Security Breach in LokSabha:ಬಹಳ ದೊಡ್ಡದಿದೆ ಸಂಸತ್ ನುಸುಳುಕೋರರ ಗ್ಯಾಂಗ್- ಕೊನೆಗೂ ಸಿಕ್ಕಿಬಿದ್ದ 6ನೇ ಆರೋಪಿ !!

Security Breach In LokSabha: ಲೋಕಸಭೆಯಲ್ಲಿ ಉಂಟಾದ ಭದ್ರತಾ ಲೋಪ(Security Breach)ಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಗರ್ ಶರ್ಮಾ( Sagar Sharma) ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಲೋಕಸಭೆಯಲ್ಲಿ ಬುಧವಾರ ಮಧ್ಯಾಹ್ನದ ವೇಳೆಗೆ ಸಾಗರ್ ಶರ್ಮಾ ಹಾಗೂ ಮನೋರಂಜನ್ ಎಂಬ ಇಬ್ಬರು ಯುವಕರು ಏಕಾಏಕಿ ಸದನದೊಳಗೆ ನುಗ್ಗಿ ಅಶ್ರುವಾಯು ಸಿಡಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಈ ಹಿಂದೆ ಬಂಧಿಸಲಾಗಿತ್ತು. ಇದೀಗ, ಈ ಪ್ರಕರಣದ ಆರನೇ ಆರೋಪಿ ಮಹೇಶ್ ಕುಮಾವತ್‌ ಅವರನ್ನು ದೆಹಲಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.

 

 

ರಾಜಸ್ಥಾನದ ನಾಗೌ‌ರ್ ಜಿಲ್ಲೆಯ ನಿವಾಸಿ ಎನ್ನಲಾದ ಆರೋಪಿ ಮಹೇಶ್ ಕುಮಾವತ್‌ ದಾಳಿ ಮಾಡುವ ಸಲುವಾಗಿ ಡಿಸೆಂಬರ್ 13 ರಂದು ದೆಹಲಿಗೆ ಬಂದಿದ್ದನಂತೆ.ಈ ಘಟನೆಯ ಬಳಿಕ ಪ್ರಮುಖ ಸಂಚುಕೋರ ಲಲಿತ್ ಝಾ ದೆಹಲಿಯಿಂದ ತಲೆಮರೆಸಿಕೊಂಡಿದ್ದ. ಮೊದಲು ಬಂಧನಕೊಳ್ಳಗಾದ ನಾಲ್ವರು ಆರೋಪಿಗಳ ಮೊಬೈಲ್ ಫೋನ್ಗಳನ್ನು ನಾಶಪಡಿಸುವ ಕೃತ್ಯದಲ್ಲಿ ಮಹೇಶ್ ಲಲಿತ್ ಅವರೊಂದಿಗೆ ಸೇರಿಕೊಂಡಿದ್ದ ಎನ್ನಲಾಗಿದೆ. ಲಲಿತ್ ಮತ್ತು ಮಹೇಶ್ ಇಬ್ಬರೂ ಗುರುವಾರ ನವದೆಹಲಿ ಪ್ರದೇಶದ ಪೊಲೀಸ್ ಠಾಣೆಯಲ್ಲಿ ಒಂದೇ ಬಾರಿಗೆ ಶರಣಾಗಿದ್ದರು. ತಮ್ಮ ಗುಂಪಿನ ಸದಸ್ಯರು ಲೋಕಸಭೆಯನ್ನು ಪ್ರವೇಶಿಸುವ ಸಂದರ್ಭ ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಿದ ಆರೋಪದಲ್ಲಿ ಬಂಧಿಸಲ್ಪಟ್ಟ ನೀಲಂ ದೇವಿ ಅವರೊಂದಿಗೆ ಮಹೇಶ್ ನಿರಂತರ ಸಂಪರ್ಕದಲ್ಲಿದ್ದ ಎನ್ನಲಾಗಿದೆ.

Leave A Reply

Your email address will not be published.