Vastu Shastra About Eating Direction: ಅಪ್ಪಿ ತಪ್ಪಿಯೂ ಈ ದಿಕ್ಕಿನಲ್ಲಿ ಮುಖ ಮಾಡಿ ಊಟ ಮಾಡಬೇಡಿ!! ಸಾವಿನ ಮನೆಗೆ ಆಹ್ವಾನ ಪಡೆಯಬಹುದು ಎಚ್ಚರ!!

Vastu Shastra About Directon: ಮನೆಯಲ್ಲಿ ಎಲ್ಲಾ ಕೋಣೆಗಳು( Rooms)ವಾಸ್ತು ಶಾಸ್ತ್ರದ( Vastu ) ಪ್ರಕಾರವಾಗಿ ನಿರ್ಮಿಸಿದರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ (Positivity) ವೃದ್ಧಿಯಾಗಿ ಕುಟುಂಬದಲ್ಲಿ ಶಾಂತಿ ನೆಮ್ಮದಿ(Peace Of Mind) ನೆಲೆಸುತ್ತದೆ ಎಂಬ ನಂಬಿಕೆ ಹೆಚ್ಚಿನವರಿಗಿದೆ. ವಾಸ್ತು ಶಾಸ್ತ್ರದಲ್ಲಿ ಆಹಾರ ಸೇವನೆಯನ್ನು(Food)ಯಾವ ದಿಕ್ಕಿಗೆ ಮಾಡಬೇಕು(Vastu Shastra about directon)ಎನ್ನುವುದನ್ನು ತಿಳಿಸಲಾಗಿದೆ.

ವಾಸ್ತು ಶಾಸ್ತ್ರದಲ್ಲಿ ಅಡುಗೆ ಮನೆ, ಊಟದ ಕೋಣೆ, ಮಲಗುವ ಕೋಣೆ, ದೇವರ ಕೋಣೆ ಯಾವ ದಿಕ್ಕಿನಲ್ಲಿರಬೇಕು ಎಂದು ತಿಳಿಸಲಾಗಿದೆ. ವಾಸ್ತು ಶಾಸ್ತ್ರದಲ್ಲಿ (Vastu Shastra)ದಿಕ್ಕುಗಳು ದೇವತೆಗಳು ಮತ್ತು ಶಕ್ತಿಗೆ ಸಂಬಂಧಿಸಿದೆ ಎಂಬ ನಂಬಿಕೆಯಿದೆ. ಹೀಗಾಗಿ, ಆಹಾರ ಸೇವನೆ ಮಾಡುವಾಗ ನಾವು ಕುಳಿತುಕೊಳ್ಳುವ ದಿಕ್ಕು ಕೂಡ ಮಹತ್ವ ಪಡೆದುಕೊಂಡಿದೆ. ವಾಸ್ತು ಶಾಸ್ತ್ರದ ಪ್ರಕಾರ ಸರಿಯಾದ ದಿಕ್ಕಿನಲ್ಲಿ ಕುಳಿತು ಊಟ ಮಾಡುವುದರಿಂದ ದೇಹ ಹಾಗೂ ಆರೋಗ್ಯಕ್ಕೂ ಪ್ರಯೋಜನ ಸಿಗುತ್ತದೆ ಎಂದು ನಂಬಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಊಟದ ಮನೆ ಪಶ್ಚಿಮದಲ್ಲಿದ್ದರೆ ಉತ್ತಮ. ನೀವು ಊಟದ ಮನೆಯನ್ನು ಈಶಾನ್ಯ ಇಲ್ಲವೇ ಪೂರ್ವ ದಿಕ್ಕಿನಲ್ಲಿ ಇರಿಸಬಹುದು.

ಇದನ್ನು ಓದಿ: Ration Card: ರೇಷನ್ ಕಾರ್ಡ್ ನಲ್ಲಿ ಹೊಸ ಸದಸ್ಯರ ಹೆಸರು ಹೀಗೆ ಸೇರಿಸಿ!!

ವಾಸ್ತು ಶಾಸ್ತ್ರದಲ್ಲಿ ಪೂರ್ವಕ್ಕೆ ಮುಖ ಮಾಡಿ ಊಟ ಮಾಡಬೇಕು ಎಂದು ಹೇಳಲಾಗುತ್ತದೆ. ವಾಸ್ತು ಶಾಸ್ತ್ರದಲ್ಲಿ ವಿದ್ಯಾರ್ಥಿಗಳು, ವೃತ್ತಿ ಜೀವನದ ಆರಂಭಿಕ ಹಂತದಲ್ಲಿರುವವರು ಉತ್ತರ ದಿಕ್ಕಿಗೆ ಮುಖ ಮಾಡಿ ಊಟ ಮಾಡಲು ಸಲಹೆ ನೀಡಲಾಗುತ್ತದೆ. ದಕ್ಷಿಣ ದಿಕ್ಕನ್ನು ಯಮರಾಜನ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ, ಊಟ ಮಾಡುವಾಗ ದಕ್ಷಿಣಕ್ಕೆ ಮುಖ ಮಾಡಿ ಊಟ ಮಾಡಬಾರದು ಎನ್ನಲಾಗುತ್ತದೆ. ಯಮನನ್ನು ಸಾವಿನ ದೇವರು ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ, ದಕ್ಷಿಣಾಭಿಮುಖವಾಗಿ ಆಹಾರ ಸೇವಿಸುವುದರಿಂದ ಪ್ರಾಣಹಾನಿಯಾಗುತ್ತದೆ ಎನ್ನಲಾಗಿದೆ. ಇದರ ಜೊತೆಗೆ ಅನೇಕ ರೀತಿಯ ಸಮಸ್ಯೆಗಳಿಗೆ ತುತ್ತಾಗಬೇಕಾಗುತ್ತದೆ. ಹೀಗಾಗಿ, ದಕ್ಷಿಣಕ್ಕೆ ಮುಖ ಮಾಡಿ ಊಟ ಮಾಡಬಾರದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

Leave A Reply

Your email address will not be published.