Kichcha Sudeep:ವಿಷ್ಣುವರ್ಧನ್ ಸ್ಮಾರಕದ ಬಗ್ಗೆ ನಟ ಸುದೀಪ್ ಪ್ರತಿಕ್ರಿಯೆ – ಪೋಸ್ಟ್ ಮಾಡಿ ಕಿಚ್ಚ ಹೇಳಿದ್ದೇನು ?!

Kichcha Sudeep: ಕನ್ನಡ ಚಿತ್ರರಂಗದ ಮೇರು ನಟರಾದ ಡಾ. ವಿಷ್ಣುವರ್ಧನ್ (Dr Vishnuvardhan) ಅವರ ಸ್ಮಾರಕ ಹಾಗೂ ಪುಣ್ಯಭೂಮಿಗೆ ಸಂಬಂಧಪಟ್ಟಂತೆ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಲೆ ಇದೆ. ಸದ್ಯ, ಈ ವಿಚಾರದ ಕುರಿತಾಗಿ ನಟ ಕಿಚ್ಚ ಸುದೀಪ್(Kichcha Sudeep) ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

 

ಡಾ. ವಿಷ್ಣುವರ್ಧನ್(dr Vishnuvardhan) ಅವರ ಅಂತ್ಯ ಸಂಸ್ಕಾರವಾದ(Vishnuvardhan Smaraka) ಅಭಿಮಾನ್‌ ಸ್ಟುಡಿಯೋದೊಳಗೆ ವಿಷ್ಣು ಅಭಿಮಾನಿಗಳಿಗೆ (vishnuvardhan fans)ಪ್ರವೇಶಿಸಲು ಅಭಿಮಾನ್‌ ಸ್ಟುಡಿಯೋದ ಮಾಲೀಕರು ಅವಕಾಶ ನೀಡುತ್ತಿಲ್ಲ ಎಂದು ವಿಷ್ಣು ಅಭಿಮಾನಿಗಳು ಆರೋಪ ಮಾಡುತ್ತಿದ್ದಾರೆ. ಪ್ರತಿವರ್ಷದ ವಿಷ್ಣು ದಾದ ಹುಟ್ಟುಹಬ್ಬ ಹಾಗೂ. ಪುಣ್ಯಸ್ಮರಣೆಯನ್ನು ಆಚರಿಸಲು ಅನೇಕ ಸಮಸ್ಯೆಗಳನ್ನು ಸೃಷ್ಟಿ ಮಾಡಲಾಗುತ್ತಿದೆ ಎಂದು ಅಭಿಮಾನಿಗಳು ಆರೋಪಿಸಿದ್ದು, ಹೀಗಾಗಿ.(ಡಿ.17) ಇಂದು ವಿಷ್ಣುವರ್ಧನ್ ಅವರ ಅಭಿಮಾನಿಗಳು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಗೆ ಮುಂದಾಗಿದ್ದಾರೆ. ಸದ್ಯ, ಈ ಕುರಿತು ಕಿಚ್ಚ ಸುದೀಪ್ (Kichcha Sudeep) ಅವರು ಬೆಂಬಲ ಸೂಚಿಸಿದ್ದಾರೆ.

‘ಡಾ. ವಿಷ್ಣು ಅಪ್ಪಾಜಿ ಸ್ಮಾರಕ ಕುರಿತು ಕಿಚ್ಚ ಸುದೀಪ್ ಪೋಸ್ಟ್ ಮಾಡುವ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ. ನನ್ನದು ಅಂದಿಗು – ಇಂದು ಒಂದೇ ತೆರನಾದ ನಿಲುವಾಗಿದ್ದು, ಮೈಸೂರಿನಲ್ಲಿ ಸ್ಮಾರಕವಾದರೂ, ಅಂತ್ಯ ಸಂಸ್ಕಾರಗೊಂಡ ಸ್ಥಳದಲ್ಲಿಯೂ ಪುಣ್ಯಭೂಮಿ ಆಗಬೇಕು. ಈ ವಿಷಯವಾಗಿ ಅಭಿಮಾನಿ ಸಂಘಗಳ ಹೋರಾಟಕ್ಕೆ ನನ್ನ ಪೂರ್ಣ ಬೆಂಬಲವಿದೆ. ನಾನೂ ನಿಮ್ಮಲ್ಲೊಬ್ಬ ಎಂದು ಭಾವಿಸಿಕೊಳ್ಳಿ, ನೀವು ಮುನ್ನಡೆಯಿರಿ. ನನ್ನಿಂದಾಗುವ ಎಲ್ಲವನ್ನೂ ಪುಣ್ಯಭೂಮಿಗಾಗಿ ಮಾಡುವೆ’ ಎಂದು ಕಿಚ್ಚ ಸುದೀಪ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

 

Leave A Reply

Your email address will not be published.