SBI FD Rate: SBI ಪರಿಷ್ಕೃತ ಬಡ್ಡಿ ದರದ ಬಗ್ಗೆ ಬಿಗ್ ಅಪ್ಡೇಟ್ ಇಲ್ಲಿದೆ ನೋಡಿ!!

SBI FD Rates : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸ್ಥಿರ ಠೇವಣಿಗಳ (FDs) ಮೇಲಿನ ಬಡ್ಡಿದರಗಳನ್ನು(State Bank of India fixed deposits) ಹೆಚ್ಚಿಸಿದ್ದು, ಈ ಬಡ್ಡಿದರವು 2 ಕೋಟಿ ರೂ.ಗಿಂತ ಕಡಿಮೆ FDಗಳಿಗೆ ಅನ್ವಯವಾಗಲಿದೆ. ಹೊಸ ದರವು ಇಂದಿನಿಂದ, 27 ಡಿಸೆಂಬರ್ 2023 ರಿಂದ ಜಾರಿಗೆ ಬರಲಿದೆ.

 

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಫಿಕ್ಸೆಡ್ ಡೆಪಾಸಿಟ್ಗಳ ಬಡ್ಡಿದರ (fd rates) ಹೆಚ್ಚಿಸಿದೆ. 2 ಕೋಟಿ ರೂ ಒಳಗಿನ ಠೇವಣಿಗಳಿಗೆ ಈ ದರ ಬದಲಾವಣೆ ಅನ್ವಯವಾಗುತ್ತದೆ. ಒಂದರಿಂದ ಮೂರು ವರ್ಷ, ಹಾಗೂ ಐದರಿಂದ ಹತ್ತು ವರ್ಷದ ಅವಧಿಯವರೆಗಿನ ಠೇವಣಿಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಎಫ್ಡಿಗಳಿಗೂ ಎಸ್ಬಿಐ ಬಡ್ಡಿ ದರ ಹೆಚ್ಚಿಸಿದೆ. ಠೇವಣಿಗಳಿಗೆ 50 ಮತ್ತು 25 ಬೇಸಿಸ್ ಅಂಕಗಳಷ್ಟು ಬಡ್ಡಿದರವನ್ನು ಎಸ್ಬಿಐ ಹೆಚ್ಚಳ ಮಾಡಿದೆ.

 

ಕನಿಷ್ಠ ಡೆಪಾಸಿಟ್ ಎಂದರೆ ಏಳು ದಿನದಿಂದ 45 ದಿನದವರೆಗಿನ ಠೇವಣಿಗಳಿಗೆ ಬಡ್ಡಿದರವನ್ನು 50 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಳ ಮಾಡಲಾಗಿದೆ. 46 ದಿನದಿಂದ 179 ದಿನದವರೆಗಿನ ಠೇವಣಿಗೆ 25 ಮೂಲಾಂಕಗಳಷ್ಟು ಹೆಚ್ಚು ಬಡ್ಡಿ ದೊರೆಯಲಿದೆ. 180 ದಿನದಿಂದ 210 ದಿನದವರೆಗಿನ ಅವಧಿಯ ಠೇವಣಿಗಳಿಗೂ 50 ಮೂಲಾಂಕಗಳಷ್ಟು ಹೆಚ್ಚು ಬಡ್ಡಿ ಸಿಗಲಿದೆ.

 

ಎಸ್ಬಿಐನ ವಿವಿಧ ಎಫ್ಡಿ ದರಗಳು ಹೀಗಿವೆ:

* 7 ದಿನದಿಂದ 45 ದಿನದವರೆಗಿನ ಠೇವಣಿಗೆ ಶೇ. 3.50ರಷ್ಟು ಬಡ್ಡಿ

* 46 ದಿನದಿಂದ 179 ದಿನದವರೆಗೆ ಶೇ. 4.75ರಷ್ಟು ಬಡ್ಡಿ

* 180 ದಿನದಿಂದ 210 ದಿನ: ಶೇ. 5.75ರಷ್ಟು ಬಡ್ಡಿ

* 211 ದಿನದಿಂದ 1 ವರ್ಷಕ್ಕಿಂತ ಕಡಿಮೆ ಅವಧಿಯವರೆಗೂ: ಶೇ. 6 ಬಡ್ಡಿ

* 1 ವರ್ಷದಿಂದ 2 ವರ್ಷಕ್ಕಿಂತ ಕಡಿಮೆ ಅವಧಿಯವರೆಗೆ ಶೇ. 6.80 ಬಡ್ಡಿ

* 2 ವರ್ಷದಿಂದ 3 ವರ್ಷದೊಳಗೆ ಶೇ. 7 ಬಡ್ಡಿ

* 3 ವರ್ಷದಿಂದ 5 ವರ್ಷದೊಳಗೆ: ಶೇ. 6.75 ಬಡ್ಡಿ

* 5 ವರ್ಷದಿಂದ 10 ವರ್ಷದೊಳಗೆ: ಶೇ. 6.50 ಬಡ್ಡಿ

ದರ ಪರಿಷ್ಕರಣೆ ಬಳಿಕ ಎಸ್ಬಿಐನಲ್ಲಿ ಠೇವಣಿಗಳಿಗೆ ಬಡ್ಡಿ ದರ ಶೇ. 3.50ರಿಂದ ಆರಂಭವಾಗಿ ಶೇ. 7ರವರೆಗೂ ಇದೆ. ಹಿರಿಯ ನಾಗರಿಕರ ಠೇವಣಿಗಳಿಗೆ ಶೇ. 4ರಿಂದ ಶೇ. 7.50ಯವರೆಗೂ ಬಡ್ಡಿದರ ಇದೆ. ಆದರೆ, ಎಸ್ಬಿಐ ವಿಶೇಷ ಠೇವಣಿ ಸ್ಕೀಮ್ ಆದ 400 ದಿನಗಳ ಅಮೃತ್ ಕಳಶ್ ಯೋಜನೆಯಲ್ಲಿ ಸಾಮಾನ್ಯ ನಾಗರಿಕರು ಶೇ. 7.10ರಷ್ಟು ಬಡ್ಡಿ, ಹಿರಿಯ ನಾಗರಿಕರು ಶೇ. 7.60ರಷ್ಟು ಬಡ್ಡಿ ಪಡೆಯಬಹುದಾಗಿದೆ.

 

ಹಿರಿಯ ನಾಗರಿಕರಿಗೆ ಪರಿಷ್ಕೃತ ಎಸ್ಬಿಐ ಎಫ್ಡಿ ದರಗಳು ಹೀಗಿವೆ:

7 ದಿನದಿಂದ 45 ದಿನದವರೆಗೆ ಶೇ. 4 ಬಡ್ಡಿ ಸಿಗಲಿದೆ.

46 ದಿನದಿದ 179 ದಿನದವರೆಗೆ ಶೇ. 5.25 ಬಡ್ಡಿ ಸಿಗಲಿದೆ.

180 ದಿನದಿಂದ 210 ದಿನದವಡೆಗೆ ಶೇ. 6.25 ಬಡ್ಡಿ ಸಿಗಲಿದೆ.

211 ದಿನದಿಂದ 1 ವರ್ಷದವರೆಗೆ ಶೇ. 6.5 ಬಡ್ಡಿ ಸಿಗಲಿದೆ.

1 ವರ್ಷದಿಂದ 2 ವರ್ಷದವರೆಗೆ ಶೇ. 7.30 ಬಡ್ಡಿ ಸಿಗಲಿದೆ.

2 ವರ್ಷದಿಂದ 3 ವರ್ಷದವರೆಗೆ ಶೇ. 7.50 ಬಡ್ಡಿ ಸಿಗಲಿದೆ.

3 ವರ್ಷದಿಂದ 5 ವರ್ಷದವರೆಗೆ ಶೇ. 7.25 ಬಡ್ಡಿ ಸಿಗಲಿದೆ.

5 ವರ್ಷದಿಂದ 10 ವರ್ಷದವರೆಗೆ ಶೇ. 7.5 ಬಡ್ಡಿ ಸಿಗಲಿದೆ.

Leave A Reply

Your email address will not be published.