Delhi Muder: ದೆಹಲಿಯಲ್ಲೊಂದು ಮನಮಿಡಿವ ಘಟನೆ – 6 ಮಂದಿ ಅಪ್ರಾಪ್ತ ಬಾಲಕರಿಂದ ಗೆಳೆಯನ ಕಗ್ಗೊಲೆ !! ಕಾರಣ ಮಾತ್ರ ಬೆಚ್ಚಿಬೀಳಿಸುತ್ತೆ!!

Delhi Muder: ದೆಹಲಿಯಲ್ಲಿ(Delhi)ಆರು ಮಂದಿ ಸ್ನೇಹಿತರು 17ವರ್ಷದ ಅಪ್ರಾಪ್ತ ಬಾಲಕನೊಬ್ಬನನ್ನು ಹತ್ಯೆ (Delhi Muder)ಮಾಡಿರುವ ಘಟನೆ ವರದಿಯಾಗಿದೆ. ಸ್ನೇಹಿತರಿಂದ ಕೊಲೆಗೀಡಾದ ದುರ್ದೈವಿಯನ್ನು (death)ವಿವೇಕ್(17) ಎಂದು ಗುರುತಿಸಲಾಗಿದೆ.

 

 

ವಿವೇಕ್ ಮನೆಯಿಂದ ಹೊರಹೋಗುವಾಗ ತಂದೆಯನ್ನು ಭೇಟಿಯಾಗಲು ಹೋಗುವುದಾಗಿ ಸುಳ್ಳು ಹೇಳಿದ್ದನಂತೆ. ಎಷ್ಟೋ ಹೊತ್ತಾದರೂ ಕೂಡ ಮಗ ಮನೆಗೆ ಹಿಂದಿರುಗದ ಹಿನ್ನೆಲೆ ಪೋಷಕರು ಆತನಿಗೆ ಅನೇಕ ಬಾರಿ ಕರೆ ಮಾಡಿದ್ದಾರೆ. ಆಗ ಮೊಬೈಲ್ ಸ್ವಿಚ್ಡ್ ಆಫ್ ಎಂದು ಬರುತ್ತಿತ್ತು ಎನ್ನಲಾಗಿದೆ. ವಿವೇಕ್ ಸ್ನೇಹಿತರಲ್ಲಿ ಒಬ್ಬ ಮದ್ಯಪಾನ ಮಾಡಲು ವಿವೇಕ್ ಅನ್ನು ಕರೆಸಿಕೊಂಡಿದ್ದು, ವಿವೇಕ್ ನನ್ನು ಸತ್ಪುಲಾ ಪಾರ್ಕ್ಗೆ ಕರೆದೊಯ್ದು ಐವರು ಆರೋಪಿಗಳು ಹೊಂಚು ಹಾಕಿ ಹತ್ಯೆಗೆ ಉದ್ಯಾನದಲ್ಲಿ ಕಾದು ಕುಳಿತಿದ್ದರಂತೆ.

 

ವಿವೇಕ್ ಪಾರ್ಕ್ ಒಳಗೆ ಬಂದ ಕೂಡಲೇ ಚಾಕು ಮತ್ತು ಇಟ್ಟಿಗೆಗಳಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇದಾದ ನಂತರ ಆರು ಮಂದಿ ಸ್ನೇಹಿತರು ಸೇರಿಕೊಂಡು ವಿವೇಕ್ ಅನ್ನು ಚಾಕುವಿನಿಂದ ತಿವಿದು, ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ದೇಹದ ಮುಖ, ಕುತ್ತಿಗೆ, ಎದೆ ಮತ್ತು ಹೊಟ್ಟೆಯ ಮೇಲೆ ಚಾಕು ಗಾಯಗಳಿವೆ ಎಂದು ಉಪ ಪೊಲೀಸ್ ಆಯುಕ್ತ (ದಕ್ಷಿಣ) ಚಂದನ್ ಚೌಧರಿ ಮಾಹಿತಿ ನೀಡಿದ್ದಾರೆ. ಶುಕ್ರವಾರ ಬೆಳಗ್ಗೆ ಸತ್ಪುಲಾ ಪಾರ್ಕ್‌ನಲ್ಲಿ ಮೃತದೇಹ ಪತ್ತೆಯಾದ ಕುರಿತು ಕುರಿತು ಪಿಸಿಆರ್ ಕರೆ ಬಂದ ಹಿನ್ನೆಲೆ ಖಿರ್ಕಿ ಗ್ರಾಮದ ಬಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದಾಗ ಹೊಟ್ಟೆ, ಎದೆ, ಕುತ್ತಿಗೆ ಮತ್ತು ಮುಖದ ಮೇಲೆ ಗಾಯದ ಗುರುತು ಕಂಡುಬಂದಿದೆ. ಸದ್ಯ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಅಪ್ರಾಪ್ತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Leave A Reply

Your email address will not be published.