Mumbai Terror Attack: ಉಗ್ರ ಹಫೀಜ್ ಸಯೀದ್ ಗಡಿಪಾರಿಗೆ ಭಾರತ ಮನವಿ – ಆದರೆ ಪಾಕಿಸ್ತಾನ ಹೇಳಿದ್ದೇನು?

Share the Article

Mumbai Terror Attack: ಮುಂಬೈ ಭಯೋತ್ಪಾದನಾ ದಾಳಿಯ (Mumbai Terror Attack) ಮಾಸ್ಟರ್ ಮೈಂಡ್ ಹಫೀಜ್ ಸಯೀದ್ (Hafiz Saeed) ನನ್ನು ಹಸ್ತಾಂತರ ಮಾಡಲು ಪಾಕಿಸ್ತಾನಕ್ಕೆ ಭಾರತ ಮನವಿ ಮಾಡಿದೆ ಎನ್ನಲಾಗಿದೆ.

ಲಷ್ಕರ್-ಎ-ತೈಬಾದ ಸ್ಥಾಪಕನಾಗಿದ್ದು, 2008 ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ನನ್ನು ವಿಶ್ವಸಂಸ್ಥೆ ಭಯೋತ್ಪಾದಕ ಎಂದು ಘೋಷಿಸಲಾಗಿದೆ. ಸಯೀದ್ ಹಸ್ತಾಂತರಕ್ಕಾಗಿ ಮನವಿಯನ್ನು ಕೆಲವು ದಾಖಲೆಗಳೊಂದಿಗೆ ಇತ್ತೀಚೆಗೆ ಪಾಕಿಸ್ತಾನಕ್ಕೆ ಕಳುಹಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ನಿ ಶುಕ್ರವಾರ ಮಾಹಿತಿ ನೀಡಿದ್ದಾರೆ.

ಆರು ಅಮೆರಿಕನ್ನರು ಒಳಗೊಂಡಂತೆ 166 ಜನರ ಸಾವಿಗೆ ಕಾರಣವಾದ 2008 ರ ಮುಂಬೈ ದಾಳಿಯ ಜವಾಬ್ದಾರಿಯನ್ನು ಲಷ್ಕರ್-ಎ-ತೈಬಾ ವಹಿಸಿಕೊಂಡಿದೆ. ವಿದೇಶಾಂಗ ಕಚೇರಿ ವಕ್ತಾರ ಮುಲ್ತಾಜ್ ಜಹ್ರಾ ಬಲೂಚ್, “ಮನಿ ಲಾಂಡರಿಂಗ್ ಪ್ರಕರಣದಲ್ಲಿ” ಸಯೀದ್ ಅವರನ್ನು ಹಸ್ತಾಂತರಿಸುವಂತೆ ಕೋರಿ ಪಾಕಿಸ್ತಾನವು ಭಾರತೀಯ ಅಧಿಕಾರಿಗಳಿಂದ ಮನವಿಯನ್ನು ಪಡೆದಿದೆ. ಆದರೆ ಪಾಕಿಸ್ತಾನ ಮತ್ತು ಭಾರತದ ನಡುವೆ ಯಾವುದೇ ದ್ವಿಪಕ್ಷೀಯ ಹಸ್ತಾಂತರ ಒಪ್ಪಂದ ಅಸ್ತಿತ್ವದಲ್ಲಿಲ್ಲ ಎನ್ನಲಾಗುತ್ತಿದೆ.

ಇದನ್ನು ಓದಿ: Government Employee: ನಿವೃತ್ತ ಸರ್ಕಾರಿ ನೌಕರರೇ ಇತ್ತ ಗಮನಿಸಿ – ನಿಮಗಾಗಿ ಬಂದಿದೆ ಸರ್ಕಾರದ ಹೊಸ ಸುತ್ತೋಲೆ!!

Leave A Reply