BBK Season Kannada 10: ಮುರಿದು ಬಿತ್ತಾ ಸ್ನೇಹಿತ್‌-ನಮ್ರತಾ ಸ್ನೇಹ ಸಂಬಂಧ? ದೂರಾಗಲು ಕಾರಣವೇನು?

Share the Article

BBK Season 10: ಬಿಗ್‌ಬಾಸ್‌ ಮನೆಯಲ್ಲಿ ಈ ಬಾರಿ ಲವ್‌ ಮ್ಯಾಟರ್‌ವೊಂದು ಭಾರೀ ಚರ್ಚೆಗೊಳಗಾಗಿತ್ತು. ಅದುವೇ ಸ್ನೇಹಿತ್‌ ಮತ್ತು ನಮ್ರತಾ ಅವರ ಸ್ನೇಹ. ಸ್ನೇಹಿತ್‌ ಬಹಿರಂಗವಾಗಿ ನನಗೆ ನಮ್ರತಾ ಇಷ್ಟ ಎಂದು ಹೇಳಿಕೊಂಡರೂ ಕೂಡಾ ನಮ್ರತಾ ಅವರು ಇಲ್ಲಿಯವರೆಗೆ ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟಿಲ್ಲ. ಸ್ನೇಹಿತ್‌ ಅವರು ಮನೆಯಿಂದ ಎಲಿಮಿನೇಟ್‌ ಆಗಿ ಬಂದಾಗಿನಿಂದ ಅವರನ್ನು ಮಿಸ್‌ ಮಾಡ್ಕೋತ್ತಿದ್ದೇನೆ ಎಂದು ಹೇಳಿದ ನಮ್ರತಾ ಆಮೇಲೆ ತಮ್ಮ ಗೇಮ್‌ ನತ್ತ ಗಮನ ಹರಿಸಿದ್ದಾರೆ.

ಇದನ್ನೂ ಓದಿ: Teachers Recruitment: 13 ಸಾವಿರ ಶಿಕ್ಷಕರ ನೇಮಕಾತಿಗೆ ಮತ್ತೆ ವಿಘ್ನ!!!

ಇತ್ತ ಸ್ನೇಹಿತ್‌ ಬಿಗ್‌ಮನೆಯಿಂದ ಹೊರಗೆ ಬಂದಿದ್ದು, ಬಂದ ಕೂಡಲೇ ನಮ್ರತಾ ಅವರನ್ನು ಸೋಶಿಯಲ್‌ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಿದ್ದರು. ಇದೀಗ ಸ್ನೇಹಿತ್‌ ಗೌಡ ಅವರು ನಮ್ರತಾ ಅವರನ್ನು ಅನ್‌ಫಾಲೋ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ನಮ್ರತಾ ಕೂಡಾ ಸ್ನೇಹಿತ್‌ ಅವರನ್ನು ಫಾಲೋ ಮಾಡುತ್ತಿಲ್ಲ. ಈ ಬೆಳವಣಿಗೆ ಇದೀಗ ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಬಿಗ್‌ಬಾಸ್‌ ಮನೆಯಲ್ಲಿ ಪ್ರಸ್ತುತ ನಡೆಯುವ ವಿಚಾರಗಳೇ ಕಾರಣವೇ ಎನ್ನುವ ಪ್ರಶ್ನೆಯೊಂದು ಕಾಡಿದೆ ಎನ್ನಬಹುದು.

 

 

Leave A Reply

Your email address will not be published.