RPF Recruitment 2024: 2250 ಕಾನ್ಸ್ಟೇಬಲ್ SI ಹುದ್ದೆಯ ನೇಮಕಾತಿಗೆ ಅಧಿಸೂಚನೆ ಪ್ರಕಟ!!

Share the Article

RPF Recruitment 2024: ಉದ್ಯೋಗ ಅರಸುತ್ತಿರುವ ಅಭ್ಯರ್ಥಿಗಳೇ ಗಮನಿಸಿ ನಿಮಗೊಂದು ಮುಖ್ಯ ಮಾಹಿತಿ ಇಲ್ಲಿದೆ ನೋಡಿ!! ಆರ್ಪಿಎಫ್ ನೇಮಕಾತಿ 2024(RPF Recruitment 2024)ಒಟ್ಟು 2250 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದು, ಇದರಲ್ಲಿ 2000 ಕಾನ್ಸ್ಟೇಬಲ್ ಮತ್ತು 250 ಎಸ್‌ಐ ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತದೆ.

 

ಹುದ್ದೆಯ ವಿವರ:

RPF ಕಾನ್ಸ್ಟೇಬಲ್ ಹುದ್ದೆಗಳು: 2000

RPF ಎಸ್‌ಐ ಹುದ್ದೆಗಳು: 250

ಅರ್ಜಿ ಸಲ್ಲಿಸುವ ವಿಧಾನ : ಆನ್ ಲೈನ್

ಅರ್ಜಿ ಸಲ್ಲಿಸುವ ಅಧಿಕೃತ ವೆಬ್ಸೈಟ್ : rpf.indianrailways.gov.in.

 

ರೈಲ್ವೆ ನೇಮಕಾತಿ ಮಂಡಳಿ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (RPF ) ಅಡಿಯಲ್ಲಿ ಕಾನ್ಸ್ಟೇಬಲ್ ಮತ್ತು ಸಬ್ ಇನ್ಸ್ಪೆಕ್ಟರ್ (SI) ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಆರ್‌ಆರ್ಬಿ ನಿಗದಿಪಡಿಸಿದ ಎಲ್ಲಾ ಅರ್ಹತಾ ಷರತ್ತುಗಳನ್ನು ಪೂರೈಸಿದ ಆಸಕ್ತ ಅಭ್ಯರ್ಥಿಗಳು ಆರ್ಪಿಎಫ್ ಎಸ್‌ಐ, ಕಾನ್ಸ್ಟೇಬಲ್ ನೇಮಕಾತಿ 2024 ಗೆ ಆನ್ ಲೈನ್ ನಲ್ಲಿ rpf.indianrailways.gov.in ಅಧಿಕೃತ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

 

ಆರ್ಪಿಎಫ್ ಹೊಸ ಖಾಲಿ ಹುದ್ದೆ 2024 ಗೆ ಸಂಬಂಧಿಸಿದಂತೆ ಪರೀಕ್ಷಾ ಪ್ರಾಧಿಕಾರವು ಕಿರು ಸೂಚನೆಯನ್ನು ಬಿಡುಗಡೆ ಮಾಡಿದೆ. ಶೇ.10 ಮತ್ತು ಶೇ.15ರಷ್ಟು ಹುದ್ದೆಗಳನ್ನು ಕ್ರಮವಾಗಿ ಮಾಜಿ ಸೈನಿಕರು ಮತ್ತು ಮಹಿಳೆಯರಿಗೆ ಮೀಸಲಿಡಲಾಗಿದೆ. ಲಿಖಿತ ಪರೀಕ್ಷೆ ಮತ್ತು ದೈಹಿಕ ಪರೀಕ್ಷೆಗಳನ್ನು ನಡೆಸಿದ ಬಳಿಕ ದಾಖಲೆ ಪರಿಶೀಲನೆಯ ಆಧಾರದ ಮೇರೆಗೆ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ.

Leave A Reply