Drone Attack: ಮಂಗಳೂರಿಗೆ ಬರುತ್ತಿದ್ದ ಹಡಗಿನ ಮೇಲೆ ಡ್ರೋನ್‌ ದಾಳಿ!!!

Drone Attack: ಮಂಗಳೂರು(Mangalore) ಕಡೆಗೆ ಬರುತ್ತಿದ್ದ ವ್ಯಾಪಾರಿ ಹಡಗಿನ ಮೇಲೆ ಡ್ರೋನ್‌ ದಾಳಿ(Drone Attack) ನಡೆದ ಘಟನೆಯೊಂದು ನಡೆದಿದೆ. ಅರೆಬಿಯನ್‌ ಸಮುದ್ರದಲ್ಲಿ(Arabian Sea) ವ್ಯಾಪಾರಿ ಹಡಗಿನ ಮೇಲೆ ಈ ದಾಳಿ ನಡೆದಿದೆ. ಈ ಹಡಗಿನಲ್ಲಿ 20 ಭಾರತೀಯ ಸಿಬ್ಬಂದಿ (Indian Crew) ಇದ್ದಾರೆಂದ ವರದಿಯಾಗಿದೆ. ದಾಳಿಗೊಳಗಾದ ಹಡಗಿನತ್ತ ಕರಾವಳಿ ಕಾವಲು ಪಡೆಯ ನೌಕೆ ಧಾವಿಸಿದೆ. ಈ ಕೃತ್ಯ ಯಾರು ಮಾಡಿದ್ದಾರೆಂದು ಇನ್ನೂ ತಿಳಿದು ಬಂದಿಲ್ಲ. ಈ ಘಟನೆ ಪೋರ್‌ಬಂದರ್‌ ಕರಾವಳಿಯಿಂದ 217 ನಾಟಿಕಲ್‌ ಮೈಲ್ಸ್‌ ದೂರದಲ್ಲಿ ನಡೆದಿದೆ.

 

ಸೌದಿ ಅರೇಬಿಯಾದ ಬಂದರಿಂದ ಕಚ್ಚಾ ತೈಲವನ್ನು ಹೊತ್ತ ಹಡಗು ಮಂಗಳೂರು ಕಡೆಗೆ ಬರುತ್ತಿತ್ತು. ಡ್ರೋನ್‌ ದಾಳಿಯಿಂದ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿರುವುದಾಗಿಯೋ, ಬೆಂಕಿ ನಂದಿಸಲಾಗದೆ ಕಾರ್ಯನಿರ್ವಹಣೆಗೆ ಅಡ್ಡಿಯಾಗಿದೆ. ಆದರೆ ಹಡಗಿನಲ್ಲಿದ್ದ ಎಲ್ಲ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

Leave A Reply

Your email address will not be published.