Ram Mandir: ಈ ದಿನದಿಂದ ಅಯೋಧ್ಯೆ ಕಡೆ ಹೊರಡಲಿದೆ 1,000 ರೈಲುಗಳು – ರಾಮನ ದರ್ಶನ ದೊರೆತ ಬಳಿಕವೂ ನಿಮಗೆ ಸಿಗಲಿದೆ ಈ ಭರ್ಜರಿ ಸೌಲಭ್ಯ !!

Ram Mandir: ಶ್ರೀ ರಾಮಮಂದಿರ (Ram Mandir)ದರ್ಶನ ಮಾಡಲು ಬಯಸುವ ಭಕ್ತರೇ ಗಮನಿಸಿ, ನಿಮಗೊಂದು ಗುಡ್ ನ್ಯೂಸ್ ಇಲ್ಲಿದೆ. ರಾಮಮಂದಿರ ಉದ್ಘಾಟನೆಯಾದ ಮೊದಲ 100 ದಿನಗಳವರೆಗೆ ಅಯೋಧ್ಯೆಗೆ(Ayodhya)ದೇಶದ ವಿವಿಧ ಭಾಗಗಳಿಂದ 1000 ರೈಲುಗಳನ್ನು(Train)ಓಡಿಸಲು ಭಾರತೀಯ ರೈಲ್ವೆ ಯೋಜನೆ (Indian railway)ಹಾಕಿಕೊಂಡಿದೆ.

 

 

ಜನವರಿ 22ರಂದು ರಾಮ್ ಮಂದಿರದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಜನವರಿ 23ರಿಂದ ಭಕ್ತರಿಗೆ ದೇವಾಲಯದೊಳಗೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಈ ನಡುವೆ, ಜನವರಿ 19ರಿಂದ ಈ ರೈಲುಗಳ ಕಾರ್ಯಾಚರಣೆ ಶುರುವಾಗಲಿದೆ. ಅಯೋಧ್ಯೆ ರೈಲು ನಿಲ್ದಾಣವನ್ನು(Railway Station)ನವೀಕರಿಸಲಾಗುತ್ತಿದ್ದು, ದಿನಕ್ಕೆ 50 ಸಾವಿರ ಪ್ರಯಾಣಿಕರು ಸಂಚಾರ ಮಾಡುವ ಸಾಮರ್ಥ್ಯ ಒಳಗೊಂಡಿದೆ.

 

ಯಾತ್ರಾರ್ಥಿಗಳು ಅಯೋಧ್ಯೆಗೆ ತಮ್ಮದೇ ಆದ ಬಾಡಿಗೆ ರೈಲನ್ನೂ ಬುಕ್‌ ಮಾಡಬಹುದು.ರಾಮ ಮಂದಿರ ಉದ್ಘಾಟನೆಯ ವೇಳೆಗೆ ಅಯೋಧ್ಯೆಯಲ್ಲಿ ಭಾರಿ ಸಂಖ್ಯೆಯ ಭಕ್ತರು ಭೇಟಿ ನೀಡುವ ಹಿನ್ನೆಲೆ ಭಕ್ತಾದಿಗಳಿಗೆ ಐಆರ್‌ಸಿಟಿಸಿ (IRCTC)ತಿಂಡಿ-ಊಟದ ಸೌಲಭ್ಯವಿರಲಿದೆ ಎನ್ನಲಾಗಿದೆ. ನವೀಕೃತ ರೈಲು ನಿಲ್ದಾಣ ಜನವರಿ 15ರಂದು ಸೇವೆಗೆ ಲಭ್ಯವಾಗಲಿದೆ ಎಂದು ತಿಳಿದುಬಂದಿದೆ.ಈ ರೈಲುಗಳು ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಪುಣೆ, ಕೋಲ್ಕತಾ, ನಾಗ್ಪುರ, ಲಖನೌ ಮತ್ತು ಜಮ್ಮು ಸೇರಿದಂತೆ ವಿವಿಧ ನಗರಗಳಿಂದ ಅಯೋಧ್ಯೆಗೆ ರೈಲುಗಳು ಸಂಚಾರ ನಡೆಸಲಿದೆ.

 

ರಾಮ ಮಂದಿರ ಭೇಟಿ ಬಳಿಕ ಭಕ್ತರು ಇದೇ ರೈಲುಗಳ ಮೂಲಕ ತಮ್ಮ ಸ್ವಂತ ಊರುಗಳಿಗೆ ಮರಳಲು ಕೂಡ ಅವಕಾಶವಿದೆ. ಪ್ರಯಾಣಿಕರ ಬೇಡಿಕೆಯ ಅನುಸಾರ ರೈಲು ಸಂಚಾರ ನಡೆಸಲಿದೆ ಎನ್ನಲಾಗಿದೆ. ರಾಮನ ಜನ್ಮಸ್ಥಳಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳು ಪವಿತ್ರ ಸರಯೂ ನದಿಯಲ್ಲಿ ವಿದ್ಯುತ್ ಕ್ಯಾಟಮರನ್‌ನಲ್ಲಿ (ವಿಲಾಸಿ ಹಡಗು) ಸಂಚರಿಸಲು ಅವಕಾಶವಿದ್ದು, ಕ್ಯಾಟಮರನ್ 100 ಜನರು ಸಂಚಾರ ನಡೆಸುವ ಸಂಚಾರ ಸಾಮರ್ಥ್ಯವನ್ನು ಒಳಗೊಂಡಿರುತ್ತದೆ.

Leave A Reply

Your email address will not be published.