Wild Elephant video: ದಿಢೀರನೆ ಕೋರ್ಟ್‌ಗೆ ಎಂಟ್ರಿ ಕೊಟ್ಟ ಕಾಡಾನೆ! ಪಾಪ ಅದೇನು ಕೆಲಸ ಇತ್ತೋ?

Share the Article

Wild Elephant: ಬುಧವಾರ ರೋಶನಾಬಾದ್‌ನ ಜಿಲ್ಲಾ ನ್ಯಾಯಾಲಯದ ಆವರಣವೊಂದಕ್ಕೆ ಏಕಾಏಕಿ ಕಾಡಾನೆಯೊಂದು ನುಗ್ಗಿ ಆತಂಕ ಸೃಷ್ಟಿಯನ್ನುಂಟು ಮಾಡಿದೆ. ರಾಜಾಜಿ ಹುಲಿ ಸಂರಕ್ಷಿತ ಪ್ರದೇಶದಿಂದ ಹರಿದ್ವಾರ ನ್ಯಾಯಾಲಯದ ಆವರಣಕ್ಕೆ ನುಗ್ಗಿದ ಕಾಡಾನೆ ಅಲ್ಲಿದ್ದ ಜನರಲ್ಲಿ ಒಮ್ಮೆಲೇ ಸಂಚಲನ ಮೂಡಿಸಿತ್ತು.

ಈ ಕಾಡಾನೆ ಹರಿದ್ವಾರದ ಜಿಲ್ಲಾಧಿಕಾರಿ ಕಚೇರಿ ಆವರಣವನ್ನು ತಲುಪಿದೆ. ಅನಂತರ ಇದು ಜಿಲ್ಲಾ ಮ್ಯಾಜಿಸ್ಟ್ರೇಟ್‌ ಕಚೇರಿಯ ಮೂಲಕ ಹಾದು ಹೋಗಿ ನ್ಯಾಯಾಲಯದ ಮುಖ್ಯ ದ್ವಾರದವರೆಗೆ ಸಾಗಿ ಕೋರ್ಟ್‌ ಪ್ರವೇಶಿಸಿದೆ.

ನಂತರ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿ ಪಟಾಕಿ ಸಿಡಿಸಿ ಕಾಡಿನತ್ತ ಓಡಿಸಿದ್ದಾರೆ.

Leave A Reply