Rahul Gandhi: ರಾಹುಲ್ ಗಾಂಧಿ ಬಗ್ಗೆ ಭಾರೀ ದೊಡ್ಡ ಆರೋಪ ಮಾಡಿದ ಮಮತಾ ಬ್ಯಾನರ್ಜಿ- ದೋಸ್ತಿಗಳ ನಡುವೆಯೇ ಶುರುವಾಯ್ತ ಕಲಹ ?!

Rahul Gandhi: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮಿಮಿಕ್ರಿ ಗದ್ದಲ ವಿಚಾರದಲ್ಲಿ ತಮ್ಮ ಪಕ್ಷದ ಸಂಸದ ಕಲ್ಯಾಣ್ ಬ್ಯಾನರ್ಜಿ ಪರ ಮಾತನಾಡಿದ್ದು, ರಾಹುಲ್‌ ಗಾಂಧಿ ವಿಡಿಯೋ ರೆಕಾರ್ಡ್‌ ಮಾಡಿದ್ದೇ ಇಷ್ಟೆಲ್ಲ ಅವಾಂತರಕ್ಕೆ ಕಾರಣ ಎಂದು ಪರೋಕ್ಷವಾಗಿ ಕಾಂಗ್ರೆಸ್‌ ನಾಯಕನ ಮೇಲೆ ಆರೋಪ ಮಾಡಿದ್ದಾರೆ.

ತಮ್ಮ ಪಕ್ಷದ ಸಂಸದ ಕಲ್ಯಾಣ್‌ ಬ್ಯಾನರ್ಜಿಯನ್ನು ಉಪರಾಷ್ಟ್ರಪತಿಯ ಮಿಮಿಕ್ರಿ ಗದ್ದಲ ವಿಚಾರದಲ್ಲಿ ಸಮರ್ಥನೆ ಮಾಡಿಕೊಂಡಿದ್ದಾರೆ. ಅಲ್ಲದೆ, ರಾಹುಲ್ ಗಾಂಧಿ ತಮ್ಮ ಮೊಬೈಲ್ ಫೋನ್ ಕ್ಯಾಮೆರಾದಲ್ಲಿ ಅದನ್ನು ರೆಕಾರ್ಡ್ ಮಾಡದಿದ್ದರೆ ಯಾರಿಗೂ ಅದು ತಿಳಿಯುತ್ತಿರಲಿಲ್ಲ ಎಂದು ಪಶ್ಚಿಮ ಬಂಗಾಳ ಸಿಎಂ ಹೇಳಿದ್ದಾರೆ.

ಈ ಮಧ್ಯೆ, ತೃಣಮೂಲ ಲೋಕಸಭಾ ಸಂಸದ ಕಲ್ಯಾಣ್ ಬ್ಯಾನರ್ಜಿ ಸಹ ಈ ವಿಚಾರವಾಗಿ ಮಾತನಾಡಿದ್ದು ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಅವರನ್ನು ನೋಯಿಸುವ ಅಥವಾ ಅಗೌರವಿಸುವ ಯಾವುದೇ ಉದ್ದೇಶವನ್ನು ಹೊಂದಿರಲಿಲ್ಲ ಎಂದು ಹೇಳಿದ್ದಾರೆ.

ಈ ಗದ್ದಲದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಮತಾ ಬ್ಯಾನರ್ಜಿ, ನಾವು ಪ್ರತಿಯೊಬ್ಬರನ್ನೂ ಗೌರವಿಸುತ್ತೇವೆ. ಇದು ಯಾರನ್ನೂ ಅಗೌರವ ಮಾಡುವುದಲ್ಲ. ಇದನ್ನು ರಾಜಕೀಯವಾಗಿ ಮತ್ತು ಸಾಂದರ್ಭಿಕವಾಗಿ ತೆಗೆದುಕೊಳ್ಳಬೇಕು. ರಾಹುಲ್ ಜೀ ಇದನ್ನು ರೆಕಾರ್ಡ್ ಮಾಡದಿದ್ದರೆ ಜನರಿಗೆ ಇದರ ಬಗ್ಗೆ ತಿಳಿಯುತ್ತಿರಲಿಲ್ಲ ಎಂದು ಹೇಳಿದರು.

ಇದನ್ನು ಓದಿ: New year Party ಗೆ ಹೋಗ್ತೀರಾ? ಹಾಗಾದ್ರೆ ನಿಮ್ಮ ಮುಖದ ಕಾಂತಿಯನ್ನು ಹೀಗೆ ಹೆಚ್ಚಿಸಿಕೊಳ್ಳಿ!

ಈ ವೇಳೆ ಮಿಮಿಕ್ರಿ ವಿಚಾರ ಗದ್ದಲ ಹೆಚ್ಚಾಗುತ್ತಿದ್ದಂತೆ ಮಮತಾ ಬ್ಯಾನರ್ಜಿ – ಪ್ರಧಾನಿ ಭೇಟಿಯಲ್ಲಿ ವಿವಾದಕ್ಕೀಡಾಗಿರುವ ಸಂಸದ ಕಲ್ಯಾಣ್ ಬ್ಯಾನರ್ಜಿಯನ್ನು ಈ ಭೇಟಿಯ ವೇಳೆ ಕರೆದೊಯ್ದಿರಲಿಲ್ಲ. ಆ ಪಟ್ಟಿಯಲ್ಲಿ ಇವರ ಹೆಸರು ಇದ್ದರೂ ಕೈಬಿಟ್ಟಿದ್ದಕ್ಕೆ ಕಾರಣ ಮಿಮಿಕ್ರಿ ಗದ್ದಲ ಎನ್ನಲಾಗಿದೆ.

ಈ ವಿಚಾರವಾಗಿ ಮಾತನಾಡಿದ್ದ ಕಲ್ಯಾಣ್ ಬ್ಯಾನರ್ಜಿ, ತಾನು ಯಾರನ್ನೂ ನೋಯಿಸುವ ಉದ್ದೇಶವನ್ನು ಹೊಂದಿಲ್ಲ ಎಂದಿದ್ದರ. ಹಾಗೂ, ಉಪರಾಷ್ಟ್ರಪತಿ ಹುದ್ದೆಗೆ ಮಾಡಿದ ಅವಮಾನ ಎಂದು ಜಗದೀಪ್ ಧನಕರ್ ಇದನ್ನ ಹೇಳಿದ್ದು , ಟಿಎಂಸಿ ಸಂಸದ ತಮ್ಮ ಕೃತ್ಯಕ್ಕೆ ಕ್ಷಮೆಯಾಚಿಸಲಿಲ್ಲ ಎಂದಿದ್ದಾರೆ .

Leave A Reply

Your email address will not be published.