Chitradurga News: ಪಾಳು ಬಿದ್ದ ಮನೆಯಲ್ಲಿ 5 ಅಸ್ಥಿಪಂಜರಗಳು ಪತ್ತೆ; 2019 ರಲ್ಲೇ ಮೃತಪಟ್ಟ ಶಂಕೆ, ಬೆಚ್ಚಿಬಿದ್ದ ಜನತೆ!!!

Chitradurga News: ಪಾಳು ಬಿದ್ದ ಮನೆಯೊಂದರಲ್ಲಿ ಐದು ಅಸ್ಥಿಪಂಜರಗಳು ಪತ್ತೆಯಾಗಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಚಿತ್ರದುರ್ಗ ನಗರದ ಜಿಲ್ಲಾ ಕಾರಾಗೃಹ ರಸ್ತೆಯಲ್ಲಿ ಸುಮಾರು ವರ್ಷಗಳಿಂದ ಪಾಳು ಬಿದ್ದಿದ್ದ ಮನೆಯಲ್ಲಿ ಐದು ಮಂದಿಯ ಅಸ್ಥಿಪಂಜರ ಪತ್ತೆಯಾಗಿದೆ.

ಚಿತ್ರದುರ್ಗ ತಾಲೂಕಿನ ದೊಡ್ಡ ಸಿದ್ದವ್ವನಹಳ್ಳಿ ಮೂಲದ ಜಗನ್ನಾಥ ರೆಡ್ಡಿ (80) ಕುಟುಂಬವು ವಾಸ ಮಾಡುತ್ತಿತ್ತು ಎಂದು ಪ್ರಾಥಮಿಕ ತನಿಖೆ ಮೂಲಕ ತಿಳಿದು ಬಂದಿದೆ. ಜಗನ್ನಾಥ ರೆಡ್ಡಿ ಅವರು PWD ಇಲಾಖೆಯಲ್ಲಿ ಎಕ್ಸಿಕ್ಯೂಟಿವ್‌ ಇಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದರು, ನಂತರ ನಿವೃತ್ತಿ ಬಳಿಕ ಚಿತ್ರದುರ್ಗದಲ್ಲಿ ವಾಸವಿದ್ದರು ಎನ್ನಲಾಗಿದೆ.

ಜಗನ್ನಾಥ ರೆಡ್ಡಿ ಪತ್ನಿ ಪ್ರೇಮಕ್ಕ, ಪುತ್ರಿ ತ್ರಿವೇಣಿ, ಪುತ್ರ ಕೃಷ್ಣರೆಡ್ಡಿ ಹಾಗೂ ನರೇಂದ್ರ ರೆಡ್ಡಿ ಅವರು ಈ ಮನೆಯಲ್ಲಿ ವಾಸವಿದ್ದುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಜಗನ್ನಾಥ ರೆಡ್ಡಿ ಅವರ ಸಂಬಂಧಿ ಪವನ್‌ಕುಮಾರ್‌ ಎಂಬುವವರು ಬಡಾವಣೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಕೆಲ ವರ್ಷಗಳಿಂದ ಕುಟುಂಬದವರು ಅವರನ್ನು ಕಂಡಿಲ್ಲ. ಆ ಮನೆಯಲ್ಲಿ ಪತ್ತೆಯಾಗಿರುವ ಅಸ್ಥಿಪಂಜರಗಳು ಅವರದ್ದೇ ಆಗಿರಬಹುದು ಎಂಬು ಅನುಮಾನವಿದೆ. ಇವರು ಮೂರು ವರ್ಷದ ಹಿಂದೆಯೇ ಮೃತ ಹೊಂದಿರಬಹುದು ಎಂದು ಅನುಮಾನ ಇದೆ ಎಂದು ಸಂಬಂಧಿ ದೂರು ದಾಖಲು ಮಾಡಿದ್ದಾರೆ.

ಇದನ್ನು ಓದಿ: Bantwala: ಗುಡ್ಡ ಜರಿದು ಮಣ್ಣಿನಡಿ ಸಿಲುಕಿದು ಕಾರ್ಮಿಕರು!!!

ಮನೆಯಲ್ಲಿ ಸದ್ಯಕ್ಕೆ ಐದು ಅಸ್ಥಿಪಂಜರಗಳು ದೊರಕಿದ್ದು, ಪ್ರಕರಣದ ತನಿಖೆ ನಂತರ ಖಚಿತ ಮಾಹಿತಿ ದೊರೆಯಲಿದೆ ಎಂದು ಪೂರ್ವವಲಯ ಐಜಿಪಿ ತ್ಯಾಗರಾಜನ್‌ ಹೇಳಿದ್ದಾರೆ. ಮನೆ ತುಂಬಾ ವಾಸನೆ ಬರುತ್ತಿದ್ದು, ಎಫ್‌ಎಸ್‌ಎಲ್‌ ತಂಡ ಪರಿಶೀಲನೆ ಕೈಗೊಂಡಿದೆ ಎಂದು ಹೇಳಿದರು.

ಈ ಅಸ್ಥಿಪಂಜರು ಯಾರದು? ಯಾವ ರೀತಿ ಸಾವು ಸಂಭವಿಸಿದೆ ಇದರ ಕುರಿತು ತನಿಖೆ ನಡೆಸಲಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

Leave A Reply

Your email address will not be published.