Honey Trap: ದಾರಿಯಲ್ಲಿ ಹೋಗುತ್ತಿದ್ದ ಉದ್ಯಮಿಯ ಸೆಳೆದು ಹನಿಟ್ರ್ಯಾಪ್‌! ಬೆತ್ತಲೆ ವೀಡಿಯೋ, ಫೋಟೋ ತೋರಿಸಿ ಈ ತಂಡ ದೋಚಿದೆಷ್ಟು ಗೊತ್ತೇ?

Honey Trap: ಉದ್ಯಮಿಯೋರ್ವರನ್ನು ಮಾರ್ಗ ಮಧ್ಯದಲ್ಲೇ ಪರಿಚಯ ಮಾಡಿಕೊಂಡು ಹನಿಟ್ರ್ಯಾಪ್‌ಗೆ ಬೀಳುವಂತೆ ಮಾಡಿ, ಅವರಿಂದ ಐದು ಲಕ್ಷ ಹಣವನ್ನು ದೋಚಿದ ಘಟನೆಯೊಂದು ನಡೆದಿದೆ. ಚೆನ್ನೈನಿಂದ ಮೈಸೂರು ಮಾರ್ಗವಾಗಿ ಕೇರಳಕ್ಕೆ ಹೋಗುತ್ತಿದ್ದ ಉದ್ಯಮಿಯೇ ಈ ಹನಿಟ್ರ್ಯಾಪ್‌ ಬಲೆಗೆ ಬಿದ್ದ ವ್ಯಕ್ತಿ. ಮೋನಾ ಎಂಬ ಮುಸ್ಲಿಂ ಮಹಿಳೆಯೇ ಈ ಕೃತ್ಯದಲ್ಲಿ ಉದ್ಯಮಿಯನ್ನು ಸೆಳೆಯುವ ಕೆಲಸ ಮಾಡಿದ್ದಾರೆ. ಈಕೆಯ ಜೊತೆಗೆ ಫಜಲುಲ್ಲಾ ರೆಹಮಾನ್‌, ರಿಜ್ವಾನ್‌ ಕೂಡಾ ಸಾಥ್‌ ನೀಡಿದ್ದಾರೆ. ಇವರಿಗೆ ಇದೇ ಕೆಲಸ ಎನ್ನಲಾಗಿದೆ. ಹೆದ್ದಾರಿಯಲ್ಲಿ ಹೋಗುವವರನ್ನು ಈ ರೀತಿಯಾಗಿ ಬಲೆಗೆ ಬೀಳಿಸಿ ದೋಚುವುದು ಈ ತಂಡದ ಮುಖ್ಯ ಕೆಲಸ ಎನ್ನಲಾಗಿದೆ.

ಕೇರಳದಲ್ಲಿ ಉದ್ಯಮಿಯಾಗಿರುವ ಸುನ್ನಿ ಎಂಬುವವರೇ ಈ ಖೆಡ್ಡಾಕ್ಕೆ ಬಿದ್ದವರು. ಇವರು ಆಗಾಗ್ಗೆ ಚೆನ್ನೈಗೆ ಹೋಗುತ್ತಾ ಇರುತ್ತಾರೆ. ಆದರೆ ಈ ಬಾರಿ ಇವರನ್ನು ಈ ಹನಿಟ್ರ್ಯಾಪ್‌ನ ಮೂವರು ತಮ್ಮ ಬಲೆಗೆ ಬೀಳಿಸಿ ಬಲವಂತವಾಗಿ ಮನೆಯೊಂದಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಮೋನಾ ಜೊತೆ ಸುನ್ನಿಯನ್ನು ಬೆತ್ತಲೆಯಾಗಿ ಮಲಗಿಸಿ ಬಿಟ್ಟಿದ್ದಾರೆ. ನಂತರ ಫೋಟೋ ವೀಡಿಯೋ ಮಾಡಿದ್ದಾರೆ. ನಂತರ ಈ ಫೋಟೋ, ವೀಡಿಯೋ ತೋರಿಸಿ ಬ್ಲ್ಯಾಕ್‌ ಮೇಲ್‌ ಮಾಡಿದ್ದಾರೆ ಎಂದು ವರದಿಯಾಗಿದೆ. ಆದರೆ ಮೋನಾ ಒಬ್ಬಳೇ ಮೊದಲೇ ಬಲೆಗೆ ಬೀಳಿಸಿ ಮನೆಗೆ ಕರೆದುಕೊಂಡು ಹೋಗಿ ಇವರಿಬ್ಬರನ್ನು ಆಮೇಲೆ ಕರೆದಳೋ, ಅಥವಾ ಎಲ್ಲರೂ ಸೇರಿ ಕೃತ್ಯ ಮಾಡಿದ್ದಾರೋ ಗೊತ್ತಿಲ್ಲ. ಇವೆಲ್ಲ ತನಿಖೆಯಿಂದ ತಿಳಿದು ಬರಬೇಕಿದೆ.

ಇದನ್ನು ಓದಿ: Covid Cases: ದಿನೇ ದಿನೇ ಹೆಚ್ಚಾಗ್ತಾ ಇದೆ ಕೋವಿಡ್​ ಕೇಸ್​ಗಳು! ಮತ್ತೆ ಲಾಕ್​ಡೌನ್​ ಮಾಡ್ತಾರಾ?

ಆರೋಪಿಗಳು 10 ಲಕ್ಷ ನಮಗೆ ಬೇಕು ಎಂದು ಡಿಮ್ಯಾಂಡ್‌ ಮಾಡಿದ್ದಾರೆ ಕೊನೆಗೆ ಕಂಗಾಲಾದ ಉದ್ಯಮಿ ಐದು ಲಕ್ಷ ಹಣ ನೀಡಿದ್ದು, ನಂತರ ಸುನ್ನಿ ಬಳಿ ಇದ್ದ ಚಿನ್ನದ ಉಂಗುರ, ನಗದು ದೋಚಿದ್ದಾರೆ. ನಂತರ ಸುನ್ನಿ ಅವರು ಕೇರಳಕ್ಕೆ ಹೋಗಿ ಅಲ್ಲಿ ತಿರುನೆಲ್ಲಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ನಂತರ ಅಲ್ಲಿನ ಪೊಲೀಸರು ಈ ಕೇಸನ್ನು ಮೈಸೂರು ಗ್ರಾಮಾಂತರ ಠಾಣೆಗೆ ವರ್ಗಾಯಿಸಿದ್ದಾರೆ.

ಕೂಡಲೇ ಪೊಲೀಸರು ಮೂವರನ್ನು ಬಂಧಿಸಿದ್ದು, ಇವರಿಂದ 50 ಸಾಇರ ನಗದು, ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಇವರು ಹಲವು ಕಡೆ ಮಡಿಕೇರಿ ಸೇರಿದಂತೆ ಶ್ರೀಮಂತರನ್ನು ತನ್ನ ಹನಿಟ್ರ್ಯಾಪ್‌ಗೆ ಬೀಳಿಸಿ ಹಣ ವಸೂಲಿ ಮಾಡಿರುವ ಕುರಿತು ಪೊಲೀಸರಿಗೆ ಮಾಹಿತಿ ದೊರಕಿದೆ ಎನ್ನಲಾಗಿದೆ.

Leave A Reply

Your email address will not be published.