Ram Mandir: ರಾಮನನ್ನು ಅರಸಿ ಮುಂಬೈನಿಂದ ಅಯೋಧ್ಯೆಗೆ ಪಾದಯಾತ್ರೆ ಹೊರಟ ಮುಸ್ಲಿಂ ಹುಡುಗಿ !!

Ram Mandir: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯ ರಾಮಮಂದಿರದ (Ram Mandir) ಲೋಕಾರ್ಪಣೆಗೆ ದಿನಗಣನೆ ಆರಂಭವಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ (Ayodhya Ram Mandir) ಜನವರಿಯಲ್ಲಿ ಉದ್ಘಾಟನೆ ಆಗಲಿದ್ದು, ಎಲ್ಲೆಲ್ಲೂ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

 

ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಮಮಂದಿರ ಲೋಕಾರ್ಪಣೆ ಮಾಡಲಿದ್ದು, ಗರ್ಭಗುಡಿಯಲ್ಲಿ ರಾಮಲಲ್ಲಾನ ಮೂರ್ತಿಯನ್ನು ಪ್ರತಿಷ್ಠಾಪನೆ ನಡೆಯಲಿದ್ದು, ಈಗಾಗಲೇ ಸಾವಿರಾರು ಗಣ್ಯರಿಗೆ ರಾಮಮಂದಿರ ಟ್ರಸ್ಟ್ನಿಂದ ಆಹ್ವಾನ ಕಳುಹಿಸಲಾಗಿದೆ. ಇದೆಲ್ಲದರ ನಡುವೆ ಮುಂಬೈನ ಮುಸ್ಲಿಂ ಯುವತಿ ಶಬನಮ್ ಶೇಖ್ (Shabnam Shaikh) ಅವರು ಶ್ರೀರಾಮನ ದರ್ಶನದ ನಿಮಿತ್ತ ಅಯೋಧ್ಯೆಗೆ ಪಾದಯಾತ್ರೆ ಕೈಗೊಂಡಿದ್ದು, ಭಾರೀ ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ. ಇಸ್ಲಾಂ ಧರ್ಮದಲ್ಲಿ ಜನಿಸಿ ರಾಮನ ದರ್ಶನಕ್ಕೆ ಕಾತುರದಿಂದ ಕಾಲ್ನಡಿಗೆಯಲ್ಲಿ ಪಯಣ ಆರಂಭಿಸಿದ್ದಾರೆ.

ರಾಮನ ಪರಮ ಭಕ್ತೆಯಾಗಿರುವ ಶಬನಮ್ ಶೇಖ್ (Shabnam Shaikh) ತಾನು ಸನಾತನಿ ಎಂದು ಕರೆದುಕೊಂಡಿದ್ದು, ಮುಂಬೈನಿಂದ ಅಯೋಧ್ಯೆಗೆ ಪಾದಯಾತ್ರೆ ಆರಂಭಿಸಿದ್ದಾರೆ. ಶ್ರೀರಾಮನ ಧ್ವಜ ಹಿಡಿದು ಕಾಲ್ನಡಿಗೆಯಲ್ಲಿ ನೂರಕ್ಕೂ ಅಧಿಕ ಕಿಲೋಮೀಟರ್ ಮಾರ್ಗವನ್ನು ಕ್ರಮಿಸಿದ್ದಾರೆ. ಈ ಪಯಣದ ಉದ್ದಕ್ಕೂ ಶ್ರೀರಾಮನ ಭಕ್ತರ ಭೇಟಿಯಾಗುತ್ತ, ಜೈ ಶ್ರೀರಾಮ್ ಜಯಘೋಷದ ನಡುವೆ ಸಾಗುತ್ತಿರುವ ಇವರ ವಿಡಿಯೊಗಳು ವೈರಲ್ ಆಗಿದೆ. ತಮ್ಮ ಪಾದಯಾತ್ರೆಯ ದಿನನಿತ್ಯದ ವಿಡಿಯೊಗಳನ್ನು ಶಬನಮ್ ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇಸ್ಲಾಂ ಧರ್ಮದಲ್ಲಿ ಜನಿಸಿ, ರಾಮನ ದರ್ಶನಕ್ಕೆ ಹೊರಟಿರುವ ಶಬನಮ್ ಅವರಿಗೆ ದಾರಿಯುದ್ದಕ್ಕೂ ಹಿಂದು ಸಂಘಟನೆಗಳ ಕಾರ್ಯಕರ್ತರು, ರಾಮ ಭಕ್ತರು ಬೆಂಬಲ ನೀಡುತ್ತಿದ್ದಾರೆ.

Leave A Reply

Your email address will not be published.