Home daily horoscope ಮನೆಯೊಳಗೆ ಚಿಟ್ಟೆ ಬಂದರೆ ಏನಾಗುತ್ತೆ? ಶಕುನನ ಅಥವಾ ಶುಭ ಶಕುನ?

ಮನೆಯೊಳಗೆ ಚಿಟ್ಟೆ ಬಂದರೆ ಏನಾಗುತ್ತೆ? ಶಕುನನ ಅಥವಾ ಶುಭ ಶಕುನ?

Hindu neighbor gifts plot of land

Hindu neighbour gifts land to Muslim journalist

ವಾಸ್ತು ಶಾಸ್ತ್ರವನ್ನು ಯಾವುದೇ ಕಾರಣಕ್ಕೂ ನಾವು ಕಡೆಗಣಿಸಲೇಬಾರದು. ಇದರಿಂದ ಹಲವಾರು ನಷ್ಟಗಳನ್ನು ಅನುಭವಿಸುವ ಸಾಧ್ಯತೆಗಳು ಕೂಡ ಇದೆ. ಈವರೆಗೂ ಮನೆಯ ಹತ್ತಿರ ಪಾರಿವಾಳ ಅಥವಾ ಕಾಗೆವೆಂದರೆ ಏನೆಲ್ಲಾ ಲಾಭವಿದೆ ಅಥವಾ ನಷ್ಟವಿದೆ ಎಂದು ತಿಳಿಸಲಾಗಿತ್ತು. ಇಂದು ಇಲ್ಲಿ ಕನ್ನಡದಲ್ಲಿ ಮನೆ ಒಳಗೆ ಚಿಟ್ಟೆ ಬಂದರೆ ಏನು ಅರ್ಥ ಎಂಬುದನ್ನು ತಿಳಿಯೋಣ ಬನ್ನಿ.

ಮನೆಯಲ್ಲಿ ಚಿಟ್ಟೆ ಯಾವಾಗಲೂ ಒಳ್ಳೆಯ ಶಕುನ ಎನ್ನಲಾಗುತ್ತದೆ. ಮುಖ್ಯವಾಗಿ ಗಾಢ ಬಣ್ಣದ ಚಿಟ್ಟೆಗಳು ಪ್ರಣಯಕ್ಕೆ ಸಂಬಂಧಿಸಿದ್ದು, ಇವುಗಳು ಮನೆಯ ಒಳಗೆ ಬಂದರೆ ದಾಂಪತ್ಯದಲ್ಲಿ ಪ್ರೀತಿ ಹೆಚ್ಚಾಗುತ್ತದೆ ಎಂದು ಅರ್ಥ.

ಇಷ್ಟೇ ಅಲ್ಲದೇ, ಈ ಗಾಢ ಬಣ್ಣದ ಚಿಟ್ಟೆಗಳು ವೃತ್ತಿ ಅಥವಾ ವ್ಯಾಪಾರಕ್ಕೆ ಸಂಬಂಧಿಸಿವೆ ಎನ್ನಲಾಗುತ್ತದೆ. ಆದರೆ ಬಿಳಿ ಚಿಟ್ಟೆಗಳು ಮನೆಯ ಮಾಲೀಕರಿಗೆ ಅದೃಷ್ಟ ಎಂದರ್ಥ. ಆದರೆ ಈ ಬಣ್ಣದ ಚಿಟ್ಟೆ ಮೇರಿಲ್ಯಾಂಡ್‌ನಲ್ಲಿ ಸಾವಿನ ಸಂಕೇತ ಎನ್ನಲಾಗುತ್ತದೆ.

ಫಿಲಿಪೈನ್ಸ್‌ನಲ್ಲಿ, ಮನೆಯೊಳಗೆ ಹಾರಿಹೋಗುವ ಮಚ್ಚೆಯುಳ್ಳ ಕಂದು ಬಣ್ಣದ ಚಿಟ್ಟೆ ಅದೃಷ್ಟದ ಸಂಕೇತ. ಬಹುಶಃ ಮನೆಯ ಮಾಲೀಕರು ಅಥವಾ ಸಂಬಂಧಿಕರಿಗೆ ಹಣಕಾಸಿನ ಲಾಭವನ್ನ ಈ ಚಿಟ್ಟೆ ನೀಡುತ್ತದೆ. ಮನೆಯೊಳಗೆ ಚಿಟ್ಟೆ ಬಂದರೆ ಕೆಲವೇ ದಿನಗಳಲ್ಲಿ ಈ ಒಂದು ಘಟನೆ ನಡೆಯುತ್ತದೆ ಎಂಬುದರ ಸೂಚನೆ. ಚಿಟ್ಟೆಗಳು ಮನುಷ್ಯನ ಏಳಿಗೆ ಸಂತೋಷದ ಸಂಕೇತ ಆಗಿರುತ್ತದೆ. ನಾವು ಎಲ್ಲಿಗೆ ಬೇಕಾದರೂ ಚಿಟ್ಟೆಗಳು ನಮ್ಮ ಮುಂದೆ ಬಂದರೆ ಅದು ಶುಭ ಸಂಕೇತ ಆಗಿರುತ್ತದೆ.

ಇದನ್ನು ಓದಿ: Kalaburgi: ಲಾರಿ – ಜೀಪ್ ನಡುವೆ ಭೀಕರ ಅಪಘಾತ! 5 ವರ್ಷದ ಮಗು ಸೇರಿ ನಾಲ್ವರ ದುರ್ಮರಣ

ಯಾವುದೇ ಕಾರಣಕ್ಕೂ ಅವುಗಳನ್ನು ಹಿಡಿದುಕೊಂಡು ಅವುಗಳಿಗೆ ತೊಂದರೆ ಕೊಡಬಾರದು. ಕೊಟ್ಟರೆ ನಮಗೂ ಸಮಸ್ಯೆ ಆಗುತ್ತದೆ. ಅವುಗಳನ್ನು ಹಾರಾಡಲು ಬಿಡಬೇಕು. ಹಾಗೆಯೇ ನಿಮ್ಮ ಜೀವನವು ಕೂಡ ನೆಮ್ಮದಿಯಿಂದ ಸಂತೋಷದಿಂದ ತುಂಬಿರುತ್ತದೆ.