Gruhalakshmi Scheme: ಗೃಹಲಕ್ಷ್ಮೀ 4ನೇ ಕಂತಿನ ಹಣ ಬಿಡುಗಡೆ- ಆದ್ರೆ ಈ ಜಿಲ್ಲೆಯವರಿಗೆ ಮಾತ್ರ !!

(Gruhalakshmi Scheme) ಅಡಿಯಲ್ಲಿ 3 ಕಂತಿನ ಹಣ ಮನೆಯ ಯಜಮಾನಿಯರ ಖಾತೆಗೆ ಜಮೆ ಆಗಿದೆ. ಇದೀಗ ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ವರ್ಗಾವಣೆಯಾಗುತ್ತಿದ್ದು, 4ನೇ ಕಂತಿನ ಹಣ ಈ ದಿನದೊಳಗೆ ಜಮಾ ಆಗುವ ಸಾಧ್ಯತೆ ಇದೆ.

ಹೌದು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈ ಹಿಂದೆ ಹೇಳಿದಂತೆ ಪ್ರತಿ ತಿಂಗಳು 20 ರಿಂದ 30 ತಾರೀಖಿನೊಳಗೆ ಹಣ ಜಮೆಯಾಗಲಿದೆ ಎಂದು ಭರವಸೆ ನೀಡಿದ್ದರು. ಈ ಹಿನ್ನೆಲೆ ಮುಂದಿನ ವಾರದಿಂದ ಈ ಪ್ರಕ್ರಿಯೆ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಸದ್ಯ 4ನೇ ಕಂತಿನ ಹಣ ಸಂದಾಯವಾಗುವ ಮೊದಲ ಜಿಲ್ಲೆಗಳು :
ಚಿತ್ರದುರ್ಗ
ಬೆಂಗಳೂರು
ಕೋಲಾರ
ಮಂಡ್ಯ
ಬೆಳಗಾವಿ
ಬಾಗಲಕೋಟೆ
ಧಾರವಾಡ
ಹಾಸನ
ಬಿಜಾಪುರ
ಉತ್ತರ ಕನ್ನಡ
ದಾವಣಗೆರೆ
ಗದಗ
ರಾಯಚೂರು
ಕಲಬುರಗಿ
ಮೈಸೂರು

ಇದನ್ನು ಓದಿ: Couple tips: ಮದುವೆಯಾದ ತಕ್ಷಣ ಈ ಗುಣಗಳನ್ನು ಬದಲಿಸಿಕೊಳ್ಳಿ, ಇದು ನಿಮ್ಮ ಜೀವನವನ್ನೇ ಚೇಂಜ್ ಮಾಡುತ್ತೆ!

ಸದ್ಯ ಗೃಹಲಕ್ಷ್ಮಿ ಯೋಜನೆಯಡಿ ಯಜಮಾನಿಯರಿಗೆ 2,000 ರೂ. ನೀಡಲಾಗುತ್ತಿದ್ದು, ಯಾರ ಖಾತೆಗೆ ಇನ್ನೂ ಕೂಡಾ ಹಣ ಬಂದಿಲ್ಲ ಅವರು ತಕ್ಷಣ ಗ್ರಾಮ ಪಂಚಾಯತ್ ಅಂಗನವಾಡಿ ಅಧಿಕಾರಿಗಳು, ಶಿಕ್ಷಕಿಯರನ್ನು ಸಂಪರ್ಕಿಸಬಹುದಾಗಿದೆ. ಸದ್ಯ ಯಾರಿಗೆಲ್ಲಾ ಹಣ ಬಂದಿಲ್ಲವೋ ಅವರಿಗೆ ಡಿಸೆಂಬರ್ ಒಳಗೆ ಹಣ ಹಾಕುವ ವ್ಯವಸ್ಥೆ ಮಾಡಿ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Leave A Reply

Your email address will not be published.