತಿದ್ದರು. ಆಗಾಗ್ಗೆ ಮಾರುಕಟ್ಟೆಯಲ್ಲಿ ಸಿಗುವ ಲಾಟರಿ ಟೀಕೆಟ್‌ಗಳನ್ನು 10-20 ರೂಪಾಯಿಗೆ ಖರೀದಿಸಿ ತಿಂಗಳಗಟ್ಟಲೆ ಕಾದು ಕುಳಿತು ನಂತರ ಅದರ ಫಲಿತಾಂಶವನ್ನು ಜನರು ದಿನಪತ್ರಿಕೆಗಳಲ್ಲಿ ನೋಡುತ್ತಿದ್ದರು. ಆಗ ಎಷ್ಟೋ ಜನ ಅದೃಷ್ಟಶಾಲಿಗಳು ಈ ಲಾಟರಿ ಟೀಕೆಟ್‌ಗಳನ್ನು ಖರೀದಿಸಿ ಬಂಪರ್ ಲಾಟರಿ ಹೊಡೆದು ತುಂಬಾನೇ ಹಣ ಗಳಿಸಿರುವ ಘಟನೆಗಳು ಸಹ ನಡೆದಿದ್ದವು ಅಂತ ಅನೇಕರು ಹೇಳುವುದನ್ನು ನಾವು ಕೇಳಿರುತ್ತೇವೆ. ಈಗ ಕೆಲವು ದೇಶಗಳು ಈ ಲಾಟರಿಗಳನ್ನು ಮಾರುವುದು ಮತ್ತು ಖರೀದಿಸುವುದನ್ನು ನಿಷೇದಿಸಿದರೆ, ಇನ್ನೂ ಕೆಲ ದೇಶಗಳಲ್ಲಿ ಲಾಟರಿ ಟೀಕೆಟ್‌ಗಳನ್ನು ಮಾರುವುದು ಮತ್ತು ಖರೀದಿಸುವುದು ಇನ್ನೂ ಸಹ ಚಾಲ್ತಿಯಲ್ಲಿದೆ.

ಲಾಟರಿ ಟೀಕೆಟ್ ಖರೀದಿಸಿದಾಗ, ಆ ಲಾಟರಿ ಟೀಕೆಟ್ ನೋಡಿ ಅದಕ್ಕೆ ಬಹುಮಾನ ಬರುತ್ತದೆ ಅಂತ ಯಾರಿಂದಲೂ ಸಹ ಊಹಿಸುವುದಕ್ಕೂ ಸಹ ಸಾಧ್ಯವಾಗುವುದಿಲ್ಲ. ಲಾಟರಿ ಟೀಕೆಟ್ ಗೆಲ್ಲುವ ಸಾಧ್ಯತೆಗಳನ್ನು ಕಂಡು ಹಿಡಿದ ಯುಕೆ ಗಣಿತ ತಜ್ಞರು. ಆದರೆ ಕಳೆದ ಜುಲೈ ತಿಂಗಳಲ್ಲಿ ಇಬ್ಬರು ಬ್ರಿಟಿಷ್ ಗಣಿತ ತಜ್ಞರು 45 ಮಿಲಿಯನ್ ಸಾಧ್ಯತೆಗಳಲ್ಲಿ ಕೇವಲ 27 ಟಿಕೆಟ್‌ಗಳನ್ನು ಖರೀದಿಸುವ ಮೂಲಕ ಯುಕೆ ನ್ಯಾಷನಲ್ ಲಾಟರಿಯನ್ನು ಗೆಲ್ಲುವ ಮಾರ್ಗವನ್ನು ಕಂಡು ಹಿಡಿದಿದ್ದಾರೆ ನೋಡಿ.

ಅವರ ಈ ಆವಿಷ್ಕಾರವು ಈಗ ವಿಶ್ವಾದ್ಯಂತ ಪ್ರಸಿದ್ಧವಾಗಿರುವುದನ್ನು ನೋಡಿ ಅವರು ತುಂಬಾನೇ ಆಶ್ಚರ್ಯಚಕಿತರಾಗಿದ್ದಾರೆ ಮತ್ತು ಅನೇಕ ಜನರು ಇವರು ಸೂಚಿಸಿದ 27 ಟಿಕೆಟ್‌ಗಳೊಂದಿಗೆ ತಮ್ಮ ಅದೃಷ್ಟವನ್ನು ಪ್ರಯತ್ನಿಸಿದರು ಮತ್ತು ವಿಭಿನ್ನವಾದ ಫಲಿತಾಂಶಗಳನ್ನು ಸಹ ಪಡೆದರು. ವಾಸ್ತವವೆಂದರೆ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದ ಡೇವಿಡ್ ಸ್ಟೀವರ್ಟ್ ಮತ್ತು ಡೇವಿಡ್ ಕುಶಿಂಗ್ ಎಂಬ ಇಬ್ಬರು ಗಣಿತ ತಜ್ಞರು ನಿಮಗೆ ಜಾಕ್‌ಪಾಟ್ ಗೆಲುವನ್ನು ಖಾತರಿಪಡಿಸುವುದಿಲ್ಲ.

ಆದಾಗ್ಯೂ, ಜುಲೈಯಲ್ಲಿ ಪ್ರಕಟ ಮಾಡಿದ ತಮ್ಮ ಸಂಶೋಧನಾ ಪತ್ರಿಕೆಯಲ್ಲಿ ಇದು ಕೇವಲ ಉಚಿತ ಆಟವಾಗಿದ್ದರೂ ಸಹ, ಕೆಲವು ರೀತಿಯ ಗೆಲುವನ್ನು ಖಾತರಿಪಡಿಸಲು ಅಗತ್ಯವಿರುವ ಕನಿಷ್ಠ ಸಂಖ್ಯೆಯ ಟಿಕೆಟ್‌ಗಳನ್ನು ನಾವು ನಿರ್ಧರಿಸಿದ್ದೇವೆ ಎಂದು ಅವರು ಹೇಳಿಕೊಂಡಿದ್ದಾರೆ.

“ಯುಕೆ ನ್ಯಾಷನಲ್ ಲಾಟರಿಯಲ್ಲಿ, ಆಟಗಾರರು 1 ಮತ್ತು 59 ರ ನಡುವಿನ ಆರು ವಿಭಿನ್ನ ಸಂಖ್ಯೆಗಳ ಟಿಕೆಟ್‌ಗಳನ್ನು ಖರೀದಿಸುತ್ತಾರೆ. ಲಾಟರಿ ಟೀಕೆಟ್ ಡ್ರಾ ಸಮಯದಲ್ಲಿ, 1 ರಿಂದ 59 ರವರೆಗಿನ ಸಂಖ್ಯೆಯ ಸೆಟ್‌ನಿಂದ ಬದಲಾಯಿಸದೆ ಆರು ಸಂಖ್ಯೆಯನ್ನು ಯಾದೃಚ್ಛಿಕವಾಗಿ ಆಯ್ಕೆ ಮಾಡಲಾಗುತ್ತದೆ” ಎಂದು ಸಂಶೋಧನೆಯ ಲೇಖಕರು ಹೇಳಿದ್ದಾರೆ.

“ಆರು ಡ್ರಾ ಸಂಖ್ಯೆಗಳಲ್ಲಿ ಕನಿಷ್ಠ ಎರಡನ್ನು ಹೊಂದುವ ಯಾವುದೇ ಖರೀದಿದಾರನಿಗೆ ಬಹುಮಾನವನ್ನು ನೀಡಲಾಗುತ್ತದೆ. 45,057,474 ಸಂಭವನೀಯ ಡ್ರಾ ಗಳಲ್ಲಿ ಯಾವ ಸಂಖ್ಯೆ ಸರಿ ಹೊಂದಿದರೂ ಸಹ ಅವರಿಗೆ ಬಹುಮಾನ ಗ್ಯಾರೆಂಟಿ ಅಂತೆ.

ಹೀಗೆ ಒಂದಲ್ಲ ಒಂದು ಬಹುಮಾನವನ್ನು ಖಾತರಿಪಡಿಸುವ 27 ಟಿಕೆಟ್‌ಗಳನ್ನು ನಾವು ಗುರುತಿಸಿದ್ದೇವೆ. ಮೇಲಾಗಿ, 27 ಟಿಕೆಟ್‌ಗಳನ್ನು ಖರೀದಿಸುವುದು ಅತ್ಯುತ್ತಮವಾದ ಸಂಖ್ಯೆ ಎಂದು ನಾವು ನಿರ್ಧರಿಸಿದ್ದೇವೆ, ಅದೇ 26 ಟಿಕೆಟ್‌ಗಳೊಂದಿಗೆ ಅದೇ ಗ್ಯಾರಂಟಿಯನ್ನು ಸಾಧಿಸುವುದು ಸಾಧ್ಯವಿಲ್ಲ” ಎಂದು ಈ ಗಣಿತ ತಜ್ಞರು ಹೇಳುತ್ತಾರೆ.

ಬಹುಮಾನ ಗೆಲ್ಲುವ ಸಂಯೋಜನೆಯನ್ನು ಗುರುತಿಸಲು ಗಣಿತದ ವಿಧಾನವನ್ನ ಬಳಸಿದ್ರಂತೆ

ಸಂಯೋಜನೆಗಳನ್ನು ಗುರುತಿಸಲು, ಸಂಶೋಧಕರು ಸೀಮಿತ ರೇಖಾಗಣಿತ ಎಂದು ಕರೆಯಲ್ಪಡುವ ಗಣಿತದ ವಿಧಾನವನ್ನು ಬಳಸಿದರು. ಈ ವಿಧಾನವು 1 ರಿಂದ 59 ರವರೆಗಿನ ಸಂಖ್ಯೆಗಳನ್ನು ಜೋಡಿಯಾಗಿ ಅಥವಾ ತ್ರಿವಳಿಗಳಲ್ಲಿ ವಿವಿಧ ಜ್ಯಾಮಿತೀಯ ಆಕಾರಗಳಲ್ಲಿ ಜೋಡಿಸುತ್ತದೆ. ತರುವಾಯ, ಪ್ರತಿಯೊಂದು ಸಂಖ್ಯೆಯ ಸಂಖ್ಯೆಗಳನ್ನು ರೇಖೆಗಳೊಂದಿಗೆ ಜೋಡಿಸಲಾಗುತ್ತದೆ, ಆರು ಸಂಖ್ಯೆಗಳ ಅನುಕ್ರಮವನ್ನು ರಚಿಸುತ್ತದೆ, ಇದು ಒಂದು ಲಾಟರಿ ಟಿಕೆಟ್‌ಗೆ ಅನುರೂಪವಾಗಿದೆ. ಅವರ ಸಂಶೋಧನೆಗಳ ಪ್ರಕಾರ, ಎಲ್ಲಾ 59 ಸಂಖ್ಯೆಗಳನ್ನು ಒಳಗೊಳ್ಳಲು ಮತ್ತು ಕನಿಷ್ಠ ಒಂದು ಜೋಡಿ ಹೊಂದಿಕೆಯಾಗುವುದನ್ನು ಖಚಿತಪಡಿಸಿಕೊಳ್ಳಲು ಈ 27 ಟಿಕೆಟ್‌ಗಳ ಅಗತ್ಯವಿದೆ.