Nail Cutter: ‘ನೈಲ್ ಕಟ್ಟರ್’ ನಲ್ಲಿ ಈ ಎರಡು ಬ್ಲೇಡ್ ಇರೋದು ಇದೇ ಕಾರಣಕ್ಕಂತೆ !! ಇದುವರೆಗೂ ಯಾರಿಗೂ ಗೊತ್ತಿಲ್ಲ ನೋಡಿ ಈ ಸತ್ಯ

Beauty Tips: ನಾವೆಲ್ಲ ಉಗುರುಗಳನ್ನು ಕತ್ತರಿಸಲು ನೇಲ್ ಕಟ್ಟರ್ ಬಳಕೆ ಮಾಡುವುದು ಸಹಜ. ಆದರೆ, ಈ ನೇಲ್ ಕಟ್ಟರ್(Nail Cutter)ನಲ್ಲಿ ಎರಡು ಬ್ಲೇಡ್ (Blades)ತರಹದ ಬಿಡಿಭಾಗಗಳಿರುವುದನ್ನು ಗಮನಿಸಿರಬಹುದು. ಆದರೆ, ಈ ಬ್ಲೇಡ್ಗಳು ಏಕೆ ಇರುತ್ತದೆ ಎಂಬುದು ನಿಮಗೆ ತಿಳಿದಿದೆಯೇ??.

 

 

ನೇಲ್ ಕಟ್ಟರ್ ಗಳನ್ನು ಉಗುರು ಕತ್ತರಿಸಲು ಮಾತ್ರ ಬಳಕೆ ಮಾಡಲಾಗುತ್ತದೆ ಅದನ್ನು ಬಿಟ್ಟರೆ ನೇಲ್ ಕಟ್ಟರ್ನಿಂದ ಬೇರೇನೂ ಉಪಯೋಗವಿಲ್ಲ ಎಂದು ನಾವೆಲ್ಲ ಭಾವಿಸುವುದು ಸಹಜ. ಆದರೆ ನೇಲ್ ಕಟ್ಟರ್ 2 ಬ್ಲೇಡ್ ಗಳಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ನೇಲ್ ಕಟ್ಟರ್ ಗಳು ಚಿಕ್ಕದಾಗಿದ್ದು ಎಲ್ಲಿಗೆ ಬೇಕಾದರೂ ನೀವು ತೆಗೆದುಕೊಂಡು ಹೋಗಬಹುದು. ನೇಲ್ ಕಟ್ಟರ್ ಬ್ಲೇಡ್ ಅನ್ನು ಕತ್ತರಿಸಲು, ಕೊರೆಯಲು ಮತ್ತು ಬಾಟಲಿಗಳನ್ನು ತೆರೆಯುವುದಕ್ಕೆ ಬಳಸಬಹುದು.

 

ನೀವು ಪ್ರವಾಸಕ್ಕೆ ಹೊರಗೆ ಹೋಗುವಾಗ ಈ ಚಿಕ್ಕ ಚಾಕು ಮೂಲಕ ನಿಂಬೆಹಣ್ಣು, ಕಿತ್ತಳೆ ಹಣ್ಣುಗಳನ್ನು ಸುಲಭವಾಗಿ ಕತ್ತರಿಸಬಹುದು. ಉಗುರು ಕ್ಲಿಪ್ಪರ್ನ ಚೂಪಾದ ಬಾಗಿದ ಬ್ಲೇಡ್ ಉಗುರನ್ನು ಸ್ವಚ್ಛಗೊಳಿಸುವ ಉದ್ದೇಶದಿಂದ ನೀಡಲಾಗುತ್ತದೆ ಎಂದು ಅಂದುಕೊಳ್ಳುವುದು ಸಹಜ. ಆದರೆ ನೇಲ್ ಕಟ್ಟರ್ ಬ್ಲೇಡ್ ಅನ್ನು ಬಾಟಲಿಯ ಮುಚ್ಚಳವನ್ನು ತೆರೆಯಲು ಬಳಸಬಹುದು.

Leave A Reply

Your email address will not be published.