Drone Attack: ಮಂಗಳೂರಿಗೆ ಬರುತ್ತಿದ್ದ ಹಡಗಿನ ಮೇಲೆ ದಾಳಿ ನಡೆಸಿದ್ದು ಯಾರು? ಇಲ್ಲಿದೆ ಮಹತ್ವದ ಮಾಹಿತಿ!!!

Drone Attack: ಗುಜರಾತ್‌ ಕರಾವಳಿಯ ಅರಬ್ಬಿ ಸಮುದ್ರದಲ್ಲಿ 21 ಭಾರತೀಯರನ್ನು ಒಳಗೊಂಡತೆ 23 ಸಿಬ್ಬಂದಿಯನ್ನು ಹೊಂದಿದ್ದ ವ್ಯಾಪಾರಿ ನೌಕೆಯ ಮೇಲೆ ನಿನ್ನೆ ಡ್ರೋನ್‌ ಅಟ್ಯಾಕ್‌(Drone Attack) ನಡೆದಿರುವ ಕುರಿತು ವರದಿಯಾಗಿತ್ತು. ಇದೀಗ ಈ ದಾಳಿಯು ಇರಾನ್‌ ನಡೆಸಿರುವುದಾಗಿ ಯುಎಸ್‌ ರಕ್ಷಣಾ ಇಲಾಖೆ ಭಾನುವಾರ ತಿಳಿಸಿದೆ ಎಂದು ವರದಿಯಾಗಿದೆ.

 

ಈ ಹಡಗು ಮಂಗಳೂರಿಗೆ ಬರುತ್ತಿದ್ದು, ಜಪಾನ್‌ ಒಡೆತನ ಹೊಂದಿದೆ. ಇದರಲ್ಲಿ ಕಚ್ಛಾ ತೈಲ ಸಾಗಿಸಲಾಗುತ್ತಿದ್ದು, ಗುಜರಾತ್‌ನ ಪೋರಬಂದರ್‌ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಶನಿವಾರ ಬೆಳಗ್ಗೆ 10 ಗಂಟೆಯ ಸುಮಾರಿಗೆ ಈ ದಾಳಿ ನಡೆದಿದ್ದು, ಅದೃಷ್ಟವಶಾತ್‌ ಯಾವುದೇ ಪ್ರಾಣ ಹಾನಿ ಆಗಿಲ್ಲ ಎಂದು ವರದಿಯಾಗಿತ್ತು. ಈ ಹಡಗು ಡಿ.25 ರಂದು ಮಂಗಳೂರಿಗೆ ಬರುವ ನಿರೀಕ್ಷೆ ಇತ್ತು ಎಂದು ವರದಿಯಾಗಿದೆ.

Leave A Reply

Your email address will not be published.