Home Breaking Entertainment News Kannada Drone pratap: ಬಿಗ್ ಬಾಸ್ ಮನೆಯಿಂದ ಡ್ರೋನ್ ಪ್ರತಾಪ್ ನಾಪತ್ತೆ !!

Drone pratap: ಬಿಗ್ ಬಾಸ್ ಮನೆಯಿಂದ ಡ್ರೋನ್ ಪ್ರತಾಪ್ ನಾಪತ್ತೆ !!

Drone pratap

Hindu neighbor gifts plot of land

Hindu neighbour gifts land to Muslim journalist

Drone prathap: ಕನ್ನಡದ ಬಿಗ್ ಬಾಸ್ ಸೀಸನ್ 10 ಇನ್ನೇನು ಕೆಲವೇ ವಾರಗಳಲ್ಲಿ ಮುಕ್ತಾಯವಾಗಲಿದೆ. ಈ ಸೀಸನ್ ಅಲ್ಲಿ ಕೆಲವು ಕಂಟೆಸ್ಟೆಂಟ್ಸ್ ನಾಡಿನ ಜನರ ಪ್ರತೀಗೆ ಪಾತ್ರವಾಗಿದ್ದಾರೆ. ಅದರಲ್ಲಿ ಪ್ರಮುಖವಾಗಿ ಡ್ರೋನ್ ಪ್ರತಾಪ್(Drone pathap). ಬಿಗ್ ಬಾಸ್ ಮನೆಗೆ ಬರುವ ಮೊದಲು ಇಡೀ ನಾಡಿನ ಜನರ ವಿರೋಧ ಕಟ್ಟಿಕೊಂಡಿದ್ದ ಪ್ರತಾಪ್, ಬಿಗ್ ಬಾಸ್ ಮನೆಗೆ ಬಂದಾಗಿನಿಂದ ತಮ್ಮ ವಿಶೇಷ ವ್ಯಕ್ತಿತ್ವದಿಂದ, ಮುಗ್ಧತೆಯಿಂದ ಅದೇ ಜನರ ಪ್ರೀತಿ, ವಿಶ್ವಾಸ ಸಂಪಾದಿಸಿದ್ದಾರೆ. ಪ್ರತಾಪ್ ಅಂದ್ರೆ ಈಗಂತೂ ಹಲವರಿಗೆ ಫೇವರಿಟ್. ಪ್ರತಾಪ್ ಈ ಸೀಸನ್ ಗೆಲ್ಲಬೇಕೆಂಬುದು ಹಲವರ ಬಯಕೆ ಕೂಡ. ಆದರೆ ಈ ನಡುವೆ ಪ್ರತಾಪ್ ಬಿಗ್ ಬಾಸ್ ಮನೆಯಿಂದ ನಾಪತ್ತೆಯಾಗಿದ್ದಾರೆ.

ಹೌದು, ಬಿಗ್ ಬಾಸ್ ಮನೆಯೊಳಗೆ ಸದಾ ಲವಲವಿಕೆಯಿಂದ ಓಡಾಡಿಕೊಂಡಿದ್ದ ಪ್ರತಾಪ್ ಇದೀಗ ದಿಢೀರ್ ಎಂದು ನಾಪತ್ತೆಯಾಗಿದ್ದಾರೆ. ಅಷ್ಟಕ್ಕೂ ಈ ಸುದ್ದಿ ಹರಡಲು ಕಾರಣ ಏನೆಂದರೆ, ಬಿಗ್ಬಾಸ್ ಲೈವ್ನಲ್ಲಿ ಪ್ರತಾಪ್ ಕಾಣಿಸಿಕೊಳ್ಳುತ್ತಿಲ್ಲ. ಹೀಗಾಗಿ ಪ್ರತಾಪ್ಗೆ ಏನಾಯಿತು ಎಂದು ವೀಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಬಿಗ್ಬಾಸ್ ಮೂಲಗಳ ಪ್ರಕಾರ ಪ್ರತಾಪ್ ಆರೋಗ್ಯ ದಿಢೀರ್ ಹದಗೆಟ್ಟಿದೆಯಂತೆ. ಜ್ವರ ಹಿನ್ನೆಲೆಯಲ್ಲಿ ಬಿಗ್ಬಾಸ್ ಮನೆಯ ವೈದ್ಯರಿಂದಲೇ ಡ್ರೋನ್ ಪ್ರತಾಪ್ಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ. ಅನಾರೋಗ್ಯ ಹಿನ್ನೆಲೆ ಪ್ರತಾಪ್ಗೆ ರೆಸ್ಟ್ ಮಾಡಲು ವೈದ್ಯರು ಸೂಚಿಸಿರುವ ಹಿನ್ನೆಲೆಯಲ್ಲಿ ಬಿಗ್ಬಾಸ್ ಲೈವ್ನಲ್ಲಿ ಡ್ರೋನ್ ಪ್ರತಾಪ್ ಕಾಣಿಸಿಕೊಂಡಿಲ್ಲ ಎಂಬ ಮಾಹಿತಿಯೂ ಲಭ್ಯವಾಗಿದೆ.

ಇನ್ನು ಮುಖ್ಯವಾದ ವಿಚಾರ ಅಂದ್ರೆ ಕುಟುಂಬಸ್ಥರ ಪ್ರೀತಿಯೊಂದಿಗೆ ಕರ್ನಾಟಕದ ಜನತೆಯ ಪ್ರೀತಿಯನ್ನು ಮರಳಿ ಪಡೆಯುವ ಉತ್ಸಾಹದಲ್ಲಿದ್ದ ಪ್ರತಾಪ್‌ ಆಸೆಗೆ ಮೊನ್ನೆ ತಾನೆ ಬರ ಸಿಡಿಲೊಂದು ಬಂದೆರಗಿದೆ. ಅದೇನೆಂದರೆ ಮನೆಗೆ ಎಂಟ್ರಿಕೊಟ್ಟು ಎಲ್ಲರ ಭವಿಷ್ಯ ಹೇಳುತ್ತಿದ್ದು ವಿದ್ಯಾಶಂಕರಾನಂದ ಸ್ವಾಮಿಗಳು ಪ್ರತಾಪ್ ಭವಿಷ್ಯದ ಕುರಿತು ಶಾಕಿಂಗ್ ಭವಿಷ್ಯ ನುಡಿದಿದ್ದರು. ಗುರುಗಳು ಪ್ರತಾಪ್ ಬಳಿ ನೀನು ಕುಟುಂಬದಿಂದ ದೂರವೇ ಇರಬೇಕಾಗುತ್ತದೆ. ಕುಟುಂಬದ ಜೀವನ ಅಷ್ಟು ಸರಿ ಇಲ್ಲ. ದೂರ ಇದ್ದು ದೂಪವಾಗ್ತೀಯೋ ಹತ್ತಿರ ಹೋಗಿ ಹೇಸಿಗೆ ಆಗ್ತೀಯೋ ನಿನಗೆ ಬಿಟ್ಟಿದ್ದು’ ಎಂದು ಖಡಕ್ಕಾಗಿ ಹೇಳಿದ್ದರು. ಅವರ ಮಾತುಗಳನ್ನು ಕೇಳಿ ಪ್ರತಾಪ್ ಕಣ್ಣುಗಳಲ್ಲಿ ಕಣ್ಣೀರು ತುಂಬಿ ಹರಿದಿತ್ತು.

ಇದನ್ನು ಓದಿ: PM Modi: ‘ಇಂಡಿಯಾ’ ಮೈತ್ರಿ ಕೂಟದ ಬಗ್ಗೆ ಪ್ರಧಾನಿ ಮೋದಿ ಅಚ್ಚರಿ ಹೇಳಿಕೆ !!

ಇದೇ ವಿಚಾರವನ್ನು ತಲೆಗೆ ಹಾಕಿಕೊಂಡಿರುವ ಪ್ರತಾಪ್ ಗೆ ಆರೋಗ್ಯ ಏರುಪೇರಾಗಲು ಕಾರಣ ಎಂದು ಹೇಳಲಾಗಿದೆ. ಯಾಕೆಂದರೆ ಕಳೆದ ವಾರವಷ್ಟೇ ಬಿಗ್ಬಾಸ್ ಮನೆಗೆ ಪ್ರತಾಪ್ ಅವರ ತಂದೆ-ತಾಯಿ ಬಂದು ಹೋಗಿದ್ದರು. ಬಹಳ ಖುಷಿಪಟ್ಟಿದ್ದ ಪ್ರತಾಪ್, ಸ್ವಾಮೀಜಿ ಭವಿಷ್ಯದಿಂದ ತುಂಬಾ ಕುಗ್ಗಿದ್ದರು.