Ayodhya Rama Mandhir: ಅಯೋಧ್ಯೆ ರಾಮ ಮಂದಿರದಲ್ಲಿ ರಾಮನ ವಿಗ್ರಹಕ್ಕೆ ಮಾತ್ರ ಅವಕಾಶ, ಸೀತೆಯ ವಿಗ್ರಹಕ್ಕಿಲ್ಲ ಪ್ರವೇಶ !!

 

 

Ayodhya Rama Mandhir: ಕೋಟ್ಯಾನು ಕೋಟಿ ಹಿಂದುಗಳ 500 ವರ್ಷಗಳ ಕನಸು ಇನ್ನು ಕೆಲವೇ ದಿನಗಳಲ್ಲಿ ಲೋಕಾರ್ಪಣೆಗೊಳ್ಳುತ್ತಿದೆ. ಭವ್ಯ ಮಂದಿರದಲ್ಲಿ ಕುಳಿತು ಶ್ರೀರಾಮಚಂದ್ರನು ಸಾರ್ವಜನಿಕರಿಗೆ ದರ್ಶನವನ್ನು ನೀಡಲಿದ್ದಾನೆ. ಹೀಗಾಗಿ ಬರುವ ಜನವರಿ 22ರಂದು ನೂತನಂದಿರದಲ್ಲಿ ರಾಮಲಲ್ಲಾನ ಮೂರ್ತಿ ಪ್ರತಿಷ್ಠಾಪನೆಯಾಗಿ, ಪ್ರಾಣ ಪ್ರತಿಷ್ಠೆಯೂ ನಡೆಯಲಿದೆ. ಆದರೆ ಗರ್ಭಗುಡಿಯೊಳಗೆ ರಾಮನ ಮೂರ್ತಿ ಮಾತ್ರ ಇರಲಿದ್ದು ಸೀತೆಯ ವಿಗ್ರಹವನ್ನು ಇರಿಸಲಾಗುವದಿಲ್ಲ..ಈ ವಿಚಾರ ಇದೀಗ ಭಾರೀ ಕುತೂಹಲ ಕೆರಳಿಸಿದ್ದು, ರಾಮನ ಪಕ್ಕ ಸೀತೆ ಏಕೆ ಇರುವುದಿಲ್ಲ ಎಂಬ ಪ್ರಶ್ನೆ ಎದುರಾಗಿದೆ.

ಹೌದು, ನಮ್ಮ ಸಂಸ್ಕೃತಿ, ಪರಂಪರೆಯಲ್ಲಿ ನಾವು ನೋಡಿದ ಹಾಗೆ ಸೀತಾ-ರಾಮ ಒಟ್ಟಿಗೆ ಇರುವುದು ವಾಡಿಕೆ. ಅಷ್ಟೇ ಅಲ್ಲ ಅದು ದೈವದತ್ತವಾದ ಜೋಡಿ ಕೂಡ. ನಾವು ನೋಡುವ ಯಾವುದೇ ಫೋಟೋಗಳಲ್ಲಿ ಆಗಿರಬಹುದು, ದೇವಾಲಯ, ಮಂದಿರಗಳಲ್ಲಿ ಕೂಡ ಆಗಿರಬಹುದು ರಾಮ-ಸೀತೆಯರ ವಿಗ್ರಹ ಒಟ್ಟೊಟ್ಟಿಗೆ ಇರುತ್ತದೆ. ಆದರೆ ಇಡೀ ದೇಶವೇ ಹೆಮ್ಮೆ ಪಡುವ ಅಯೋಧ್ಯೆಯ ಭವ್ಯ ರಾಮ ಮಂದಿರದಲ್ಲಿ (Ayodhya Rama Mandhir) ಗರ್ಭಗುಡಿಯೊಳಗೆ ರಾಮನ ಮೂರ್ತಿ ಮಾತ್ರ ಪ್ರತಿಷ್ಠಾಪನೆಯಾಗಲಿದೆ. ಸೀತೆಯ ವಿಗ್ರಹ ಯಾಕಿಲ್ಲ ಎಂಬುದು ಹಲವರ ಪ್ರಶ್ನೆ. ಹಾಗಿದ್ರೆ ಇಲ್ಲಿದೆ ನೋಡಿ ಅದಕ್ಕೆ ಉತ್ತರ.

ಅಂದಹಾಗೆ ಈ ಕುರಿತಂತೆ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಮಾಹಿತಿ ನೀಡಿದ್ದು, ಅಯೋಧ್ಯೆ ರಾಮಮಂದಿರದಲ್ಲಿ ರಾಮನ ಜೊತೆ ಸೀತೆ ಇಲ್ಲದಿರಲು ಕಾರಣ ಅಲ್ಲಿ ಪ್ರತಿಷ್ಠಾಪನೆಯಾಗ್ತಿರುವ ಮೂರ್ತಿ. ಅಲ್ಲಿ ಸೀತೆ ಮದುವೆಯಾದ ನಂತ್ರ ಇರುವ ರಾಮನನ್ನು ನೀವು ಕಾಣಲು ಸಾಧ್ಯವಿಲ್ಲ. ಐದು ವರ್ಷದ ಬಾಲ ರಾಮನ ಮೂರ್ತಿ ಪ್ರತಿಷ್ಠಾಪನೆಯಾಗ್ತಿದೆ. ಯಾಕೆಂದರೆ ರಾಮನ ಮದುವೆ ನಡೆದಿದ್ದು 27ನೇ ವಯಸ್ಸಿನಲ್ಲಿ. ಹೀಗಾಗಿ ಬಾಲ ರಾಮನನ್ನು ನೀವು ಅಯೋಧ್ಯೆಯಲ್ಲಿ ನೋಡಬಹುದು ಎಂದಿದ್ದಾರೆ.

Leave A Reply

Your email address will not be published.