Gas Geyser Leaks: ಮಗುವಿನ ಜೊತೆ ಸ್ನಾನಕ್ಕೆಂದು ಹೋದ ಗರ್ಭಿಣಿ ಮಹಿಳೆ, ಸೋರಿಕೆಯಾದ ವಿಷಾನಿಲ, ಮಹಿಳೆ ಸಾವು, ಮಗು ಗಂಭೀರ!!!

Gas Geyser Leaks: ಗ್ಯಾಸ್‌ ಗೀಸರ್‌ ಲೀಕ್‌ ಆಗಿ ಮೃತ ಹೊಂದಿದ ಕೆಲವೊಂದು ಘಟನೆಗಳು ವರದಿಯಾಗಿರುವುದನ್ನು ನೀವು ಕೇಳಿರಬಹುದು. ಈಗ ಅಂತಹುದೇ ಒಂದು ದುರದೃಷ್ಟಕರ ಘಟನೆಯೊಂದು ಬೆಂಗಳುರಿನ (Bangalore News) ಅಶ್ವತ್‌ ನಗರದಲ್ಲಿ ನಡೆದಿದೆ.

 

ಮಗು ಜೊತೆ ಸ್ನಾನಕ್ಕೆಂದು ಹೋದ ಗರ್ಭಿಣಿ ತಾಯಿ ಗ್ಯಾಸ್‌ ಗೀಸರ್‌ ಲೀಕ್‌ ಆಗಿ (gs geyser leaks) ಆಗಿ ಪ್ರಜ್ಞೆ ತಪ್ಪಿ ಬಾತ್‌ರೂಂನಲ್ಲೇ ಮೃತ ಹೊಂದಿದ್ದಾರೆ. ರಮ್ಯ(23) ಎಂಬಾಕೆಯೇ ಮೃತ ಮಹಿಳೆ.

ರಮ್ಯ ಅವರು ತನ್ನ ನಾಲ್ಕು ವರ್ಷದ ಮಗುವಿನೊಟ್ಟಿಗೆ ಸ್ನಾನ ಮಾಡಲೆಂದು ಬಾತ್‌ರೂಂಗೆ ಹೋಗಿದ್ದಾರೆ. ಆದರೆ ಈ ಸಮಯದಲ್ಲಿ ಗ್ಯಾಸ್‌ ಗೀಸರ್‌ನಿಂದ ವಿಷಾನಿಲ ಕಾರ್ಬನ್‌ ಮೋನಾಕ್ಸೈಡ್‌ ಸೋರಿಕೆಯಾಗಿದೆ. ಆದರೆ ಇದನ್ನು ತಿಳಿಯದೆ ಸ್ನಾನ ಮಾಡಲೆಂದು ಹೋಗಿದ್ದು, ಗೀಸರ್‌ ಸೋರಿಕೆಯಾದ ಕಾರಣ ಸ್ನಾನ ಮಾಡುತ್ತಲೇ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗಿಲ್ಲ.

ಗರ್ಭಿಣಿಯಾಗಿದ್ದ ರಮ್ಯಾ ಅವರ ಹೊಟ್ಟೆಯಲ್ಲಿದ್ದ ಮಗು ಕೂಡಾ ಗರ್ಭದಲ್ಲೇ ಮೃತ ಹೊಂದಿದೆ. ಇತ್ತ ನಾಲ್ಕು ವರ್ಷದ ಮಗು ಕೂಡಾ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದೆ. ಸದಾಶಿವ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Leave A Reply

Your email address will not be published.