Home News Ayodhya Airport: ಅಯೋಧ್ಯೆಯ ವಿಮಾನ ನಿಲ್ದಾಣಕ್ಕೆ ಕೊನೆಗೂ ನಡೆಯಿತು ನಾಮಕರಣ – ಆದ್ರೆ ಇಟ್ಟದ್ದು ರಾಮನ...

Ayodhya Airport: ಅಯೋಧ್ಯೆಯ ವಿಮಾನ ನಿಲ್ದಾಣಕ್ಕೆ ಕೊನೆಗೂ ನಡೆಯಿತು ನಾಮಕರಣ – ಆದ್ರೆ ಇಟ್ಟದ್ದು ರಾಮನ ಹೆಸರಲ್ಲ, ಮತ್ಯಾರದ್ದು ?

Ayodhya Airport

Hindu neighbor gifts plot of land

Hindu neighbour gifts land to Muslim journalist

Ayodhya Airport: ಕೋಟ್ಯಾನು ಕೋಟಿ ಹಿಂದುಗಳ 500 ವರ್ಷಗಳ ಕನಸು ಇನ್ನು ಕೆಲವೇ ದಿನಗಳಲ್ಲಿ ಲೋಕಾರ್ಪಣೆಗೊಳ್ಳುತ್ತಿದೆ. ಭವ್ಯ ಮಂದಿರದಲ್ಲಿ ಕುಳಿತು ಶ್ರೀರಾಮಚಂದ್ರನು ಸಾರ್ವಜನಿಕರಿಗೆ ದರ್ಶನವನ್ನು ನೀಡಲಿದ್ದಾನೆ. ಈ ಹಿನ್ನೆಲೆಯಲ್ಲಿ ಮೂಲ ಸೌಕರ್ಯಗಳು ಅಯೋಧ್ಯೆಯಲ್ಲಿ ಬರದಿಂದ ತಯಾರಿಯಾಗುತ್ತದೆ. ಅಂತಯೇ ಇದೀಗ ವಿಮಾನ ನಿಲ್ದಾಣವೂ(Ayodhya Airport)ಕೂಡ ಕಾಮಗಾರಿಗಳೆಲ್ಲವೂ ಮುಗಿದು ಸಾರ್ವಜನಿಕ ಓಡಾಟಕ್ಕೆ ಮುಕ್ತವಾಗಲಿದೆ. ಅಲ್ಲದೆ ವಿಮಾನ ನಿಲ್ದಾಣಕ್ಕೆ ಹೊಸ ಹೆಸರನ್ನು ಕೂಡ ನಾಮಕರಣ ಮಾಡಲಾಗಿದೆ.

 

ಹೌದು, ರಾಮ ಮಂದಿರ ಲೋಕಾರ್ಪಣೆಗೊಳ್ಳುತ್ತಿರುವ ಕಾರಣ ಅಯೋಧ್ಯೆಯ ಎಲ್ಲಾ ಅಚ್ಚಕಟ್ಟಾದ ಸೌಕರ್ಯಗಳನ್ನು ಒದಗಿಸಲು ಸರ್ಕಾರ ಸಕಲ ಸಿದ್ಧತೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಹೊಸ ವಿಮಾನ ನಿಲ್ದಾಣವನ್ನು ಕೂಡ ಸರ್ಕಾರ ಡಿಸೆಂಬರ್ 30ರಂದು ಉದ್ಘಾಟನೆ ಮಾಡಲಿದೆ. ಇದಕ್ಕೆ ಹೆಸರಿಡುವ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು, ಹಲವರು ಶ್ರೀ ರಾಮನ(Shree Rama) ಹೆಸರಿಡಿ ಎಂದು ಸೂಚಿಸಿದ್ದರು. ಅಲ್ಲದೆ ಈ ಪೈಕಿ ಮರ್ಯಾದಾ ಪುರುಷೋತ್ತಮ ಶ್ರೀರಾಮ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅನ್ನೋ ಹೆಸರೇ ಪ್ರಚಲಿತದಲ್ಲಿತ್ತು. ಆದರೀಗ ಆಯೋಧ್ಯೆ ಏರ್‌ಪೋರ್ಟ್‌ಗೆ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಯೋಧ್ಯೆ ಧಾಮ ಅನ್ನೋ ಹೆಸರನ್ನು ಅಂತಿಮ ಮಾಡಲಾಗಿದೆ.

ಇದನ್ನು ಓದಿ: Udupi ಯಲ್ಲಿ ಯುವತಿಗೆ ವ್ಯಕ್ತಿಯೋರ್ವನಿಂದ ವಿನಾಕಾರಣ ಕಿರುಕುಳ ಆರೋಪ, ಸ್ಥಳೀಯರಿಂದ ಬಿತ್ತು ಗೂಸಾ, ವೀಡಿಯೋ ವೈರಲ್‌!!!

ಅಂದಹಾಗೆ ರಾಮಮಂದಿರದ ಶಂಕುಸ್ಥಾಪನೆ ಸಮಾರಂಭಕ್ಕೆ ಕೆಲವು ದಿನಗಳ ಮೊದಲು ಹೊಸದಾಗಿ ನಿರ್ಮಿಸಲಾದ ಈ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ(PM Modi) ಅವರು ಡಿಸೆಂಬರ್ 30 ರಂದು ಉದ್ಘಾಟಿಸಲಿದ್ದಾರೆ. ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾ ಸಮಾರಂಭವು ಜನವರಿ 22, 2024 ರಂದು ನಡೆಯಲಿದೆ. ಉದ್ಘಾಟನೆಯ ದಿನದಂದು ಇಂಡಿಗೋ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಿಂದ ಮೊದಲ ವಿಮಾನಗಳು ಕಾರ್ಯನಿರ್ವಹಿಸಲಿವೆ.

 

ವಿಮಾನ ನಿಲ್ದಾಣದ ವೈಶಿಷ್ಟ್ಯ ಏನು?

ಮೊದಲ ಹಂತದ ಅತ್ಯಾಧುನಿಕ ವಿಮಾನ ನಿಲ್ದಾಣವನ್ನು 1,450 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದರ ಟರ್ಮಿನಲ್ ಕಟ್ಟಡವು 6,500 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿರುತ್ತದೆ, ವಾರ್ಷಿಕವಾಗಿ ಸುಮಾರು 10 ಲಕ್ಷ ಪ್ರಯಾಣಿಕರಿಗೆ ಸೇವೆ ಸಲ್ಲಿಸಲು ಸಜ್ಜುಗೊಂಡಿದೆ. ಅಲ್ಲದೆ 3,000 ಪ್ರಯಾಣಿಕರು ಮತ್ತು ವಾರ್ಷಿಕ 60 ಲಕ್ಷ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವನ್ನು ಭವಿಷ್ಯದಲ್ಲಿ ಇದು ಹೊಂದಲಿದೆ ಎಂದು ಮೂಲಗಳು ತಿಳಿಸಿವೆ.

 

ಕಟ್ಟಡದ ಮುಂಭಾಗವು ರಾಮ ಮಂದಿರದ ವಾಸ್ತುಶಿಲ್ಪವನ್ನು ಚಿತ್ರಿಸುತ್ತದೆ. ಒಳಭಾಗದಲ್ಲಿ ಸ್ಥಳೀಯ ಕಲೆ, ವರ್ಣಚಿತ್ರಗಳು ಮತ್ತು ಭಗವಾನ್ ರಾಮನ ಜೀವನವನ್ನು ಚಿತ್ರಿಸುವ ಭಿತ್ತಿಚಿತ್ರಗಳಿಂದ ಅಲಂಕರಿಸಲಾಗಿದೆ.