8th Pay Commission :ಕೇಂದ್ರ ನೌಕರರಿಗೆ ಮತ್ತೊಂದು ಸಂತಸದ ಸುದ್ದಿ: ಹೊಸ ವರ್ಷದ ಹೊಸ ನಿಯಮದಡಿ ವೇತನದಲ್ಲಿ ಆಗಲಿದೆ ಭಾರೀ ಹೆಚ್ಚಳ!!
8th Pay Commission: ಕೇಂದ್ರ ನೌಕರರಿಗೆ ಮಹತ್ವದ ಸುದ್ದಿ ಇಲ್ಲಿದೆ ನೋಡಿ!!!ಕೇಂದ್ರ ನೌಕರರು ಮತ್ತು ಪಿಂಚಣಿದಾರರು 7ನೇ ವೇತನ ಆಯೋಗದ( 7th Pay Commission)ಬಳಿಕ 8ನೇ ವೇತನ ಆಯೋಗವನ್ನು(8th Pay Commission)ಜಾರಿಗೆ ತರುವಂತೆ ಒತ್ತಾಯಿಸಿ ಅನೇಕ ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವುದು ಗೊತ್ತಿರುವ ಸಂಗತಿ. ಹೊಸ ವರ್ಷದಲ್ಲಿ ಹೊಸ ಆಯೋಗ ರಚನೆ ಆಗುವುದೇ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಇದರ ಬೆನ್ನಲ್ಲೇ 2024ರಲ್ಲಿ ದೇಶದಲ್ಲಿ ಲೋಕಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆ ಕೇಂದ್ರ ಸರ್ಕಾರಿ ನೌಕರರನ್ನು ಮನವೊಲಿಸುವ ನಿಟ್ಟಿನಲ್ಲಿ ಸರ್ಕಾರ 8ನೇ ವೇತನ ಆಯೋಗ ರಚನೆ ಆಗಬಹುದು ಎಂದು ನೌಕರರು ನಿರೀಕ್ಷಿಸುತ್ತಿದ್ದಾರೆ.
7ನೇ ವೇತನ ಆಯೋಗದಡಿಯಲ್ಲಿ ನೌಕರರ ಕನಿಷ್ಠ ಮೂಲ ವೇತನ 18,000 ರೂ. ಆಗಿದೆ. 7 ನೇ ಕೇಂದ್ರ ವೇತನ ಆಯೋಗದ ಅನುಸಾರ, ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ ಮತ್ತು ಡಿಯರ್ನೆಸ್ ರಿಲೀಫ್ (DR) ಅನ್ನು ಇತ್ತೀಚೆಗೆ 42% ರಿಂದ 46% ಕ್ಕೆ ಹೆಚ್ಚಿಸಲಾಗಿದೆ. ಈ ಪರಿಷ್ಕೃತ ದರವು ಜುಲೈ 1, 2023 ರಿಂದ ಅನ್ವಯವಾಗಲಿದೆ.
ಮುಂಗಾರು ಅಧಿವೇಶನದಲ್ಲಿ ಎಂಟನೇ ವೇತನ ಆಯೋಗವನ್ನು ರಚಿಸುವ ಬಗ್ಗೆ ಯಾವುದೇ ರೀತಿಯ ಯೋಜನೆ ಸರ್ಕಾರದ ಮುಂದೆಯಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದೆ. ಆದರೆ, ಸರ್ಕಾರದ ಈ ನಿಲುವು ಶೀಘ್ರದಲ್ಲೇ ಬದಲಾಗಬಹುದು ಎನ್ನುವುದು ಬಲ್ಲ ಮೂಲಗಳ ಅನಿಸಿಕೆ. ಜನವರಿಯಲ್ಲಿ ತುಟ್ಟಿಭತ್ಯೆಯಲ್ಲಿ ಹೆಚ್ಚಳವಾಗುವ ನಿರೀಕ್ಷೆಯಿದ್ದು, 7ನೇ ವೇತನ ಆಯೋಗದ ಶಿಫಾರಸ್ಸಿನ ಅನುಸಾರ ತುಟ್ಟಿಭತ್ಯೆ ಶೇ.50ಕ್ಕೆ ತಲುಪಿದ ಸಂದರ್ಭ ತುಟ್ಟಿಭತ್ಯೆ ಶೇ.0ಗೆ ಇಳಿಕೆಯಾಗಲಿದೆ. ಶೇ.50ರಷ್ಟು ತುಟ್ಟಿಭತ್ಯೆ ಮೂಲ ವೇತನಕ್ಕೆ ಸೇರ್ಪಡೆಯಾಗಲಿದೆ. ಹೀಗಾದರೆ ವೇತನ ಪರಿಷ್ಕರಣೆಯಾಗಲಿದೆ. ವೇತನ ಪರಿಷ್ಕರಣೆಗಾಗಿ ಮುಂದಿನ ವೇತನ ಆಯೋಗ ರಚನೆ ಅನಿವಾರ್ಯವಾಗಿದೆ. 8ನೇ ವೇತನ ಆಯೋಗ ರಚನೆಗೊಂಡು ಜಾರಿಯಾದರೆ ಸುಮಾರು 48.67 ಲಕ್ಷ ಕೇಂದ್ರ ನೌಕರರು ಮತ್ತು 67.95 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ.
ಇದನ್ನು ಓದಿ: Parle-G Biscuit ಪ್ಯಾಕೆಟ್ ನಲ್ಲಿದ್ದ ಮುದ್ದು ಮುಖದ ಬಾಲೆ ಬದಲಾವಣೆ!?: ಹೊಸ ಮುಖ ಬಂತು, ಯಾರಿದು ಗೊತ್ತೇ?
Central government employees getting 8th pay commission but in Karnataka we still 6th pay
When we get 7th pay commission