LPG Cylinder Subsidy E KYC Rumor: ಸಿಲಿಂಡರ್ ಕೊಳ್ಳಲು ಸಹಾಯಧನ, ಸಬ್ಸಿಡಿ ಪಡೆಯಲು ಇ-ಕೆವೈಸಿ ಕಡ್ಡಾಯ ವಿಚಾರ- ಸರ್ಕಾರದಿಂದ ಹೊರಬಿತ್ತು ಮಹತ್ವದ ವಿಚಾರ !!

Share the Article

LPG Cylinder Subsidy E KYC Rumor: ರಾಜ್ಯಾದ್ಯಂತ ಸದ್ಯ ಪ್ರಧಾನಿ ಮೋದಿ ಎಲ್‌ಪಿಜಿ ಸಿಲಿಂಡರ್‌ ಸಬ್ಸಿಡಿ ಕೊಡುತ್ತಾರೆ ಎಂಬ ವದಂತಿ ಜೋರಿದೆ. ಈ ಹಿನ್ನೆಲೆ ಗ್ಯಾಸ್‌ ಏಜೆನ್ಸಿಗಳ ಮುಂದೆ ಇ ಕೆವೈಸಿ ಮಾಡಿಸಲು ಸಾಕಷ್ಟು ಮಂದಿ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಕರಾವಳಿ ಜಿಲ್ಲೆಗಳು, ಉತ್ತರ ಕರ್ನಾಟಕ ಹಾಗೂ ಗಡಿ ಜಿಲ್ಲೆಗಳಲ್ಲಿಯೂ ಈ ಸುಳ್ಳು ಮಾಹಿತಿ ಹರಿದಾಡುತ್ತಿದೆ.

ಗ್ಯಾಸ್ ಸಂಪರ್ಕ ಇದ್ದವರು ತಮ್ಮ ಅಧಾರ್ ಕಾರ್ಡ್ ಬ್ಯಾಂಕ್ ಪಾಸ್ ಪುಸ್ತಕ ಮತ್ತು ಗ್ಯಾಸ್ ಏಜೆನ್ಸಿ ನೀಡಿದ ಪುಸ್ತಕವನ್ನು ಡಿಸೆಂಬರ್ 31 ರ ಒಳಗಡೆ ಗ್ಯಾಸ್ ನೀಡುವ ಎಜೆನ್ಸಿ ಬಳಿ ಹೋಗಿ KYC (Gas KYC) ಮಾಡಿಸಬೇಕೆಂಬ ಸಂದೇಶವೊಂದು (LPG Cylinder Subsidy E KYC Rumor) ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ಸುಳ್ಳು ಸಂದೇಶ ಎಂದು ಆಹಾರ ಇಲಾಖೆ ಸ್ಪಷ್ಟಪಡಿಸಿದೆ.

ಇದನ್ನು ಓದಿ: Interesting Fact: ಶತಮಾನಗಳಿಂದಲೂ ಡೈನೋಜರ್ ಮೊಟ್ಟೆಗಳು ಈ ಊರಲ್ಲಿದೆಯಂತೆ !! ಅದನ್ನು ಇಲ್ಲಿನ ಜನ ಏನ್ಮಾಡ್ತಾರೆ ಎಂದು ತಿಳಿದ್ರೆ ನೀವೆ ಶಾಕ್ !!

ಯಾಕೆಂದರೆ ಆಧಾರ್ ದೃಢೀಕರಣವು ಉಜ್ವಲ ಗ್ಯಾಸ್ ಸಂಪರ್ಕ ಪಡೆದಿರುವವರಿಗೆ ಮಾತ್ರ ಕಡ್ಡಾಯವಾಗಿದೆ. ಉಳಿದ ಬಳಕೆದಾರರಿಗೆ ಗ್ಯಾಸ್ ಸಬ್ಸಿಡಿಯ ಬಗ್ಗೆ ಪ್ರಸ್ತುತ ಯಾವುದೇ ಘೋಷಣೆ ಆಗಿರುವುದಿಲ್ಲ. ಗ್ಯಾಸ್ ಬಳಕೆದಾರರು ಯಾವುದೇ ಗೊಂದಲಕ್ಕೊಳಗಾಗಬಾರದು ಎಂದು ಆಹಾರ ಇಲಾಖೆಯ ಉಪನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.

ಪಿಎಂಯುವೈ (ಉಜ್ವಲ) ಫಲಾನುಭವಿಗಳಿಗೆ ಪ್ರತಿ ಸಿಲಿಂಡರಿಗೆ 300 ರೂ. ಸಹಾಯಧನ ನೀಡಲಾಗುತ್ತಿದೆ. ಉಳಿದಂತೆ ಯಾರಿಗೂ ಸಹಾಯಧನ ಕೊಡುತ್ತಿಲ್ಲ. ಎಚ್‌ಪಿ ಗ್ಯಾಸ್‌ ಏಜೆನ್ಸಿ ಪಾಲುದಾರ ವಿಷ್ಣು ಆಚಾರ್ಯರ ಪ್ರಕಾರ, ಇ ಕೆವೈಸಿ ಕಡ್ಡಾಯ. ಈ ನಿಟ್ಟಿನಲ್ಲಿ ಗ್ಯಾಸ್‌ ಪಾಸ್‌ ಬುಕ್ಕಿನೊಂದಿಗೆ ಆಧಾರ್‌ ನಕಲುಪ್ರತಿಯನ್ನು ಜನವರಿ ನಂತರವೂ ತಂದುಕೊಡಬಹುದು ಎನ್ನಲಾಗಿದೆ.

Leave A Reply