Health Care: ಎಲೆ, ಅಡಿಕೆ ತಿನ್ನುತ್ತೀರಾ ?! ಹಾಗಿದ್ರೆ ಇನ್ಮುಂದೆ ಜಗಿಯೋ ಮುನ್ನ ಇದೊಂದು ನಿಮಗೆ ತಿಳಿದಿರಲಿ

Betel Nut Benefits: ಎಲೆಯೊಂದಿಗೆ ಅಡಿಕೆ(Betel Nut Benefits) ತಿನ್ನುವ ಅಭ್ಯಾಸ ಇಟ್ಟುಕೊಂಡರೆ ಈ ವಿಚಾರ ತಿಳಿದುಕೊಳ್ಳಿ. ಬಹುತೇಕ ಮಂದಿಗೆ ಊಟದ ನಂತರ ವೀಳ್ಯದೆಲೆ (betel nut)ತಿನ್ನುವ ಅಭ್ಯಾಸವಿರುವುದು ಸಾಮಾನ್ಯ. ಇದರಿಂದ ಏನೆಲ್ಲ ಆರೋಗ್ಯ(Health care)ಪ್ರಯೋಜನಗಳಿವೆ ಗೊತ್ತಾ??

ಹೊಟ್ಟೆ ಹುಳುವಿನ ಸಮಸ್ಯೆ ಎದುರಿಸುತ್ತಿದ್ದರೆ, ನಿಯಮಿತವಾಗಿ ಅಡಿಕೆ ತಿನ್ನಬಹುದು. ಇದರ ಕೆಲವು ಅಂಶಗಳು ಹುಳುಗಳನ್ನು ಕಡಿಮೆ ಮಾಡಲು ಸಹಕರಿಸುತ್ತದೆ. ವೀಳ್ಯದೆಲೆಗಳನ್ನು(Betel Nut)ನಿಯಮಿತವಾಗಿ ಸೇವಿಸುವುದರಿಂದ ಹೊಟ್ಟೆ ಹುಳದ ಸಮಸ್ಯೆಯನ್ನು ಕಡಿಮೆಯಾಗುತ್ತದೆ. ವೀಳ್ಯದೆಲೆ ಇಲ್ಲವೇ ಪಾನ್ ಸೇವಿಸುವ ಅಭ್ಯಾದ ಇಟ್ಟುಕೊಂಡರೆ ಜೀರ್ಣ ಶಕ್ತಿ ಹೆಚ್ಚಾಗುವ ಜೊತೆಗೆ ಹೊಟ್ಟೆಗೆ ಸಂಬಂಧಪಟ್ಟ ಸಮಸ್ಯೆಗಳು ದೂರವಾಗುತ್ತವೆ.

ಹುಳುಗಳು ಇಲ್ಲವೇ ಇತರ ಸೋಂಕುಗಳಿಂದ ಹೆಚ್ಚಿನ ಮಂದಿ ತುರಿಕೆ, ಊದಿಕೊಂಡ ಗುದದ್ವಾರದ ಸಮಸ್ಯೆ ಎದುರಿಸುತ್ತಾರೆ. ಅಂತಹವರು ಅಡಿಕೆ ಪುಡಿಯನ್ನು ಗುದದ್ವಾರಕ್ಕೆ ಹಚ್ಚಿದಲ್ಲಿ ಸಮಸ್ಯೆ ಕಡಿಮೆಯಾಗುತ್ತದೆ. ಬಾಯಿ ಹುಣ್ಣುಗಳಿದ್ದರೆ ಅಡಿಕೆ ಸೇವಿಸಿದರೆ ಕಡಿಮೆಯಾಗುತ್ತದೆ. ವೀಳ್ಯದೆಲೆಯ ರಸ, ಅಡಿಕೆ ಚೂರನ್ನು ಪೇಸ್ಟ್ ಮಾಡಿ ಬಾಯಿ ಹುಣ್ಣಿನ ಮೇಲೆ ಹಚ್ಚಿದರೆ ಗಾಯ ಮಾಯವಾಗುತ್ತದೆ ಎನ್ನಲಾಗುತ್ತದೆ.

ಕೆಲವರಿಗೆ ಪ್ರಯಾಣ ಮಾಡುವಾಗ ವಾಕರಿಕೆಯ ಅನುಭವವಾಗುತ್ತದೆ. ಆಗ ವೀಳ್ಯದೆಲೆ, ಅಡಿಕೆ ಮತ್ತು ಸ್ವಲ್ಪ ಸಕ್ಕರೆಯನ್ನು ಒಟ್ಟಿಗೆ ಸೇವಿಸಿದರೆ ವಾಕರಿಕೆಯ ಸಮಸ್ಯೆ ಕಡಿಮೆಯಾಗುತ್ತದೆ. ಹಲ್ಲು ನೋವು ಕಾಣಿಸಿಕೊಂಡರೆ ವೀಳ್ಯದೆಲೆ, ಅಡಿಕೆ ಜಗಿದರೆ ಹಲ್ಲು ನೋವು ಕಡಿಮೆಯಾಗುತ್ತದೆ .

Leave A Reply

Your email address will not be published.