Home News GIG Employees Insurance: ಕರ್ನಾಟಕದಲ್ಲೇ ಮೊದಲು, ಡೆಲಿವರಿ ನೌಕರರಿಗೆ ಇನ್ನು ಮುಂದೆ ಸಿಗಲಿದೆ ಈ ಸೌಲಭ್ಯ!!!...

GIG Employees Insurance: ಕರ್ನಾಟಕದಲ್ಲೇ ಮೊದಲು, ಡೆಲಿವರಿ ನೌಕರರಿಗೆ ಇನ್ನು ಮುಂದೆ ಸಿಗಲಿದೆ ಈ ಸೌಲಭ್ಯ!!! ಕೂಡಲೇ ಅರ್ಜಿ ಸಲ್ಲಿಸಿ!!!

Hindu neighbor gifts plot of land

Hindu neighbour gifts land to Muslim journalist

Insurance to Gig employees: ಕಾರ್ಮಿಕ ಇಲಾಖೆ ವತಿಯಿಂದ ರಾಜ್ಯದ ಗಿಗ್‌ ಕಾರ್ಮಿಕರಿಗೆ ಜೀವ ವಿಮೆ ಹಾಗೂ ಅಪಘಾತ ವಿಮೆಗೆ ಅರ್ಜಿ ಆಹ್ವಾನಿಸಲಾಗಿದೆ. ಎಲ್ಲಾ ಅರ್ಹ ಗಿಗ್‌ ಕಾರ್ಮಿಕರು ಸೇವಾಸಿಂಧು ಪೋರ್ಟಲ್‌ನಲ್ಲಿ ನೊಂದಾಯಿಸಿಕೊಳ್ಳಬಹುದು. ಅಪಘಾತದಿಂದ ಮರಣ ಹಾಗೂ ಜೀವ ವಿಮಾ ಸೇರಿದಂತೆ ಒಟ್ಟು 4 ಲಕ್ಷ, ಸಂಪೂರ್ಣ ಶಾಶ್ವತ/ ಭಾಗಶಃ ದುರ್ಬಲತೆಗೆ ಹಾಗೂ ತಾತ್ಕಾಲಿಕ ದುರ್ಭಲತೆಗೆ ರೂ. 2 ಲಕ್ಷ, ಆಸ್ಪತ್ರೆ ವೆಚ್ಚ ಮರುಪಾವತಿ ರೂ 1 ಲಕ್ಷ, (ಅಪಘಾತ ಪ್ರಕರಣಗಳಿಗೆ ಮಾತ್ರ) ಫಲಾನುಭವಿಗಳಿಗೆ ದೊರಕಲಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಬಜೆಟ್‌ನಲ್ಲಿ ಇದನ್ನು ಘೋಷಿಸಿದ್ದು, ಅದರಂತೆ ರಾಜ್ಯ ಕಾರ್ಮಿಕ ಇಲಾಖೆ ಸಾಮಾಜಿಕ ಭದ್ರತಾ ಮಂಡಳಿ ಮೂಲಕ ರಾಜ್ಯದ ಗಿಗ್‌ ಕಾರ್ಮಿಕರಿಗೆ ಎರಡು ಲಕ್ಷ ಜೀವವಿಮೆ ಹಾಗೂ ಅಪಘಾತ ಪರಿಹಾರವಾಗಿ ಎರಡು ಲಕ್ಷ ರೂ.ಗಳ ವಿಮಾ ಸೌಲಭ್ಯ ಸಿಗಲಿದೆ. ಆದಾಯ ತೆರಿಗೆ ಪಾವತಿದಾರಲ್ಲದವರು, ಭವಿಷ್ಯನಿಧಿ ಹಾಗೂ ಇಎಸ್‌ಐ ಫಲಾನುಭವಿ ಅಲ್ಲದವರು, ಗಿಗ್‌ ವೃತ್ತಿಯನ್ನು ಕರ್ನಾಟಕದಲ್ಲಿ ಮಾಡಿಕೊಂಡವರಿಗೆ ಈ ಯೋಜನೆಗೆ ಅರ್ಹರು.

18ರಿಂದ 60 ವಯಸ್ಸಿನವರು ಈ ಯೋಜನೆಗೆ ಅರ್ಹರು. ಇ-ಕಾಮರ್ಸ್‌ ಸಂಸ್ಥೆಗಳಾದ ಅಮೆಜಾನ್‌, ಬಿಗ್‌ಬಾಸ್ಕೆಟ್‌, ಫ್ಲಿಪ್‌ಕಾರ್ಟ್‌, ಡಾಮಿನೋಜ್‌ ಸಂಸ್ಥೆ, ಸ್ವಿಗ್ಗಿ, ಜೋಮ್ಯಾಟೋ ಫುಡ್‌ ಡೆಲಿವರಿ, ಇಲ್ಲಿ ಪೂರ್ಣಕಾಲಿಕ/ಅರೆಕಾಲಿಕ ಡೆಲಿವರಿ ನೌಕರರು ಈ ಯೋಜನೆಗೆ ಅರ್ಹರು.

ಇದನ್ನು ಓದಿ: Kadaba: ಹೊಳೆಗೆ ಬಿದ್ದ ಜ್ಯೋತಿಷಯ ಕಾರು!!! ಅಲ್ಪಸ್ವಲ್ಪ ಗಾಯದಿಂದ ಪಾರು!