Good News For Students: 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ – ಇನ್ಮುಂದೆ ಇರೋದಿಲ್ಲ ನಿಮಗೆ ಈ ಟೆನ್ಶನ್
Good News For Students: ಪಠ್ಯಪುಸ್ತಕಗಳಿಂದ ಮಕ್ಕಳ ಶಾಲಾ ಬ್ಯಾಗ್ ಹೆಚ್ಚಾಗಿರುವ ಕುರಿತು, ರಾಜ್ಯದ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯು ಸಿಹಿಸುದ್ದಿ (Good News For Students) ನೀಡಿದ್ದು, ಮಕ್ಕಳ ಬ್ಯಾಗ್ ಹೊರೆ ಕಡಿಮೆ ಮಾಡುವ ಕುರಿತಂತೆ ಮಹತ್ವದ ಕ್ರಮಗಳನ್ನು ಕೈಗೊಂಡಿದೆ.
ಹೌದು, ಪಠ್ಯಪುಸ್ತಕಗಳಿಂದ ಮಕ್ಕಳ ಶಾಲಾ ಬ್ಯಾಗ್ ಹೆಚ್ಚಾಗಿರುವ ಕುರಿತು ನಿರ್ದೇಶಕರು, ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯ ನಿರ್ಣಯ ಮಂಡಳಿ, ಮಲ್ಲೇಶ್ವರಂ, ಬೆಂಗಳೂರುರವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿ ಅಧ್ಯಕ್ಷರೊಂದಿಗೆ ಆಡಳಿತ ಮಂಡಳಿಯು ಚರ್ಚಿಸಿ, ಆ ಸಂದರ್ಭದಲ್ಲಿ ಸದರಿ ಸಮಿತಿಯ ಅಧ್ಯಕ್ಷರು ಪ್ರಸ್ತುತ ಇರುವ ಪಠ್ಯಪುಸ್ತಕಗಳನ್ನು ಸಂಕಲನಾತ್ಮಕ ಮೌಲ್ಯ ಮಾಪನ 1 ಮತ್ತು 2 ಮಾದರಿಯಲ್ಲಿ ಸಿದ್ದಪಡಿಸಿದ್ದಲ್ಲಿ ಇರುವ ಅನುಕೂಲತೆಗಳ ಬಗ್ಗೆ ವರದಿಯನ್ನು ಸಲ್ಲಿಸಿರುವುದಾಗಿ ಆಡಳಿತ ಮಂಡಳಿಗೆ ವಿವರಿಸಿದರು.
ಇದನ್ನು ಓದಿ: Karnataka Holiday List: ರಾಜ್ಯ ಸರಕಾರದದಿಂದ 2024ರ ರಜಾದಿನಗಳ ಅಧಿಕೃತ ಘೋಷಣೆ – ಇಲ್ಲಿದೆ ನೋಡಿ ‘ಸಾರ್ವತ್ರಿಕ ರಜೆ’ ಪಟ್ಟಿ
ಆಡಳಿತ ಮಂಡಳಿಯು ಈ ಬಗ್ಗೆ 4 ವಿಭಾಗಗಳಲ್ಲಿನ ಆಯ್ದ ಶಾಲೆಯ ಆಯ್ಕೆ ತರಗತಿಗೆ 50 ಪ್ರತಿಗಳನ್ನು ಸರಬರಾಜು ಮಾಡಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಿ ಇದರಿಂದ ಉಂಟಾಗುವ ಸಾಧಕ-ಬಾಧಕಗಳ ಬಗ್ಗೆ, ಪರಿಶೀಲಿಸಿ 15 ದಿನಗಳೊಳಗಾಗಿ ವರದಿ ನೀಡಲು ಸದರಿ ಸಮಿತಿಗೆ ಸೂಚಿಸಿತು. ಸದರಿ ಪುಸ್ತಕಗಳ ಪ್ರತಿಗಳನ್ನು ಮುದ್ರಿಸಿ ಸರಬರಾಜು ಮಾಡಲು ದರಪಟ್ಟಿ ಕರೆದು ಕ್ರಮವಹಿಸಲು ಹಾಗೂ ಇದಕ್ಕೆ ತಗಲುವ ವೆಚ್ಚವನ್ನು ಕರ್ನಾಟಕ ಪಠ್ಯಪುಸ್ತಕ ಸಂಘದಲ್ಲಿ ಲಭ್ಯವಿರುವ ನಿಧಿಯಿಂದ ಭರಿಸಲು ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಪಠ್ಯಪುಸ್ತಕ ಸಂಘ(ರಿ), ಬೆಂಗಳೂರು ರವರಿಗೆ ಸೂಚಿಸಿತು ಹಾಗೂ ಸಮಿತಿಯು ಸಲ್ಲಿಸುವ ವರದಿಯ ಆಧಾರದ ಹಿನ್ನೆಲೆಯಲ್ಲಿ ಸರ್ಕಾರಕ್ಕೆ, ಸೂಕ್ತ ಪ್ರಸ್ತಾವನೆ ಸಲ್ಲಿಸಿ ಆದೇಶ ಪಡೆಯಲು ಆಡಳಿತ ಮಂಡಳಿಯು ಸೂಚಿಸಿತು.
ಮೇಲೆ ಓದಲಾದ ಕ್ರಮಾಂಕ(2)ರಲ್ಲಿ ಶಾಲಾ ಬ್ಯಾಗ್ ನಲ್ಲಿ ಮಕ್ಕಳು ಕೊಂಡೊಯ್ಯುವ ಪಠ್ಯವುಸ್ತಕಗಳ ತೂಕ ಕಡಿಮ ಮಾಡುವ ಉದ್ದೇಶದಿಂದ 1 ರಿಂದ 10ನೇ ತರಗತಿಯವರೆಗಿನ ಪಠ್ಯಪುಸ್ತಕಗಳನ್ನು ಮೌಲ್ಯಮಾಪನ ಮತ್ತು ಸಂಕಲನಾತ್ಮಕ ಮೌಲ್ಯಮಾಪನವಾರು ವಿಂಗಡಿಸುವ ಕುರಿತು ಸಾಧಕ ಬಾಧಕಗಳನ್ನು ಅಧ್ಯಯನ ಮಾಡಲು, ಮಾನ್ಯ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆರವರು ಸಮಿತಿಯನ್ನು ರಚಿಸಿ ಆದೇಶ ಹೊರಡಿಸಿದ್ದು ಸಮಿತಿಯು 06.10.2023 ರಂದು ಸಭೆ ಸೇರಿ ಸರ್ಕಾರಿ ಆದೇಶದಲ್ಲಿ ಆಯಾ ತರಗತಿಗಳಿಗೆ ನಿರ್ಧರಿಸಿರುವ ಶಾಲಾ ಬ್ಯಾಗ್‌ನ ನಿರ್ದಿಷ್ಟ ಸುಮಾರು ಅರ್ಧದಷ್ಟು ತೂಕವು ಪಠ್ಯಪುಸ್ತಕಗಳಾಗಿರುವುದರಿಂದ, ಪಠ್ಯಪುಸ್ತಕಗಳ ತೂಕವನ್ನು ಕಡಿಮೆ ಮಾಡುವ ಕುರಿತು ಕೆಳಕಂಡ ಅಂಶಗಳನ್ನು ಚರ್ಚಿಸಲಾಯಿತು.
ಅದರಂತೆ, ಪಠ್ಯಪುಸ್ತಕ ತೂಕವನ್ನು ಅಂದಾಜು 50% ರಷ್ಟು ಕಡಿಮೆ ಮಾಡಲು ಪ್ರತಿ ಪಠ್ಯಪುಸ್ತಕವನ್ನು ಭಾಗ-1 ಮತ್ತು ಭಾಗ-2 ಗಳನ್ನಾಗಿ ವಿಂಗಡಿಸಬಹುದು.
1 ರಿಂದ 10ನೇ ತರಗತಿಗಳ ವಿಷಯವಾರು ಎಲ್ಲಾ ಪಠ್ಯಪುಸ್ತಕಗಳನ್ನು ಪರಿಶೀಲಿಸಿ, ಪ್ರತಿ ವಿಷಯವನ್ನು ಸಂಕಲನಾತ್ಮಕ ಮೌಲ್ಯಮಾಪನವಾರು ವಿಭಾಗಿಸಬಹುದು. (FAT FA2 SAI ಮತ್ತು FA3 FAT SA2) ಉದಾಹರಣೆಗೆ:-ಯಾವುದಾದರೊಂದು ಪಠ್ಯಪುಸ್ತಕದ FA1 ಮತ್ತು FA2 ನಲ್ಲಿರುವ ಎಲ್ಲಾ ಪಾಠಗಳನ್ನು ಸೇರಿಸಿ SAI ಒಂದು ಪಠ್ಯಪುಸ್ತಕವಾಗಿ ಮುದ್ರಿಸಬಹುದು. ಅದೇ ರೀತಿ FAB ಮತ್ತು FA4 ನಲ್ಲಿರುವ ಎಲ್ಲಾ ಪಾಠಗಳನ್ನು ಸೇರಿಸಿ SA2 ಒಂದು ಪಠ್ಯಪುಸ್ತಕ ಮುದ್ರಿಸಬಹುದು ಆಗ ವರ್ಷಕ್ಕೆ ಎರಡು ಪಠ್ಯ ಪುಸ್ತಕಗಳು ಆಗುತ್ತವೆ. ಮಗುವು ಪಠ್ಯ ಪುಸ್ತಕದ ಭಾಗ-1 ನ್ನು ಮೊದಲ ಅರ್ಧ ವಾರ್ಷಿಕಕ್ಕೆ ಹಾಗೂ ಪಠ್ಯ ಪುಸ್ತಕದ ಭಾಗ-2 ನ್ನು ಎರಡನೇ ಅರ್ಧ ವಾರ್ಷಿಕಕ್ಕೆ ಬಳಕೆ ಮಾಡಬಹುದು ಎಂದು ತಿಳಿಸಿದೆ.