Public exam: ಕೊರೋನಾ ಹೆಚ್ಚಳ ಭೀತಿ – ಶಾಲಾ ಮಕ್ಕಳ ಪಬ್ಲಿಕ್ ಪರೀಕ್ಷೆ ರದ್ದು ?!!

Public exam: ರಾಜ್ಯದಲ್ಲಿ ಕೊರೋನ ನಾಲ್ಕನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಪ್ರತಿದಿನವೂ ಹೆಚ್ಚಿನ ಕೇಸ್ ಗಳು ದಾಖಲಾಗುತ್ತಿದೆ. ಈಗಾಗಲೇ ಈ ಮಹಾಮಾರಿ ಎರಡು ಬಲಿ ಪಡೆದುಕೊಂಡಿದೆ. ಈ ಹಿನ್ನಲೆಯಲ್ಲಿ ಶಾಲಾ ಮಕ್ಕಳ ಪಬ್ಲಿಕ್ ಪರೀಕ್ಷೆ(public exam)ಗಳನ್ನು ರದ್ದು ಮಾಡುವಂತೆ ಪೋಷಕರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಹೌದು, ರಾಜ್ಯದಲ್ಲಿ ಕೊರೊನಾ(Covid 19)ಆತಂಕ ದಿನೇ ದಿನೇ ಹೆಚ್ಟಾಗುತ್ತಿದೆ. ಶಾಲೆಗಳಿಗೂ, ಪರೀಕ್ಷೆಗಳಿಗೂ ಇದರ ಭಯ ಶುರುವಾಗಿದೆ. ಅಲ್ಲದೆ ಕೆಲವು ತಿಂಗಳಲ್ಲಿ ಇದರ ರೂಪಾಂತರಿ ಹೆಚ್ಚಾಗಿ ಹರಡುತ್ತದೆ ಎಂದು ತಜ್ಞರು ಹೇಳಿರುವದರಿಂದ ಪರೀಕ್ಷೆ ಸಮಯದಲ್ಲಿ ಇದು ತುಂಬಾ ಅಪಾಯವನ್ನುಂಟುಮಾಡುತ್ತೆ. ಹೀಗಾಗಿ ಇದರ ಪರಿಣಾಮ ಮಕ್ಕಳಮೇಲಾಗುತ್ತೆ ಎಂಬ ಭಯ ಪೋಷಕರಿಗೆ ಶುರುವಾಗಿದೆ. ಹೀಗಾಗಿ ಸರ್ಕಾರ ಹೊರದಾಗಿ ಶುರು ಮಾಡಿರುವ ಬೋರ್ಡ್ ಪರೀಕ್ಷೆಗಳನ್ನು ರದ್ಧುಮಾಡಲು ಪೋಷಕರು ಮನವಿ ಮಾಡಿದ್ದಾರೆ.
ಪೋಷಕರ ಮನವಿಯನ್ನು ಮುಂದಿಟ್ಟುಕೊಂಡು ಬೆಂಗಳೂರಿನ ಖಾಸಗೀ ಶಾಲೆಯೊಂದು ಶಿಕ್ಷಣ ಇಲಾಖೆಗೆ ಪತ್ರ ಬರೆದಿದೆ. 5, 7, 9, 11 ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ಬೇಡ ಎಂದು ಮನವಿ ಮಾಡಿದೆ. ಜೊತೆಗೆ ಖಾಸಗೀ ಶಾಲಾ ಒಕ್ಕೂಟದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆಯವರು ಕೂಡ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ. ಈ ಎಲ್ಲಾ ಮನವಿಗಳನ್ನು ಪುರಸ್ಕರಿಸಿ ಸರ್ಕಾರ ಏನು ತೀರ್ಮಾನ ಕೈಗೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.