Home latest Chikkamagaluru News: ಸ್ಕೂಲ್‌ ಬಸ್‌ ಡ್ರೈವರ್‌ ಅಂಕಲ್‌ ಪ್ರೇಮಕ್ಕೆ ಬಿದ್ದ 8 ನೇ ಕ್ಲಾಸ್‌ ಹುಡುಗಿ!!...

Chikkamagaluru News: ಸ್ಕೂಲ್‌ ಬಸ್‌ ಡ್ರೈವರ್‌ ಅಂಕಲ್‌ ಪ್ರೇಮಕ್ಕೆ ಬಿದ್ದ 8 ನೇ ಕ್ಲಾಸ್‌ ಹುಡುಗಿ!! ನ್ಯೂ ಇಯರ್‌ ನೆಪ, ಇಬ್ಬರೂ ರೈಲಿನಡಿಗೆ ಬಿದ್ದು ಸಾವು!!!

Hindu neighbor gifts plot of land

Hindu neighbour gifts land to Muslim journalist

Crime News: ಶಾಲಾ ಬಸ್‌ ಡ್ರೈವರ್‌ ಪ್ರೇಮದಾಟಕ್ಕೆ ವಿದ್ಯಾರ್ಥಿನಿ ಬಲಿಯಾಗಿರುವ ಘಟನೆಯೊಂದು ನಡೆದಿದೆ. 8 ನೇ ತರಗತಿ ವಿದ್ಯಾರ್ಥಿನಿ ರೈಲಿಗೆ ಸಿಲುಕಿ ಡ್ರೈವರ್‌ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಚಿಕ್ಕಮಗಳೂರಿನ ಅಜ್ಜಂಪುರ ಸಮೀಪದ ಬಂಕನಕಟ್ಟೆ ಬಳಿ ನಡೆದಿದೆ. ಡ್ರೈವರ್‌ ಸಂತೋಷ್‌ (38) ವಿದ್ಯಾರ್ಥಿನಿ ಜಾನವಿ (14) ಮೃತಪಟ್ಟಿದ್ದಾರೆ.

ಗಿರಿಯಾಪುರ ಗ್ರಾಮದ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ 8 ನೇ ತರಗತಿ ವಿದ್ಯಾರ್ಥಿನಿ ಜಾನವಿಯನ್ನು ಈ ಬಸ್‌ ಡ್ರೈವರ್‌ ಪ್ರೀತಿಸುವಂತೆ ಪೀಡಿಸುತ್ತಿದ್ದನಂತೆ. ಈ ಕುರಿತು ವಿದ್ಯಾರ್ಥಿನಿ ಪೋಷಕರಲ್ಲಿ ಹೇಳಿದ್ದಳು. ಕೂಡಲೇ ಪೋಷಕರು ಬಸ್‌ ಡ್ರೈವರ್‌ ಕಿರುಕುಳದ ಕುರಿತು ಶಾಲೆಯ ಮುಖ್ಯಸ್ಥರ ಬಳಿ ದೂರು ನೀಡಿದ್ದಾರೆ.

ಪೋಷಕರ ವಾರ್ನಿಂಗ್‌ ನಂತರ ಸ್ನೇಹ ಅಂತ ಹೇಳಿ ಆತ್ಮೀಯತೆ ಬೆಳೆಸಿದ್ದಾನೆ. ಸ್ನೇಹಿತರ ಜೊತೆ ಹೊಸ ವರ್ಷದ ಪಾರ್ಟಿ ಮಾಡುವುದೆಂದು ಮನೆಯಲ್ಲಿ ಹೇಳಿದ ಹೋದ ಜಾನವಿಯನ್ನು ಸಂತೋಷ ಆಕೆಯನ್ನು ಕರೆದುಕೊಂಡು ಸುತ್ತಾಡುವುದಕ್ಕೆ ಹೋಗಿದ್ದಾನೆ.

ಜಾನವಿಯನ್ನು ತನ್ನ ಜೊತೆ ಕರೆದುಕೊಂಡು ಹೋಗಿದ್ದ ಸಂತೋಷ ಮಧ್ಯರಾತ್ರಿ ರೈಲಿಗೆ ಅಡ್ಡ ನಿಂತುಕೊಂಡು ಸಾವಿಗೀಡಾಗಿದ್ದಾನೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಶಾಲೆಯಲ್ಲಿ ಬಸ್‌ ಡ್ರೈವರ್‌ ಬಗ್ಗೆ ದೂರು ನೀಡಿದರೂ ಏನೂ ಕ್ರಮ ಕೈಗೊಳ್ಳದ ಕುರಿತು ಜಾನವಿ ಪೋಷಕರು ಇದೀಗ ಶಾಲೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: Astro Tips: ಯಾವುದೇ ಕಾರಣಕ್ಕೂ ಈ ಗಿಡಗಳನ್ನು ಮನೆಯ ಬಳಿ ನೆಡಬೇಡಿ! ಕಾರಣ ಕೇಳಿದ್ರೆ ಶಾಕ್ ಆಗೋದು ಪಕ್ಕಾ

ರೈಲ್ವೆ ಟ್ರ್ಯಾಕ್‌ ಬಳಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಚಿಕ್ಕಮಗಳೂರು ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಘಟನೆ ಕುರಿತು ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.