School Holiday List: ಇಂದಿನಿಂದ ನಾಲ್ಕು ದಿನಗಳ 1-8 ನೇ ತರಗತಿ ಮಕ್ಕಳಿಗೆ ರಜೆ ಘೋಷಣೆ!!

School Holiday: ಹವಾಮಾನ ಇಲಾಖೆ ಹೇಳಿದ ಪ್ರಕಾರ, ಶೀತದ ಅಲೆಗಳ ಹಾವಳು ಮುಂದಿನ ಮೂರು ದಿನಗಳವರೆಗೆ ಇರಲಿದ್ದು, ದೆಹಲಿ-ಎನ್‌ಸಿಆರ್‌ ಸೇರಿದಂತೆ ಉತ್ತರ ಭಾರತದ ಎಲ್ಲಾ ರಾಜ್ಯಗಳಲ್ಲಿ ಇರಲಿದೆ ಎಂದು ತಿಳಿದು ಬಂದಿದೆ.

 

ತೀವ್ರ ತರದ ಮಂಜು-ಚಳಿಯಿಂದಾಗಿ ಕೆಲವೆಡೆ ಶಾಲೆಗಳಿಗೆ ರಜೆ ನೀಡಲಾಗಿದೆ. ಹಾಗೆನೇ ಕೆಲವು ಕಡೆ ಶಾಲಾ ಅವಧಿಯ ಸಮಯ ಬದಲಾವಣೆ ಕೂಡಾ ಮಾಡಲಾಗಿದೆ.

1ನೇ ತರಗತಿಯಿಂದ 8 ನೇ ತರಗತಿಯವರೆಗಿನ ಶಾಲೆಗಳ ಸಮಯವನ್ನು ಬದಲಾಯಿಸಲಾಗಿದ್ದು, ಡಿ.28 ರಿಂದ ಶಾಲೆಗಳು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ತೆರೆದಿರುತ್ತದೆ ಎಂದು ಬಿಎಸ್‌ಎ (ಶಿಕ್ಷಣಾಧಿಕಾರಿ) ಆದೇಶ ಹೊರಡಿಸಿದ್ದಾರೆ ಎಂದು ವರದಿಯಾಗಿದೆ.

ಆಲಿಗಢದಲ್ಲಿಯೂ ಚಳಿಯಿಂದಾಗಿ ಮುಂದಿನ ಎರಡು ದಿನಗಳ ಕಾಲ ಶಾಲೆಗಳಿಗೆ ರಜೆ ನೀಡಲಾಗಿದೆ. ಡಿ.29 ರವರೆಗೆ ಯುಪಿ ಬೋರ್ಡ್‌ನಿಂದ ಸಿಬಿಎಸ್‌ಇ, ಐಸಿಎಸ್‌ಇ ಬೋರ್ಡ್‌ವರೆಗಿನ ಶಾಲೆಗಳಿಗೆ ರಜೆ ನೀಡಲಾಗಿದೆ. ಡಿ.31ರವರೆಗೆ ಜಲೌನ್‌ನಲ್ಲಿ 1ನೇ ತರಗತಿಯಿಂದ 8 ನೇ ತರಗತಿಯವರೆಗೆ ಶಾಲೆಗಳು ಮುಚ್ಚಲ್ಪಡುತ್ತದೆ. ಉತ್ತರಪ್ರದೇಶದ ಇಟಾಹ್‌ನಲ್ಲಿ 1 ರಿಂದ 8 ನೇ ತರಗತಿಯವರೆಗಿನ ಶಾಲೆಗಳಿಗೆ ಡಿ.28ರ ವರೆಗೆ ರಜೆ ನೀಡಲಾಗಿದೆ.

ಇಟಾಹ್‌ನಲ್ಲಿ ಕೂಡಾ ಶಾಲೆಗಳನ್ನು ಮುಚ್ಚುವಂತೆ ಮ್ಯಾಜಿಸ್ಟ್ರೇಟ್‌ ಪ್ರೇಮ್‌ ರಂಜನ್‌ ಸಿಂಗ್‌ ಆದೇಶ ಹೊರಡಿಸಿರುವುದಾಗಿ ವರದಿಯಾಗಿದೆ. ಹಾಗೆನೇ ಬೆಳಿಗ್ಗೆ 10ರಿಂದ ಮಧ್ಯಾಹ್ನ 3 ವರೆಗೆ ಮಥುರಾದಲ್ಲಿ ಶಾಲೆಗಳ ಸಮಯವನ್ನು ನಿಗದಿಪಡಿಸಲಾಗಿದೆ.

Leave A Reply

Your email address will not be published.