Security Breach in LokSabha: ಸಂಸತ್ ಪಾಸ್ ಗಾಗಿ 3 ತಿಂಗಳಿಂದಲೂ ಆರೋಪಿ ಮನೋರಂಜನ್, ಪ್ರತಾಪ್ ಸಿಂಹಗೆ ಏನು ಮಾಡಿದ್ದ ಗೊತ್ತಾ?!

Security Breach in LokSabha accused was seeking parliament pass from for 3 months from MP Pratap Simha's office

Security Breach in LokSabha: ಲೋಕಸಭಾ(LokSabha) ಕಲಾಪ ನಡೆಯುವ ಸಂದರ್ಭ ಸಂಸತ್‌ ಭವನದೊಳಗೆ ನುಗ್ಗಿದ್ದವರ (Security Breach in LokSabha)ಪೈಕಿ ಓರ್ವ ಮೈಸೂರಿನ ಮನೋರಂಜನ್‌ ಎನ್ನಲಾಗಿದ್ದು, ಮನೋರಂಜನ್ ಮೈಸೂರಿನ ಸಂಸದ ಪ್ರತಾಪಸಿಂಹ ಅವರ ಕಚೇರಿಯಿಂದ (MP Pratap Simhas office)ಮೂರು ಪಾಸ್ ಪಡೆದುಕೊಂಡಿದ್ದ ಎನ್ನಲಾಗಿದೆ. ಆ‌ ಮೂಲಕ ಸದನ ಪ್ರೇಕ್ಷಕರ ಗ್ಯಾಲರಿಯಲ್ಲಿ (who entered the Parliament)ಕೂತುಕೊಳ್ಳುವ ಅವಕಾಶ ಪಡೆದುಕೊಂಡಿದ್ದ ಎಂದು ವರದಿಗಳು ತಿಳಿಸಿವೆ.

 

ವೀಕ್ಷಕರ ಗ್ಯಾಲರಿಯಿಂದ ಲೋಕಸಭೆಯ ಚೇಂಬರ್‌ಗೆ ಜಿಗಿದ ಇಬ್ಬರು ಆರೋಪಿಗಳ ಕುರಿತಂತೆ ದಿನಕ್ಕೊಂದು ಹೊಸ ವಿಚಾರಗಳು ಹೊರಬೀಳುತ್ತಿವೆ. ಆರೋಪಿ ಮನೋರಂಜನ್ ಮೈಸೂರಿನ ಸಂಸದ ಪ್ರತಾಪ್ ಸಿಂಹ (MP Pratap Simha)ಕಚೇರಿಗೆ ಆಗಾಗ್ಗೆ ಭೇಟಿ ನೀಡುತ್ತಿದ್ದ ಎಂದು ಕೆಲವು ಬಲ್ಲ ಮೂಲಗಳು ವರದಿ ಮಾಡಿದೆ.ಲೋಕಸಭೆಯ ಸಾರ್ವಜನಿಕ ಗ್ಯಾಲರಿಯಿಂದ ಇಬ್ಬರು ವ್ಯಕ್ತಿಗಳು ಚೇಂಬರ್‌ಗೆ ಹಾರಿದ್ದಾರೆ ಎನ್ನಲಾಗಿದೆ. ಅವರಲ್ಲಿ ಒಬ್ಬನು ಮೇಜುಗಳ ಮೇಲೆ ಜಿಗಿದರೆ, ಇನ್ನೊಬ್ಬ ಗ್ಯಾಲರಿಯಿಂದ ನೇತಾಡುತ್ತಿದ್ದನಂತೆ. ಇದಾದ ಬಳಿಕ ಆತನೂ ಮೇಜಿನ ಮೇಲೆ ಜಿಗಿದ ಎಂದು ಸದನದಲ್ಲಿದ್ದ ಸಂಸದರು ತಿಳಿಸಿದ್ದಾರೆ. ಲೋಕಸಭೆಯ ಕಲಾಪ ನಡೆಯುತ್ತಿದ್ದಾಗ ವೀಕ್ಷಕರ ಗ್ಯಾಲರಿಯಿಂದ ಧುಮುಕಿದ ಇಬ್ಬರು ಆಗಂತುಕರು ಹಳದಿ ಬಣ್ಣದ ಹೊಗೆ ಸಿಂಪಡಿಸಿದ್ದರಂತೆ. ಇದೇ ವೇಳೆ, ಸಂಸತ್ತಿನ ಹೊರಗಡೆ ಮತ್ತಿಬ್ಬರು, ಬಣ್ಣದ ಹೊಗೆ ಸಿಂಪಡಿಸಿ, ಸರ್ವಾಧಿಕಾರ ನಡೆಯುವುದಿಲ್ಲ ಎಂದು ಘೋಷಣೆಯನ್ನೂ ಕೂಡ ಕೂಗಿದ್ದಾರೆ ಎನ್ನಲಾಗಿದೆ. ಈ ಎರಡೂ ಘಟನೆಯಲ್ಲಿ ಭಾಗಿಯಾಗಿದ್ದ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನು ಓದಿ: Liquor Price Hike: ಮದ್ಯಪ್ರಿಯರಿಗಿಲ್ಲ ಹೊಸ ವರ್ಷದ ಸಂಭ್ರಮ – ಜನವರಿಯಿಂದಲೇ ಈ ಎಲ್ಲಾ ಮದ್ಯದ ಬೆಲೆಯಲ್ಲಿ ಸಿಕ್ಕಾಪಟ್ಟೆ ಏರಿಕೆ !!

ಮನೋರಂಜನ್(Manoranjan) ಮೂರು ತಿಂಗಳಿನಿಂದ ಸಂಸತ್ ಪ್ರವೇಶದ ಪಾಸ್‌ಗಾಗಿ ಸಂಸದ ಪ್ರತಾಪ್ ಸಿಂಹ ಮತ್ತು ಅವರ ಕಚೇರಿಗೆ ದುಂಬಾಲು ಬಿದ್ದಿದ್ದ ಎಂದು ತಿಳಿದುಬಂದಿದೆ. ಮಂಗಳವಾರ ಮಧ್ಯಾಹ್ನ ದೆಹಲಿಯ ಪ್ರತಾಪ್ ಸಿಂಹ ಕಚೇರಿಗೆ ಬಂದಿದ್ದ ಮನೋರಂಜನ್ ನೊಂದಿಗೆ ಬಂದಿದ್ದ ಮತ್ತೊಬ್ಬ ಆರೋಪಿ ಸಾಗರ್ ಶರ್ಮಾ ಎಂದು ತಿಳಿದು ಬಂದಿದೆ. ಈತನನ್ನು ತನ್ನ ಸ್ನೇಹಿತನೆಂದು ಆರೋಪಿ ಮನೋರಂಜನ್ ಸಂಸದರ ಕಚೇರಿಗೆ ಪರಿಚಯಿಸಿದ್ದನಂತೆ.

ಹೊಸ ಸಂಸತ್ ಭವನವನ್ನು ನೋಡಬೇಕೆಂಬ ಮನವಿಯ ಅನುಸಾರ ಅವರಿಗೆ ಪಾಸ್‌ಗಳನ್ನು ನೀಡಲಾಗಿತ್ತು ಎಂದು ತಿಳಿದುಬಂದಿದೆ. ಲೋಕಸಭಾ ಕಲಾಪಕ್ಕೆ ನುಗ್ಗಿದ್ದ ಮೈಸೂರಿನ ಮನೋರಂಜನ್, ಕ್ರಾಂತಿಕಾರಿ ಪುಸ್ತಕಗಳ ಪ್ರೇಮಿಯಾಗಿದ್ದ ಎನ್ನಲಾಗಿದೆ.ಹೀಗಾಗಿ, ಬುಧವಾರ ಒಟ್ಟು ಮೂರು ಪಾಸ್‌ಗಳನ್ನು ವಿತರಿಸಲಾಗಿದ್ದು, ಮೂರನೇ ಪಾಸ್ ಪಡೆದಿದ್ದ ಮಹಿಳೆ ಮಗುವಿನ ಜೊತೆ ಬಂದಿದ್ದರಂತೆ. ಆದ್ರೆ, ಪಾಸ್‌ನಲ್ಲಿ ಮಗುವಿನ ಹೆಸರು ನಮೂದಿಸದೆ ಇದ್ದ ಹಿನ್ನೆಲೆ ಪ್ರವೇಶ ಸಿಕ್ಕಿರಲಿಲ್ಲ.

Leave A Reply

Your email address will not be published.